ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಡುಕರಿಗೆ ಕಹಿ ಸುದ್ದಿ ಇಲ್ಲ, ಇಲಾಖೆಗೆ ಆದಾಯ ಹೆಚ್ಚಳ ಗುರಿ

|
Google Oneindia Kannada News

ಮದ್ಯ ಮಾರಾಟ ಕುಸಿತವಾದರೂ ಅಬಕಾರಿ ಇಲಾಖೆ ಕಳೆದ ಆರ್ಥಿಕ ವರ್ಷದಲ್ಲಿ ಲಾಭ ಬಂದಿದೆ. ಹೀಗಾಗಿ ಮುಂದಿನ ಆರ್ಥಿಕ ವರ್ಷದಲ್ಲಿ ಹೆಚ್ಚಿನ ಆದಾಯ ಗಳಿಕೆಯ ಗುರಿಯನ್ನು ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಅವರು ನೀಡಿದ್ದಾರೆ. 2021-22ನೇ ಸಾಲಿನ ಬಜೆಟ್ ಮಂಡನೆ ಮಾಡಿದ ಯಡಿಯೂರಪ್ಪ ಅವರು ಮದ್ಯಪಾನಿಗಳಿಗೂ ಸಿಹಿ ಸುದ್ದಿ ನೀಡಿದ್ದಾರೆ. ಅಬಕಾರಿ ಸುಂಕದಲ್ಲಿ ಯಾವುದೆ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.

ಭಾರತದಲ್ಲಿ ತಯಾರಾದ ಮದ್ಯ(IML) ಹಾಗೂ ಬಿಯರ್ ಮಾರಾಟ ಕುಸಿತವಾಗಿದ್ದರೂ ಅಬಕಾರಿ ಇಲಾಖೆ ಆದಾಯ ಗಳಿಕೆ, ಲಾಭದಲ್ಲಿ ಹಿಂದೆ ಬಿದ್ದಿಲ್ಲ ವರ್ಷದಿಂದ ವರ್ಷಕ್ಕೆ ಹೋಲಿಸಿದರೆ ಶೇ 3.38ರಷ್ಟು ನಿವ್ವಳ ಲಾಭ ಬಂದಿದೆ.

ಕಳೆದ ಆರ್ಥಿಕ ವರ್ಷದಲ್ಲಿ ಏಪ್ರಿಲ್ ಹಾಗೂ ಜನವರಿ 31 ರ ಅವಧಿಯಲ್ಲಿ 18,689 ಕೋಟಿ ರು ಆದಾಯ ದಾಖಲಾಗಿದೆ. ಈ ವರ್ಷ 18,078 ಕೋಟಿ ರು ಬಂದಿದ್ದು, 610 ಕೋಟಿ ರು ಮಾತ್ರ ತಗ್ಗಿದೆ.

ಕರ್ನಾಟಕ ಬಜೆಟ್ 2021: ಮಹಿಳೆಯರಿಗಾಗಿ ವಿವಿಧ ಯೋಜನೆಗಳ ಘೋಷಣೆಕರ್ನಾಟಕ ಬಜೆಟ್ 2021: ಮಹಿಳೆಯರಿಗಾಗಿ ವಿವಿಧ ಯೋಜನೆಗಳ ಘೋಷಣೆ

2019ರ ಏಪ್ರಿಲ್-ನವೆಂಬರ್ ಅವಧಿಯಲ್ಲಿ ರಾಜ್ಯ ಅಬಕಾರಿ ಇಲಾಖೆಯು 14,390.39 ಕೋಟಿ ರೂ ಆದಾಯ ಪಡೆದಿದ್ದರೆ, ಈ ವರ್ಷ 13,778.30 ಕೋಟಿ ರೂ ಆದಾಯ ಗಳಿಸಿದೆ. ಅಂದರೆ ಎರಡು ತಿಂಗಳ ಲಾಕ್‌ಡೌನ್ ಮತ್ತು ಜನರ ಕೋವಿಡ್ ಭಯದ ನಡುವೆಯೂ ಅಬಕಾರಿ ಇಲಾಖೆ ಕಳೆದ ವರ್ಷಕ್ಕೆ ಹೋಲಿಸಿದರೆ ಕೇವಲ 612.09 ಕೋಟಿ ರೂ ಕಡಿಮೆ ಆದಾಯ ಗಳಿಸಿದೆ.

ಬಜೆಟ್ ಪ್ರಸ್ತಾವನೆ:

ಬಜೆಟ್ ಪ್ರಸ್ತಾವನೆ:

2020-21ನೇ ಸಾಲಿನ ಅಬಕಾರಿ ಇಲಾಖೆಗೆ 22,700 ಕೋಟಿ ರು ಗಳ ರಾಜಸ್ವ ಸಂಗ್ರಹಣೆಯ ಗುರಿ ನೀಡಲಾಗಿತ್ತು. ಫೆಬ್ರವರಿ ಅಂತ್ಯಕ್ಕೆ 20,900 ಕೋಟಿ ರು ರಾಜಸ್ವ ಸಂಗ್ರಹವಾಗಿದೆ. ಈ ಗುರಿಯನ್ನು ಹೆಚ್ಚಿಸಲಾಗಿದ್ದು, ನಿಗದಿತ ಅವಧಿಯಲ್ಲಿ ಸಂಗ್ರಹಿಸುವ ಗುರಿ ನಿರೀಕ್ಷೆಯಿದೆ. 2021-22ನೇ ಸಾಲಿನ ಆರ್ಥಿಕ ವರ್ಷದಲ್ಲಿ ಅಬಕಾರಿ ಇಲಾಖೆಗೆ 24,580 ಕೋಟಿ ರು ರಾಜಸ್ವ ಸಂಗ್ರಹಣೆ ಗುರಿಯನ್ನು ನಿಗದಿಪಡಿಸಲಾಗಿದೆ.

ನಿವ್ವಳ ಲಾಭ

ನಿವ್ವಳ ಲಾಭ

ನಿವ್ವಳ ಲಾಭ: ಕಳೆದ ಆರ್ಥಿಕ ವರ್ಷದಲ್ಲಿ ಅಬಕಾರಿ ಇಲಾಖೆಗೆ ಶೇ 3.38ರಷ್ಟು ನಿವ್ವಳ ಲಾಭ ಬಂದಿದೆ. ಮುಂದಿನ ಆರ್ಥಿಕ ವರ್ಷಕ್ಕೆ 22,700 ಕೋಟಿ ರು ಆದಾಯ ಗಳಿಕೆ ಗುರಿ ನೀಡಲಾಗಿದೆ. ಕಳೆದ ವರ್ಷ 20,950 ಕೋಟಿ ರು ಗಳಿಕೆಯಾಗಿತ್ತು. 2019-20ರಲ್ಲಿ 509.19 ಲಕ್ಷ ಕೇಸ್ ಬಿಯರ್ ಮಾರಾಟವಾಗಿತ್ತು. 2020-21ರಲ್ಲಿ 472.69 ಲಕ್ಷ ಕೇಸ್ ಮಾತ್ರ ಮಾರಾಟವಾಗಿದೆ.

ಮದ್ಯದ ಮೇಲೆ ಹೆಚ್ಚುವರಿ ಸೆಸ್ ಇಲ್ಲ

ಮದ್ಯದ ಮೇಲೆ ಹೆಚ್ಚುವರಿ ಸೆಸ್ ಇಲ್ಲ

ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಮದ್ಯ ಉತ್ಪನ್ನಗಳ ಮೇಲೆ ಶೇ.100 ಸೆಸ್ ವಿಧಿಸಲಾಗಿದೆ. ಕರ್ನಾಟಕದಲ್ಲಿ ಐಎಂಎಲ್ ಮೇಲಿನ ತೆರಿಗೆಯನ್ನು ಶೇ. 17ರಿಂದ ಶೇ 25ರವರೆಗೆ ಇದೆ.

ಐಎಂಎಲ್ ಮತ್ತು ಬಿಯರ್ ಮೇಲೆ ಶೇ. 5-10ರವರೆಗೆ ಹೆಚ್ಚುವರಿ ಅಬಕಾರಿ ಸುಂಕ ಏರಿಕೆಗೆ ಬೇಡಿಕೆ ಸರ್ಕಾರದ ಮುಂದಿತ್ತು. ಆದರೆ, ಸೆಸ್ ಹೆಚ್ಚಳ ಮಾಡದಿರಲು ಯಡಿಯೂರಪ್ಪ ನಿರ್ಧರಿಸಿದ್ದಾರೆ. ಒಂದು ವೇಳ್ ಬೆಲೆ ಏರಿಕೆಯಾಗಿದ್ದರೆ ಬಿಯರ್ ಬೆಲೆ ಬಾಟಲ್ ಕನಿಷ್ಠ ಐದರಿಂದ ಹತ್ತು ರೂಪಾಯಿವರೆಗೆ ಏರಿಕೆ, ವಿಸ್ಕಿ, ರಮ್ 5 ರಿಂದ 8 ರೂಪಾಯಿವರೆಗೆ ಹೆಚ್ಚಳ ಸಾಧ್ಯತೆಯಿತ್ತು. ಕಳೆದ ಬಜೆಟ್ ನಲ್ಲೂ ಶೇ. 6 ಹೆಚ್ಚುವರಿ ಟ್ಯಾಕ್ಸ್ ಹಾಕಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಭಾರತದಲ್ಲಿ ತಯಾರದ ಮದ್ಯ

ಭಾರತದಲ್ಲಿ ತಯಾರದ ಮದ್ಯ

ಭಾರತದಲ್ಲಿ ತಯಾರದ ಮದ್ಯದ ಮೇಲೆ ಕೇಂದ್ರ ವಿಧಿಸಿದ್ದ ಅಬಕಾರಿ ಸುಂಕ ಹೆಚ್ಚಳವಾಗಿದ್ದರಿಂದ ಈ ಬಾರಿ ಆದಾಯ ಹೆಚ್ಚಳವಾಗಿದೆ. ಮಾರ್ಚ್ 25 ರಿಂದ ಮೇ 7 ರ ಅವಧಿಯಲ್ಲಿ ಎಲ್ಲಾ ವೈನ್ ಮಳಿಗೆ ಬಂದ್ ಆಗಿದ್ದರಿಂದ ಆದಾಯಕ್ಕೆ ಭಾರಿ ಪೆಟ್ಟು ಬಿದ್ದಿತ್ತು. ವರ್ಷದ ಕೊನೆ ತ್ರೈಮಾಸಿಕದಲ್ಲಿ 16,405 ಕೋಟಿ ರು ಆದಾಯ ಗಳಿಸಿದ್ದರಿಂದ ಪರಿಸ್ಥಿತಿ ಸುಧಾರಿಸಿತು ಎಂದು ಅಬಕಾರಿ ಇಲಾಖೆ ಹೇಳಿದೆ.

ಆನ್ ಲೈನ್ ಮದ್ಯ ಪೂರೈಕೆ ಬಗ್ಗೆ ಪ್ರಸ್ತಾವನೆ ಇಲ್ಲ

ಆನ್ ಲೈನ್ ಮದ್ಯ ಪೂರೈಕೆ ಬಗ್ಗೆ ಪ್ರಸ್ತಾವನೆ ಇಲ್ಲ

ಆನ್ ಲೈನ್ ಮದ್ಯ ಪೂರೈಕೆಯನ್ನು ಸದ್ಯಕ್ಕೆ ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲು ಅಬಕಾರಿ ಇಲಾಖೆಯಲ್ಲಿ ಚರ್ಚೆ ನಡೆದಿದೆ. ಸರ್ಕಾರಿ ಸ್ವಾಮ್ಯದ ಎಂಎಸ್ಐಎಲ್ ಮಳಿಗೆ ಮೂಲಕ ಜಿಲ್ಲಾ ಕೇಂದ್ರಗಳಲ್ಲಿ ಪೂರೈಕೆ ಬಗ್ಗೆ ಚರ್ಚೆ ನಡೆಸಲಾಗಿತ್ತು. ಆದರೆ, ಕೊವಿಡ್ 19 ರ ಸಮಸ್ಯೆ ವ್ಯಾಪಕವಾಗಿರುವ ಈ ಸಂದರ್ಭದಲ್ಲಿ ಈ ಪ್ರಸ್ತಾವದ ಅಗತ್ಯ ಖಂಡಿತವಾಗಿಯೂ ಇರುವುದಿಲ್ಲ ಎಂದು ವೈನ್ ಮರ್ಚಂಟ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ ಹೆಗ್ಡೆ ಪ್ರತಿಕ್ರಿಯಿಸಿದ್ದರು. ಮದ್ಯ ಮಾರಾಟಗಾರರ ಮನವಿಗೆ ಸ್ಪಂದಿಸಿರುವ ಸರ್ಕಾರ ಆನ್ ಲೈನ್ ಮದ್ಯ ಪೂರೈಕೆ ಪ್ರಸ್ತಾವನೆ ಸದ್ಯಕ್ಕಿಲ್ಲ ಎಂದು ಸ್ಪಷ್ಟಪಡಿಸಿದೆ.

English summary
Karnataka Budget 2021: Excise revenue surpasses previous year’s figures, What is the target for this year. There is no change in excise duty on liquor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X