ಎಲ್ಇಡಿ ಬಲ್ಬ್ ಬೆಲೆ ಇಳಿಕೆ, ರಾಜ್ಯದಲ್ಲಿ ಕೇವಲ 80 ರೂಪಾಯಿ!

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 06: ಕೇಂದ್ರ ಸರ್ಕಾರದ ಉನ್ನತ ಜ್ಯೋತಿ(ಉಜಾಲ) ಯೋಜನೆಯಡಿ ಕೈಗೆಟುಕುವ ದರದಲ್ಲಿ ಎಲ್‍ಇಡಿ ಬಲ್ಬ್ ಗಳನ್ನು ಪೂರೈಸುತ್ತಿರುವ ಎನರ್ಜಿ ಎಫಿಸಿಯನ್ಸಿ ಸರ್ವೀಸ್ ಲಿಮಿಟೆಡ್(ಇಇಎಸ್‍ಎಲ್) ಎಲ್‍ಇಡಿ ಬಲ್ಬ್ ಗಳ ಬೆಲೆಯನ್ನು ಇಳಿಕೆ ಮಾಡಿದೆ. ಏಪ್ರಿಲ್ 06ರಿಂದ ಕರ್ನಾಟಕದಲ್ಲಿ 80 ರುಪಾಯಿಯಂತೆ ಸಿಗಲಿದೆ.

ಮಾರ್ಚ್ 2016 ರಲ್ಲಿ ಪ್ರತಿ ಒಂದು ಎಲ್‍ಇಡಿ ಬಲ್ಬ್ ಅನ್ನು ರೂಪಾಯಿ 54.90 (ತೆರಿಗೆ ಹೊರತುಪಡಿಸಿ) ಗಳಿಗೆ ಖರೀದಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಈ ಬೆಲೆ ಇಳಿಕೆಯ ಲಾಭವನ್ನು ನೇರವಾಗಿ ಗ್ರಾಹಕರಿಗೆ ತಲುಪಿಸಲು ಕಂಪನಿ ನಿರ್ಧರಿಸಿದೆ. ಬೆಲೆ ಇಳಿಕೆ ಪರಿಣಾಮ ಇದೀಗ ಎಲ್‍ಇಡಿ ಬಲ್ಬ್ ಗಳ ಬೆಲೆ 75 ರಿಂದ 95 ರೂಪಾಯಿ ಆಗಿದೆ. [ಬೆಂಗಳೂರಲ್ಲಿ ಎಲ್ ಇಡಿ ಬಲ್ಬ್ ಎಲ್ಲೆಲ್ಲಿ ಸಿಗುತ್ತೆ?]

ಆಡಳಿತಾತ್ಮಕ ವೆಚ್ಚ, ಪೂರೈಕೆ ವೆಚ್ಚ ಮತ್ತು ಆಯಾ ರಾಜ್ಯಗಳಲ್ಲಿರುವ ತೆರಿಗೆಗಳನ್ನು ಸೇರಿಸಿ ಈ ದರವನ್ನು ನಿಗದಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಬಲ್ಬ್ ಗಳ ಬೆಲೆ ಆಯಾ ರಾಜ್ಯಗಳ ತೆರಿಗೆ ಪ್ರಮಾಣಕ್ಕೆ ಅನುಗುಣವಾಗಿ ಬೆಲೆಯಲ್ಲಿ ಸ್ವಲ್ಪ ವ್ಯತ್ಯಾಸ ಇರುತ್ತದೆ. [ಎಲ್ ಇಡಿ ಬಲ್ಬ್ ಬಳಕೆಯಿಂದ ಒದಗುವ 9 ಅನುಕೂಲಗಳು]

ಕರ್ನಾಟಕ ರಾಜ್ಯದಲ್ಲಿ ಉಜಾಲ ಯೋಜನೆಯಡಿ (ರಾಜ್ಯದಲ್ಲಿ ಹೊಸ ಬೆಳಕು ಯೋಜನೆ) ಈ ಎಲ್‍ಇಡಿ ಬಲ್ಬ್ ಗಳ ಬೆಲೆ ಕೇವಲ 80 ರೂಪಾಯಿ ಆಗಲಿದೆ. ಇದುವರೆಗೆ ಇದರ ಬೆಲೆ 100 ರೂಪಾಯಿ ಇತ್ತು. ರಾಜ್ಯದಲ್ಲಿ ಎಲ್‍ಇಡಿ ಬಲ್ಬ್ ಗಳ ಪರಿಷ್ಕೃತ ದರವನ್ನು ಏಪ್ರಿಲ್ 6 ರಿಂದ ಜಾರಿಗೆ ತರಲಾಗುತ್ತಿದೆ. ಸ್ಥಳೀಯ ತೆರಿಗೆ ಅನ್ವಯ ವಿವಿಧ ರಾಜ್ಯಗಳಲ್ಲಿ ಎಲ್‍ಇಡಿ ಬಲ್ಬ್‍ಗಳಿಗೆ ವಿವಿಧ ರೀತಿಯ ಬೆಲೆಯನ್ನು ನಿಗದಿ ಮಾಡಲಾಗಿದೆ.

ಪಾರದರ್ಶಕತೆ ಮತ್ತು ಇ-ಪ್ರೊಕ್ಯೂರ್‍ಮೆಂಟ್

ಪಾರದರ್ಶಕತೆ ಮತ್ತು ಇ-ಪ್ರೊಕ್ಯೂರ್‍ಮೆಂಟ್

ಸರ್ಕಾರ ಪಾರದರ್ಶಕತೆ ಮತ್ತು ಇ-ಪ್ರೊಕ್ಯೂರ್‍ಮೆಂಟ್ ಮೂಲಕ ಸೇವೆಯನ್ನು ನೀಡಲು ಬದ್ಧತೆಯನ್ನು ತೋರಿಸಿದೆ. ಇದರ ಪರಿಣಾಮ ವ್ಯಾವಹಾರಿಕ ವೆಚ್ಚ, ಸಮಯದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದ್ದು, ದಕ್ಷತೆ ಪ್ರಮಾಣ ಹೆಚ್ಚಳವಾಗಿದೆ. ಈ ಮೂಲಕ ಎಲ್‍ಇಡಿ ಬಲ್ಬ್ ಪೂರೈಕೆಯಲ್ಲಿ ಕಂಪನಿಗಳ ಸ್ಪರ್ಧೆ ಹೆಚ್ಚಳವಾಗಿ ಬೆಲೆಯಲ್ಲೂ ಇಳಿಕೆ ಕಂಡುಬರಲಿದೆ.

ಬೆಲೆ ಏರಿಕೆ ಇಳಿಕೆ ವಿವರ

ಬೆಲೆ ಏರಿಕೆ ಇಳಿಕೆ ವಿವರ

2014 ರ ಜನವರಿಯಲ್ಲಿ ಪುದುಚೆರಿಯಲ್ಲಿ ನಡೆದ ಬಿಡ್ ನಲ್ಲಿ ಇಇಎಸ್‍ಎಲ್ ಒಂದು ಎಲ್‍ಇಡಿ ಬಲ್ಬ್ ಗೆ 310 ರೂಪಾಯಿ ನಿಗದಿ ಮಾಡಿತ್ತು. ತದನಂತರ 2014 ರ ಸೆಪ್ಟಂಬರ್ ನಿಂದ 2015 ರ ಫೆಬ್ರವರಿ ವೇಳೆಯಲ್ಲಿ ನಡೆದ ಇದರ ಬೆಲೆ 204 ರೂಪಾಯಿಯಿಂದ 104 ರೂಪಾಯಿ ಆಗಿತ್ತು.

2016 ರ ಮಾರ್ಚಿನಲ್ಲಿ ಸಂಸ್ಥೆ ಎಲ್‍ಇಡಿ ಬಲ್ಬ್ ಅನ್ನು ಕೇವಲ 54.90 ರೂಪಾಯಿಗಳಿಗೆ ಪ್ರಕ್ಯೂರ್ ಮಾಡಿ ದಾಖಲೆ ನಿರ್ಮಿಸಿದೆದೆ.

ಕರ್ನಾಟಕದಲ್ಲಿ 66.5 ಲಕ್ಷ ಎಲ್‍ಇಡಿ ಬಲ್ಬ್

ಕರ್ನಾಟಕದಲ್ಲಿ 66.5 ಲಕ್ಷ ಎಲ್‍ಇಡಿ ಬಲ್ಬ್

ಕೇಂದ್ರ ಸರ್ಕಾರದ ಉಜಾಲ ಯೋಜನೆ ಸಂಪೂರ್ಣವಾಗಿ ರಾಷ್ಟ್ರೀಯ ಮಟ್ಟದಲ್ಲಿ ಪಾರದರ್ಶಕವಾಗಿ ನಡೆಯುತ್ತಿದೆ (www.delp.in
). ಇದುವರೆಗೆ ಇಇಎಸ್‍ಎಲ್ ಕರ್ನಾಟಕದಲ್ಲಿ 66.5 ಲಕ್ಷ ಎಲ್‍ಇಡಿ ಬಲ್ಬ್ ಗಳನ್ನು ವಿತರಿಸಿದೆ. ಈ ಯೋಜನೆಯಡಿ ವಿತರಿಸಿರುವ ಬಲ್ಬ್‍ಗಳಿಂದಾಗಿ ರಾಜ್ಯ ಮತ್ತು ಇಲ್ಲಿನ ಗ್ರಾಹಕರಿಗೆ ಹೆಚ್ಚು ಅನುಕೂಲವಾಗುತ್ತಿದೆ.

77 ಕೋಟಿ ಬಲ್ಬ್ ಗಳನ್ನು ಬದಲಾಯಿಸುವ ಗುರಿ

77 ಕೋಟಿ ಬಲ್ಬ್ ಗಳನ್ನು ಬದಲಾಯಿಸುವ ಗುರಿ

ಕೇಂದ್ರ ಸರ್ಕಾರ ದೇಶದಲ್ಲಿ ಸಾಮರ್ಥ್ಯ ಹೊಂದಿರದ 77 ಕೋಟಿ ಬಲ್ಬ್ ಗಳನ್ನು ಬದಲಾಯಿಸಿ ಎಲ್‍ಇಡಿ ಬಲ್ಬ್ ಗಳನ್ನು ವಿತರಿಸುವ ಗುರಿ ಇಟ್ಟುಕೊಂಡಿದೆ. ಈ ಮೂಲಕ 20,000 ಮೆಗಾವ್ಯಾಟ್ ವಿದ್ಯುತ್ ಉಳಿತಾಯ ಆದಂತಾಗುತ್ತದೆ. ಪ್ರತಿವರ್ಷ 100 ಬಿಲಿಯನ್ ಕೆಡಬ್ಲ್ಯೂಎಚ್ ಮತ್ತು 80 ದಶಲಕ್ಷ ಟನ್‍ನಷ್ಟು ಗ್ರೀನ್ ಹೌಸ್ ಗ್ಯಾಸ್ ನ ಪ್ರಮಾಣವನ್ನು ಕಡಿಮೆ ಮಾಡಿದಂತಾಗುತ್ತದೆ. ಇದೆಲ್ಲದರ ಜತೆಗೆ ದೇಶದ ವಿದ್ಯುತ್ ಗ್ರಾಹಕರಿಗೆ ಪ್ರತಿವರ್ಷ 40,000 ಕೋಟಿ ರೂಪಾಯಿಗಳ ವಿದ್ಯುತ್ ಬಿಲ್ ನಲ್ಲಿ ಉಳಿತಾಯ ಮಾಡಿದಂತಾಗುತ್ತದೆ.

ಇಇಎಸ್‍ಎಲ್ ಬಗ್ಗೆ

ಇಇಎಸ್‍ಎಲ್ ಬಗ್ಗೆ

ಇದು ಎನ್ ಟಿಪಿಸಿ ಲಿಮಿಟೆಡ್, ಪವರ್ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್, ರೂರಲ್ ಎಲೆಕ್ಟ್ರಿಫಿಕೇಷನ್ ಕಾರ್ಪೊರೇಷನ್ ಲಿಮಿಟೆಡ್ ಮತ್ತು ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್‍ನ ಜಂಟಿ ಪ್ರಯತ್ನದಿಂದ ಇಂಧನ ಸಚಿವಾಲಯದಡಿ ಇಂಧನ ಕ್ಷಮತೆಯ ಯೋಜನೆಗಳ ಅನುಷ್ಠಾನಕ್ಕಾಗಿ ರೂಪುಗೊಂಡ ಸಂಸ್ಥೆ.

ಭಾರತದಲ್ಲಿನ ಇಂಧನಕ್ಷಮತೆಯ ಮಾರುಕಟ್ಟೆಯನ್ನು ತೆರೆಯುವ ಇಇಎಸ್‍ಎಲ್ ಅತ್ಯುತ್ಕೃಷ್ಟ ಇಂಧನ ಕ್ಷಮತಾ ಸಂಸ್ಥೆ(ಇಎಎಸ್ ಸಿಒ)ಯಾಗಿದ್ದು, ನವೀನ ವಹಿವಾಟು ಹಾಗೂ ಮಾದರಿಗಳ ಅನುಷ್ಠಾನದ ಮೂಲಕ ಪ್ರಸ್ತುತ ಇಂಧನ ಬಳಕೆಯಲ್ಲಿ ಶೇ. 20ರಷ್ಟು ಉಳಿತಾಯ ಮಾಡುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The procurement cost of LED bulbs has fallen further to Rs 54.90 per unit from Rs 64.41 under Domestic Efficient Lighting Programme of the government, which will further reduce the retail price to Rs 75-95.
Please Wait while comments are loading...