ಬಂದ್ ದಿನ ಗ್ರಾಹಕರಿಗೆ ಸಿಹಿ ಸುದ್ದಿ ಕೊಟ್ಟ ಎಲ್ ಐಸಿ

Posted By:
Subscribe to Oneindia Kannada

ಮುಂಬೈ. ಸೆ. 2: ಭಾರತ ಬಂದ್ ದಿನದಂದು ಲೈಫ್ ಇನ್ಸುರೆನ್ಸ್ ಕಾರ್ಪೊರೇಷನ್ (ಎಲ್ ಐಸಿ) ತನ್ನ ಗ್ರಾಹಕರಿಗೆ ಶುಭ ಸುದ್ದಿ ನೀಡಿದೆ. ವಜ್ರ ಮಹೋತ್ಸವ ಸಂಭ್ರಮಾಚರಣೆಯಲ್ಲಿರುವ ಜೀವ ವಿಮೆ ನಿಗಮ ತನ್ನ ಗ್ರಾಹಕರಿಗೆ ವಿಶೇಷ ಬೋನಸ್ ಘೋಷಿಸಿದೆ.

ಪಾಲಿಸಿದಾರರಿಗೆ ಅವರ ವಿಮೆಯ ಮೌಲ್ಯ ಆಧರಿಸಿ ಪ್ರತಿ ಸಾವಿರ ರುಪಾಯಿಗಳಿಗೆ 5 ರೂ.ಗಳಿಂದ 60 ರೂ. ವರೆಗೆ ಬೋನಸ್ ಸಿಗಲಿದೆ. ಇದರಿಂದ 29 ಕೋಟಿಗೂ ಹೆಚ್ಚು ವೈಯಕ್ತಿಕ ಪಾಲಿಸಿದಾರರು ಹಾಗೂ 12 ಲಕ್ಷ ಸಮೂಹ ವಿಮೆದಾರರಿಗೆ ಈ ಪ್ರಯೋಜನ ಸಿಗಲಿದೆ.[ಜನಧನ ಯೋಜನೆಯಡಿ ಜೀವ ವಿಮಾ ಸೌಲಭ್ಯ]

On Bharat Bandh day, LIC cheer for customers: A Diamond Jubilee bonus

ವಜ್ರ ಮಹೋತ್ಸವದ ವರ್ಷಾಚರಣೆ ಸಂದರ್ಭದಲ್ಲಿ ನಮ್ಮ ಗ್ರಾಹಕರಿಗೆ ಬೋನಸ್ ಘೋಷಿಸಲು ಸಂತಸವಾಗುತ್ತದೆ ಎಂದು ಎಲ್ ಐಸಿ ಚೇರ್ಮನ್ ಎಸ್ ಕೆ ರಾಯ್ ಹೇಳಿದ್ದಾರೆ. ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಉಪಸ್ಥಿತರಿದ್ದ ಸಮಾರಂಭದಲ್ಲಿ ಈ ಘೋಷಣೆಯಾಗಿದೆ.[ಇನ್ಫೋಸಿಸ್ 3000 ಕೋಟಿ ರು ಷೇರು ಖರೀದಿಸಿದ LIC]

ಮಾರ್ಚ್ 31, 2016ಕ್ಕೆ ನಿಮ್ಮ ಪಾಲಿಸಿ ಲ್ಯಾಪ್ಸ್ ಆದರೂ ನಿಮಗೆ ಬೋನಸ್ ಸಿಗಲಿದೆ. 2014-15 ಅವಧಿಯಲ್ಲಿ ಒಟ್ಟಾರೆ ವಾರ್ಷಿಕ ಬೋನಸ್ ರೂಪದಲ್ಲಿ 34,283 ಕೋಟಿ ರುಗಳನ್ನು ತನ್ನ ಗ್ರಾಹಕರಿಗೆ ನೀಡಿದೆ. ಇದರ ಜೊತೆಗೆ ಕಳೆದ ಆರ್ಥಿಕ ವರ್ಷದ ಗಳಿಕೆ ರೂಪದಲ್ಲಿ ಎಲ್ ಐಸಿ 2,502 ಕೋಟಿ ರು ಚೆಕ್ ಅನ್ನು ಸರ್ಕಾರಕ್ಕೆ ಸಲ್ಲಿಸಿತು (ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Life Insurance Corporation (LIC) today announced a special one-time bonus ranging from Rs 5 to Rs 60 per thousand rupees of sum assured to policyholders as part of its Diamond Jubilee celebrations this year.
Please Wait while comments are loading...