ಬರಲಿದೆ 160 ಹೆಚ್ ಡಿ ಸಿನಿಮಾ ಸಂಗ್ರಹಿಸುವ ಥಂಬ್ ಡ್ರೈವ್ !

Posted By: Chethan
Subscribe to Oneindia Kannada

ಕ್ಯಾಲಿಫೋರ್ನಿಯಾ, ಜ. 9: ಪೆನ್ ಡ್ರೈವ್, ಫ್ಲಾಷ್ ಡ್ರೈವ್ ಗಳ ಬಳಕೆ ಹೆಚ್ಚಾದಂತೆ ಹೆಚ್ಚೆಚ್ಚು ಸಾಮರ್ಥ್ಯದ ಡ್ರೈವ್ ಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತಿದೆ. ಬಾಹ್ಯ ಸಂಗ್ರಹ ಪರಿಕರಗಳ ಲೋಕದಲ್ಲಿ ತನ್ನದೇ ಬ್ರಾಂಡ್ ಮೌಲ್ಯ ಹೊಂದಿರುವ ಕ್ಯಾಲಿಫೋರ್ನಿಯಾ ಮೂಲದ ಕಿಂಗ್ ಸ್ಟನ್ ಕಂಪನಿಯು ಹೆಬ್ಬೆಟ್ಟು ಗಾತ್ರದ ಹೊಸ ಯುಎಸ್ ಬಿ ಪ್ಲಾಶ್ ಡ್ರೈವ್ ಅನ್ನು ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದೆ.

ಇದನ್ನು ಅನ್ವರ್ಥವಾಗಿ ಥಂಬ್ ಡ್ರೈವ್ ಎಂದು ಕರೆಯಲಾಗಿದ್ದು, 3 ಇಂಚಿಗಿಂತಲೂ ಕಡಿಮೆ ಗಾತ್ರ ಹೊಂದಿದೆಯಲ್ಲದೆ, 1 ಅಥವಾ 2 ಟೆರಾಬೈಟ್ ಸಾಮರ್ಥ್ಯದ್ದಾಗಿರುತ್ತದೆ. ಎರಡು ಟೆರಾಬೈಟ್ ಸಾಮರ್ಥ್ಯಯ ಡ್ರೈವ್ ನಲ್ಲಿ160ಕ್ಕಿಂತಲೂ ಹೆಚ್ಚಿನ ಹೈ ಡೆಫೆನಿಷನ್ ಸಿನಿಮಾಗಳನ್ನು ಸಂಗ್ರಹಿಸಿಡಬಹುದು ಎಂದು ಕಂಪನಿ ಹೇಳಿಕೊಂಡಿದೆ.

Kingston company ready to release thumb drives

ಮುಂದಿನ ತಿಂಗಳು ಈ ಥಂಬ್ ಡ್ರೈವ್ ಗಳು ಬಿಡುಗಡೆಯಾಗುವ ನಿರೀಕ್ಷೆಯಿದೆ. ಸದ್ಯಕ್ಕೀಗ ಪ್ರಾಥಮಿಕ ಹಂತದಲ್ಲಿ 1 ಟಿಬಿ ಥಂಬ್ ಡ್ರೈವ್ ಗಳನ್ನು ಅಮೆಜಾನ್ ಆನ್ ಲೈನಾ ಮಾರಾಟ ಜಾಲತಾಣದಲ್ಲಿ (ಅಮೆರಿಕ ಆವೃತ್ತಿ) ಮಾರಾಟಕ್ಕಿಡಲಾಗಿದೆ. ಅಲ್ಲಿ ಅವುಗಳ ಬೆಲೆ 2,730 ಅಮೆರಿಕನ್ ಡಾಲರ್ ನಷ್ಟಿದೆ. ಈ ಮೂಲಕ ಸಿಗುವ ಬಳಕೆದಾರರ ಅನಿಸಿಕೆ, ಅಭಿಪ್ರಾಯಗಳನ್ನು ಸಂಗ್ರಹಿಸಿ ಅಗತ್ಯವಿದ್ದ ಮಾರ್ಪಾಟುಗಳನ್ನು ಮಾಡಿದ ನಂತರ ಮತ್ತೊಮ್ಮೆ 1 ಟಿಬಿ ಹಾಗೂ 2 ಟಿಬಿ ಥಂಬ್ ಡ್ರೈವ್ ಗಳನ್ನು ಬಿಡುಗಡೆಗೊಳಿಸಲು ಕಂಪನಿ ನಿರ್ಧರಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kingston company decided to release 1 TB, 2 TB USB flash drives in which more than 160 HD movies can be stored. ಖ್ಯಾತ ಫ್ಲಾಷ್ ಡ್ರೈವ್ ತಯಾರಿಕಾ ಸಂಸ್ಥೆಯಾದ ಕಿಂಗ್ ಸ್ಟನ್, 1 ಅಥವಾ 2 ಟೆರಾಬೈಟ್ ಸಾಮರ್ಥ್ಯದ ಫ್ಲಾಷ್ ಡ್ರೈವ್ ಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದು, ಇದರಲ್ಲಿ 160ಕ್ಕಿಂತಲೂ ಹೆಚ್ಚಿನ ಹೈ ಡೆಫೆನಿಷನ್ ಸಿನಿಮಾಗಳನ್ನು ಸಂಗ್ರಹಿಸಿಡಬಹುದು ಎನ್ನಲಾಗಿದೆ.
Please Wait while comments are loading...