• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆದಾಯ ತೆರಿಗೆ ಸುಳ್ಳು ಮಾಹಿತಿಗೆ ತಕ್ಕ ಶಾಸ್ತಿ, ದಂಡ- ವಿಚಾರಣೆ

|

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಹೊತ್ತಿಗೆ ಏನೇನೋ ಸುಳ್ಳು ಮಾಹಿತಿ ನೀಡಿ ದೊಡ್ಡ ಮೊತ್ತದ ರೀಫಂಡ್ ಬಂತು ಎಂದು ಬೀಗುವ ಮೊದಲು ಎಚ್ಚೆತ್ತುಕೊಳ್ಳಿ. ಯಾರದೋ ಮಾತು ನಂಬಿ, ಸುಳ್ಳು ಮಾಹಿತಿಗಳನ್ನು ಭರ್ತಿ ಮಾಡಿದ ನಂತರ ಶೇ ಇನ್ನೂರರಷ್ಟು ದಂಡ ಸಹಿತ ತೆರಿಗೆ ಕಟ್ಟಬೇಕಾದ ಸ್ಥಿತಿ ತಂದುಕೊಳ್ಳಬೇಡಿ.

ಒಂದು ಉದಾಹರಣೆ ಹೇಳ್ತೀನಿ, ಕೇಳಿ: ಮಂಜುನಾಥ್ ಎಂಬುವವರಿಗೆ ಸ್ನೇಹಿತರೊಬ್ಬರು ತಮ್ಮ ಪರಿಚಯದ ಟ್ಯಾಕ್ಸ್ ಪ್ಲಾನರ್ ನನ್ನು ಪರಿಚಯಿಸಿದ್ದರು. ಯಾವಾಗಲೂ ಎಷ್ಟು ತೆರಿಗೆ ಕಟ್ಟಬೇಕಿತ್ತೋ ಆ ಮೊತ್ತದಲ್ಲೇ 50 ಸಾವಿರ ರುಪಾಯಿ ರೀಫಂಡ್ ಬಂತು. ಈ ಪುಣ್ಯಾತ್ಮ ಮಂಜುನಾಥ್ ಕೂಡ ಖುಷಿಯಾದರು. ಅಸಲಿಗೆ ಆಗಿದ್ದೇನೆಂದರೆ, ಆದಾಯದಲ್ಲೇ 1.65 ಲಕ್ಷ ಕಡಿಮೆ ತೋರಿಸಲಾಗಿತ್ತು.

ಆದಾಯ ತೆರಿಗೆ (ಐಟಿ) ರಿಟರ್ನ್ಸ್ ಕೊನೆ ದಿನಾಂಕ ವಿಸ್ತರಣೆ ಏಕೆ?

ಫಾರ್ಮ್ 16ರ ಮೂಲಕ ಆಗಿರುವ ತಪ್ಪೇನು ಅಂತ ಸುಲಭಕ್ಕೆ ಗೊತ್ತಾಯಿತು. ಮಂಜುನಾಥ್ ಗೆ ಐಟಿ ನೋಟಿಸ್ ಗುದ್ದಿಕೊಂಡು ಬಂತು. ಇದೀಗ ದಂಡ ಸಹಿತ ತೆರಿಗೆ ಪಾವತಿಸಿ, ಬೇಜಾರು ಮಾಡಿಕೊಳ್ಳುತ್ತಿದ್ದಾರೆ ಮಂಜುನಾಥ್.

Lied in your tax return? Rectify the lapses otherwise face consequences

ಆನ್ ಲೈನ್ ನಲ್ಲಿ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ಯಾವುದೇ ದಾಖಲೆ ಕೊಡಬೇಕಾಗಿಲ್ಲ ಅನ್ನೋ ನಿರ್ಲಕ್ಷ್ಯ ಧೋರಣೆಯೇ ತಪ್ಪು ಮಾಡುವುದಕ್ಕೆ ಪ್ರೇರಣೆಯಾಗಿದೆ. ಒಂದು ವೇಳೆ ತಪ್ಪು ಮಾಹಿತಿ ನೀಡಿದರೆ ಇನ್ನೂರು ಪರ್ಸೆಂಟ್ ದಂಡ ಹಾಕಬಹುದು. ಅಷ್ಟೇ ಅಲ್ಲ, ಕಾನೂನು ಪ್ರಕಾರ ವಿಚಾರಣೆ ಕೂಡ ಮಾಡಬಹುದು.

ಈಚೆಗೆ ಎಲ್ಲ ಕ್ಲೇಮುಗಳನ್ನೂ ಆದಾಯ ತೆರಿಗೆ ಇಲಾಖೆ ಗಮನಿಸುತ್ತಿದೆ. ಯಾವುದೇ ಖರ್ಚಿನ ಬಾಬ್ತನ್ನು ಸಾಕ್ಷ್ಯ ಸಹಿತ ಉದ್ಯೋಗದಾತರ ಮೂಲಕವೇ ಸಲ್ಲಿಸಬೇಕು. ಮನೆ ಬಾಡಿಗೆ ಬಗ್ಗೆ ದಾಖಲೆ ಸಲ್ಲಿಸುವಾಗ ಮಾಲೀಕರ ಪ್ಯಾನ್ ಕಾರ್ಡ್ ಸಂಖ್ಯೆಯನ್ನು ನೀಡಬೇಕಾಗುತ್ತದೆ. ಅವರು ಐಟಿ ರಿಟರ್ನ್ಸ್ ಸಲ್ಲಿಸುವಾಗ ಆ ಬಗ್ಗೆ ಮಾಹಿತಿ ನೀಡಿಲ್ಲ ಅಂದರೆ ಇಬ್ಬರಲ್ಲಿ ಒಬ್ಬರು ಮತ್ತೆ ಸಮಸ್ಯೆಗೆ ಸಿಕ್ಕಿ ಹಾಕಿಕೊಂಡಂತೆಯೇ.

ಫಾರ್ಮ್ 16 ಇಲ್ಲದೆ ಆದಾಯ ತೆರಿಗೆ ಇ ರಿಟರ್ನ್ಸ್ ಹೇಗೆ?

ಅದೇ ರೀತಿ ತೆರಿಗೆ ವಿನಾಯಿತಿ ಪಡೆಯುವ ಸಲುವಾಗಿ ಹೂಡಿಕೆಯ ವಿವರಗಳನ್ನು ನೀಡಿ, ಆ ನಂತರ ಹಣವಿಲ್ಲ ಅನ್ನೋ ಕಾರಣಕ್ಕೆ ಹೂಡಿಕೆಯೂ ಮಾಡದೆ, ತೆರಿಗೆಯಿಂದ ವಿನಾಯಿತಿ ಪಡೆಯುವುದು ಸಾಧ್ಯವಿಲ್ಲ. ಚಾರಿಟಬಲ್ ಟ್ರಸ್ಟ್ ಗಳಿಗೆ ನೀಡುವ ದಾನಕ್ಕೆ ಪಡೆಯುವ ತೆರಿಗೆ ವಿನಾಯಿತಿಯಲ್ಲೂ ಮೋಸ ಮಾಡುವ ಮಂದಿ ಇದ್ದಾರೆ.

ಕಳೆದ ವರ್ಷ ಇಂಥದ್ದೇ ಒಂದು ವಂಚನೆ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿತ್ತು. ಪದೇಪದೇ ಇಂತಹ ಪ್ರಕರಣಗಳು ಬಯಲಾಗುತ್ತಿರುವುದರಿಂದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕೂಡ ಹೆಚ್ಚು ಎಚ್ಚರದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು income tax ಸುದ್ದಿಗಳುView All

English summary
Tax experts warn that it has become easier for the department to detect fraudulent claims. “The Aadhaar number of individuals is now in every financial transaction. So the tax department can find out if you actually bought the medical policy for which you claimed deduction,” says tax expert.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more