ಈ ರಾಜ್ಯದಲ್ಲಿ ಪೆಟ್ರೋಲ್ ಬೆಲೆ 100 ರುಗೆ ಏರಿಕೆಯಾಗಲು ಏನು ಕಾರಣ?

ನವದೆಹಲಿ, ಫೆಬ್ರವರಿ 17: ಸರ್ಕಾರಿ ಸ್ವಾಮ್ಯದ ಮೂರು ತೈಲ ಕಂಪನಿಗಳು ಬುಧವಾರ(ಫೆ.17) ಮತ್ತೊಮ್ಮೆ ತೈಲ ದರ ಏರಿಕೆ ಮಾಡಿದ್ದು, ಸತತವಾಗಿ ಒಂಭತ್ತನೇ ದಿನದಂದು ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದೆ. ರಾಜಸ್ಥಾನದಲ್ಲಿ ಎರಡನೇ ಬಾರಿಗೆ ಪೆಟ್ರೋಲ್ ಬೆಲೆ 100 ರು ಗಡಿ ದಾಟಿದೆ. ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗುತ್ತಲೇ ಇದೆ. ಬುಧವಾರದಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ತಲಾ 25 ಪೈಸೆ ಏರಿಕೆ ಕಂಡಿದೆ.

ರಾಜಸ್ಥಾನದಲ್ಲಿ ಅತಿ ಹೆಚ್ಚು ವ್ಯಾಟ್ ವಿಧಿಸಲಾಗುತ್ತಿದೆ ಹೀಗಾಗಿ ಇಂಧನ ದರ ಇತರೆಡೆಗಿಂತ ಕೊಂಚ ಅಧಿಕವಾಗಿದೆ. ಶ್ರೀಗಂಗಾನಗರ ಪಟ್ಟಣದಲ್ಲಿ ಪೆಟ್ರೋಲ್ 100.13 ರು ಹಾಗೂ ಡೀಸೆಲ್ ಬೆಲೆ 92.13 ರು ಪ್ರತಿ ಲೀಟರ್ ಆಗಿದೆ. ಬ್ರ್ಯಾಂಡೆಡ್ ಪೆಟ್ರೋಲ್ 102.91 ರು ಪ್ರತಿ ಲೀಟರ್ ಹಾಗೂ ಡೀಸೆಲ್ 92.13 ರು ಪ್ರತಿ ಲೀಟರ್ ನಷ್ಟಿದೆ.

ವಾಹನ ಸವಾರರ ಒತ್ತಡಕ್ಕೆ ಮಣಿದಿದ್ದ ರಾಜಸ್ಥಾನ ಸರ್ಕಾರ ಕಳೆದ ತಿಂಗಳು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ವ್ಯಾಟ್ 2 ರು ಪ್ರತಿ ಲೀಟರ್ ನಂತೆ ತಗ್ಗಿಸಿತ್ತು. ಪೆಟ್ರೋಲ್ ಮೇಲೆ ವ್ಯಾಟ್ 36% ಪ್ಲಸ್ 1.5 ರು ರಸ್ತೆ ಸೆಸ್ ವಿಧಿಸಲಾಗುತ್ತಿದೆ. ಇದೇ ರೀತಿ ಡೀಸೆಲ್ ಮೇಲಿನ ವ್ಯಾಟ್ 26% ಪ್ಲಸ್ 1.75 ರಸ್ತೆ ಸೆಸ್ ಹಾಕಲಾಗಿದೆ. ಇದು ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಅತ್ಯಧಿಕ ಸುಂಕವಾಗಿದೆ.

Know why Petrol prices crosses ₹100 mark in Rajasthan

ಕೇಂದ್ರ ಸರ್ಕಾರ ಮೂಲ ಬೆಲೆಯ 125% ರಷ್ಟು ತೆರಿಗೆ ವಿಧಿಸುತ್ತದೆ. ಇಂಧನದ ಮೇಲೆ ಅಬಕಾರಿ ಸುಂಕ 32. 98ರು ನಷ್ಟಿದೆ. ದೆಹಲಿಯಲ್ಲಿ 19 ರು ಪ್ರತಿ ಲೀಟರ್ ವ್ಯಾಟ್, ಡೀಲರ್ ಕಮಿಷನ್ 3.67 ರು ಪ್ರತಿ ಲೀಟರ್ ಸೇರಿ ಬೆಲೆ ಇನ್ನಷ್ಟು ಏರಿಕೆಗೆ ಕಾರಣವಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+