ಎಲ್ಲೆಡೆ ಲಿಪಿಕಾರ ಮೊಬೈಲ್ ಅಪ್ಲಿಕೇಷನ್ ಸುದ್ದಿ ಸದ್ದು

Posted By:
Subscribe to Oneindia Kannada

ಬೆಂಗಳೂರು, ಜುಲೈ 30: ಇನ್ಮುಂದೆ, ಇಂಗ್ಲೀಷ್, ಕಂಗ್ಲೀಷ್ ಬಳಕೆಗೆ ಮುಕ್ತಾಯ ಹಾಡಿ, ಲಿಪಿಕಾರ್ ಟೈಪಿಂಗ್ ಕಮ್ ವಾಯ್ಸ್ ಟು ಟೆಕ್ಸ್ಟ್ ಟೂಲ್ ಬಳಸಿ ಎಂಬ ಘೋಷಣೆ ಸದ್ಯ ಸಾಮಾಜಿಕ ಜಾಲ ತಾಣಗಳಲ್ಲಿ ಹೆಚ್ಚು ಜನಪ್ರಿಯತೆ ಗಳಿಸುತ್ತಿದೆ. ಏನಿದು ಲಿಪಿಕಾರ್ ಅಪ್ಲಿಕೇಷನ್ ಇಲ್ಲಿದೆ ವಿವರ...

ಧ್ವನಿಗ್ರಹಣ ಮಾಡಿಕೊಂಡು ಅದನ್ನು ಪಠ್ಯವಾಗಿ ಪರಿವರ್ತಿಸುವ ಹೊಸ ಮಾದರಿಯ ಸಾಧನಕ್ಕೆ ಬಹುತೇಕ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಲಿಪಿಕಾರ್ ಆಂಡ್ರಾಯ್ಡ್ ಹಾಗೂ ವಿಂಡೋಸ್ ಮಾದರಿ ಫೋನ್ ಗಳಲ್ಲಿ ಲಭ್ಯವಿದೆ. ಐಒಎಸ್ ನಲ್ಲಿ ಸದ್ಯಕ್ಕೆ ಲಭ್ಯವಿಲ್ಲ.

ಆನ್ ಲೈನ್ ನಲ್ಲಿ ಕನ್ನಡದಲ್ಲಿ ಬರೆಯಲು ಸಾಹಸ ಪಡುವ ಕಾಲ ಈಗಿಲ್ಲ. ಅನೇಕ ಟೂಲ್ ಗಳು ಲಭ್ಯವಿದೆ. ಅದೇ ಮಾದರಿಯಲ್ಲಿ ಲಿಪಿಕಾರ್ ಕೂಡಾ ಒಂದು ಅಪ್ಲಿಕೇಷನ್.

ಗೂಗಲ್‌ ಪ್ಲೇ ಸ್ಟೋರ್(lipikaar android keyboard ಎಂದು ಸರ್ಚ್ ಮಾಡಿ) ಮೂಲಕ ಉಚಿತವಾಗಿ 'ಲಿಪಿಕಾರ್ ಕನ್ನಡ' ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಕೀ ಬೋರ್ಡ್ ಗೊಂದಲ ನಿಮಗೆ ಬೇಕಿಲ್ಲ. QWERTYಮಾದರಿ ಇಂಗ್ಲೀಷ್ ಕೀ ಬೋರ್ಡ್ ಬಳಸಿ ಕೂಡಾ ಟೈಪಿಸಬಹುದು. ನಿಮ್ಮದೇ ಭಾಷೆಯಲ್ಲಿ ಯೋಚಿಸಿ, ಟೈಪಿಸಿ, ಮಾತನಾಡಿ, ಸಂದೇಶ ಕಳಿಸಿ.

18 ಭಾಷೆಗಳಲ್ಲಿ ಲಭ್ಯ

18 ಭಾಷೆಗಳಲ್ಲಿ ಲಭ್ಯ

ಕನ್ನಡ ಸೇರಿದಂತೆ ಸುಮಾರು 18 ಭಾರತೀಯ ಭಾಷೆಗಳಲ್ಲಿ ಲಿಪಿಕಾರ್ ಟೈಪಿಂಗ್ ಟೂಲ್ ಹಾಗೂ ಧ್ವನಿಗ್ರಹಣದಿಂದ -ಅಕ್ಷರ ರೂಪಕ್ಕೆ ಇಳಿಸುವ ಅಪ್ಲಿಕೇಷನ್ ಲಭ್ಯವಿದೆ.

ನಿಮ್ಮ ಸ್ಮಾರ್ಟ್ ಫೋನಿನಲ್ಲಿ ಫೇಸ್‌ ಬುಕ್‌, ವಾಟ್ಸಪ್, ಇಮೇಲ್‌, ನೋಟ್ ಪ್ಯಾಡ್, ಆಫೀಸ್ ಸಾಧನಗಳ ಜತೆಗೆ ಲಿಪಿಕಾರ್ ಕೀ ಬೋರ್ಡ್ ಬಳಸಬಹುದಾಗಿದೆ.

ಆಂಡ್ರಾಯ್ಡ್ ವರ್ಷನ್ 2.3

ಆಂಡ್ರಾಯ್ಡ್ ವರ್ಷನ್ 2.3

ಆಂಡ್ರಾಯ್ಡ್ ವರ್ಷನ್ 2.3 ಅಥವಾ ಅದಕ್ಕಿಂತ ಹೆಚ್ಚಿರುವ ಮೊಬೈಲ್ ಗಳಲ್ಲಿ ಲಿಪಿಕಾರ್ ಸುಲಭವಾಗಿ ಬಳಸಬಹುದು. ಪ್ಲೇ ಸ್ಟೋರಿನಿಂದ ನಿಮ್ಮ ಮೊಬೈಲ್ ಗೆ ಇನ್ಸ್ಟಾಲ್ ಮಾಡಿಕೊಂಡ ಬಳಿಕ ಎನೇಬಲ್ ಮಾಡಬೇಕು. ನಂತರ ಲಿಪಿಕಾರ್ ಕೀಬೋರ್ಡ್ ಸೆಟ್ಟಿಂಗ್ಸ್ ಗೆ ಹೋಗಿ

ಕೀಬೋರ್ಡ್ ಸೆಟ್ಟಿಂಗ್ಸ್ ಗೆ ಹೋಗಿ

ಕೀಬೋರ್ಡ್ ಸೆಟ್ಟಿಂಗ್ಸ್ ಗೆ ಹೋಗಿ

ಲಿಪಿಕಾರ್ ಕೀಬೋರ್ಡ್ ಸೆಟ್ಟಿಂಗ್ಸ್ ಗೆ ಹೋಗಿ

* ಕೀ ಪ್ರೆಸ್ ಮಾಡಿದಾಗ ಶಬ್ದ, ವೈಬ್ರೇಟ್ ಬೇಕೇ? ಬೇಡವೇ ಆಯ್ಕೆ ಮಾಡಿಕೊಳ್ಳಬಹುದು.
* ಜತೆಗೆ ಟೈಪಿಂಗ್ ಮಾರ್ಗದರ್ಶಿ ಪುಟವನ್ನು ವೀಕ್ಷಿಸಬಹುದು. ಕೀಬೋರ್ಡ್ ಥೀಮ್ ಕೂಡಾ ಇದೆ.

* ಈ ಅಪ್ಲಿಕೇಷನ್ ಗೆ ರೇಟಿಂಗ್ ನೀಡುವುದು, ಅಪ್ಲಿಕೇಷನ್ ಹಂಚಿಕೊಳ್ಳುವುದಕ್ಕೂ ಆಯ್ಕೆ ನೀಡಲಾಗಿದೆ.

ದನಿಯಿಂದ ಅಕ್ಷರಕ್ಕೆ

ದನಿಯಿಂದ ಅಕ್ಷರಕ್ಕೆ

*ಒಂದೇ ಟೈಪಿಂಗ್ ಟೂಲ್ ನಲ್ಲಿ ಇಂಗ್ಲೀಷ್ ಹಾಗೂ ಕನ್ನಡ ಲಭ್ಯವಿದೆ.

* ಧ್ವನಿ ರೆಕಾರ್ಡ್ ಮಾಡುವಾಗ ಕನ್ನಡ ಆಯ್ಕೆ ಮಾಡಿಕೊಂಡರೆ, ಆದಷ್ಟು ಕನ್ನಡ ಪದವನ್ನೇ ಹೆಚ್ಚು ಬಳಸಿದರೆ ಫಲಿತಾಂಶ ಚೆನ್ನಾಗಿ ಬರುತ್ತದೆ.
* ಒಮ್ಮೆಗೆ 14 ಸೆಕೆಂಡುಗಳ ತನಕ ನಿಮ್ಮ ಧ್ವನಿ ಮುದ್ರಿಸಬಹುದು. ಕೆಲ ಸೆಕೆಂಡುಗಳ ನಂತರ ಈ ಧ್ವನಿ, ಅಕ್ಷರ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ.

Top 5 Highest Mountains On Earth | Oneindia Kannada
ಬಳಕೆಗೆ ಹೇಗಿದೆ?

ಬಳಕೆಗೆ ಹೇಗಿದೆ?

ಮೇಲ್ನೋಟಕ್ಕೆ ಹಲವರಿಗೆ ತಕ್ಷಣಕ್ಕೆ ಇದೊಂದು ಅದ್ಭುತ ಸಾಧನದಂತೆ ಕಂಡು ಬಂದಿದೆ. ಕೆಲವರಿಗೆ ಹಲವು ದೋಷಗಳು ಕಂಡು ಬಂದಿವೆ.
* ಈ ಸಾಧನದ ಪ್ರತಿಕ್ರಿಯೆ ಅವಧಿ ತಡವಾಗಿದೆ.
* 14 ಸೆಕೆಂಡುಗಳ ಕಾಲ ಧ್ವನಿ ರೆಕಾರ್ಡ್ ಮಾಡುವುದು ಕಿರಿಕಿರಿ,
* ಆಪಲ್ ಸಾಧನಗಳಲ್ಲಿ ಇನ್ನು ಈ ಟೂಲ್ ಏಕೆ ಲಭ್ಯವಿಲ್ಲ.

* ವಾಕ್ಯಗಳಲ್ಲಿ ದೋಷಗಳಿದ್ದರೆ ಮತ್ತೆ ತಿದುತ್ತಾ ಕೂರಬೇಕು.
* ಅಲ್ಪ ವಿರಾಮ (,), ಪೂರ್ಣ ವಿರಾಮ (.) ಮಂತಾದ ವಿಶೇಷ ಚಿನ್ಹೆ ಬಳಕೆ ಸಾಧ್ಯವಿಲ್ಲ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Lipikaar is a simple and intuitive typing tool for all Indian languages for Windows and Android based devices. It enables Hands-free Typing - Voice to Text Typing in Kannada & English.
Please Wait while comments are loading...