ವಿಜಯ್ ಮಲ್ಯ ಆಸ್ತಿ ಹರಾಜಿಗೆ ಮುಹೂರ್ತ ಫಿಕ್ಸ್
ಬೆಂಗಳೂರು, ನ.22: ಉದ್ಯಮಿ ವಿಜಯ್ ಮಲ್ಯ ಅವರಿಗೆ ಸಾಲ ಕೊಟ್ಟಿರುವ 17ಕ್ಕೂ ಅಧಿಕ ಆರ್ಥಿಕ ಸಂಸ್ಥೆಗಳು ಮಲ್ಯ ಅವರ ಆಸ್ತಿ ಹರಾಜಿಗೆ ದಿನಾಂಕ ನಿಗದಿಪಡಿಸಿಕೊಂಡಿವೆ. ಮಲ್ಯ ಅವರು ಸುಮಾರು 8,000 ಕೋಟಿ ರು ಗೂ ಅಧಿಕ ಸಾಲದ ಹೊರೆ ಹೊತ್ತಿದ್ದಾರೆ.
ಏರ್ಲೈನ್ಸ್ಗೆ ಸಂಬಂಧಿ ಸಿದ ಆಸ್ತಿ ಮತ್ತು ವಾಹನಗಳ ಹರಾಜಿಗೆ ಡಿ.7ರಿಂದ ಬಿಡ್ ಶುರುವಾಗಲಿದೆ. ಕಿಂಗ್ಫಿಷರ್ಗಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿ ವಿವಿಧ ಬ್ಯಾಂಕ್ಗಳಿಂದ ಮಲ್ಯ 7 ಸಾವಿರ ಕೋಟಿ ರೂ. ಸಾಲ ಪಡೆದಿದ್ದಾರೆ.

ಇ ಹರಾಜು: ಮುಂಬೈ ಏರ್ಪೋರ್ಟ್ನಲ್ಲಿರುವ 17 ಸಾವಿರ ಚದರ ಅಡಿಯ ಕಿಂಗ್ಫಿಷರ್ ಹೌಸ್ ಕಟ್ಟಡವನ್ನು ಈಗಾಗಲೇ ಬ್ಯಾಂಕ್ಗಳು ವಶಕ್ಕೆ ಪಡೆದಿವೆ. ಆದರೆ ಇನ್ನೂ ಮಾರಾಟ ಮಾಡಲಾಗಿಲ್ಲ. ಇದರ ಮೌಲ್ಯ 150 ಕೋಟಿ ರು ಎಂದು ಅಂದಾಜಿಸಲಾಗಿದೆ. ಗೋವಾದಲ್ಲಿರುವ 90 ಕೋಟಿ ರು ಮೌಲ್ಯದ ವಿಲ್ಲಾ ಕೂಡಾ ಬ್ಯಾಂಕ್ ಪಾಲಾಗಿದೆ.
ಏರ್ಲೈನ್ಸ್ಗೆ ಸೇರಿದ ಟೆಂಪೊ, ಟ್ರ್ಯಾಕ್ಟರ್, ಕಾರುಗಳು, ಎಸ್ಯುುವಿ, ಏರ್ಕ್ರಾಫ್ಟ್ ಪುಲ್ಲರ್ಸ್, ಲಗೇಜ್ ಟ್ರಾಲಿ ಮತ್ತಿತರ ಚರ ಆಸ್ತಿಗಳನ್ನು ಡಿ.7ರಂದು ಇ ಹರಾಜು ಹಾಕಲು ನಿರ್ಧರಿಸಲಾಗಿದೆ. ಹರಾಜಿನ ಆರಂಭಿಕ ಮೊತ್ತವನ್ನು ಕನಿಷ್ಠ 65 ಲಕ್ಷ ರೂ.ಗೆ ನಿಗದಿಪಡಿಸಲಾಗಿದೆ.
ಮಲ್ಯಗೆ ನೀಡಲಾಗಿರುವ ಸಾಲದ ಮೊತ್ತದಲ್ಲಿ 1,100 ಕೋಟಿ ರು ಮಾತ್ರ ಬ್ಯಾಂಕ್ ಗಳು ರಿಕೆವರಿ ಮಾಡಿಕೊಂಡಿವೆ. ಸಾಲದ ಮೇಲಿನ ಚಕ್ರ ಬಡ್ಡಿ 15.5 ರಷ್ಟಿದ್ದು, ಮಲ್ಯ ಅವರು ಪದೇ ಪದೇ ಉದ್ದೇಶಪೂರ್ವಕ ಸುಸ್ತಿದಾರರಾಗಿದ್ದಾರೆ. (ಪಿಟಿಐ)












Click it and Unblock the Notifications