ಕರ್ನಾಟಕದಲ್ಲಿ JSW ಪೇಂಟ್ಸ್ ನಿಂದ "ಯಾವುದೇ ಬಣ್ಣಕ್ಕೆ ಒಂದೇ ಬೆಲೆ" ಯೋಜನೆ

ಬೆಂಗಳೂರು, ಜೂನ್ 11: ಭಾರತದಲ್ಲಿ ಮುಂಚೂಣಿಯಲ್ಲಿರುವ ಬ್ಯುಸಿನೆಸ್ ಸಮೂಹ ಸಂಸ್ಥೆಯಾಗಿರುವ 14 ಬಿಲಿಯನ್ ಯುಎಸ್ ಡಾಲರ್ ನ ಜೆಎಸ್‍ಡಬ್ಲ್ಯೂ ಗ್ರೂಪ್ ಇದೀಗ ಜೆಎಸ್‍ಡಬ್ಲ್ಯೂ ಪೇಂಟ್ಸ್ ಹೆಸರಿನಲ್ಲಿ ಕರ್ನಾಟಕ ಮಾರುಕಟ್ಟೆಯಲ್ಲಿ ತನ್ನ ವ್ಯವಹಾರ ಆರಂಭಿಸಿದೆ.

ಗ್ರಾಹಕರ ವೈವಿಧ್ಯೀಕರಣದ ಭಾಗವಾಗಿ ಇದೇ ಮೊದಲ ಬಾರಿಗೆ ಜೆಎಸ್‍ಡಬ್ಲ್ಯೂ ಗ್ರೂಪ್ ಭಾರತೀಯ ಸಂಘಟಿತ ಬಣ್ಣಗಳ ಉದ್ಯಮಕ್ಕೆ ಹೆಜ್ಜೆ ಇಟ್ಟಿದೆ. ಈ ಪೇಂಟ್ಸ್ ವ್ಯವಹಾರವನ್ನು ಆರಂಭಿಸುವ ಮೂಲಕ ಸಂಸ್ಥೆಯು ಇದೀಗ ಗ್ರಾಹಕರ ಮನೆಗಳಿಗೆ ಸ್ಟೀಲ್, ಸಿಮೆಂಟ್, ಪೀಠೋಪಕರಣಗಳು ಮತ್ತು ಬಣ್ಣವನ್ನು ಪೂರೈಸುವ ಮೂಲಕ ಮನೆಗೆ ಪರಿಪೂರ್ಣತೆಯ ಮೆರಗು ತರುತ್ತದೆ.

ಕರ್ನಾಟಕದ ಗ್ರಾಹಕರಿಗೆ ಜೆಎಸ್‍ಡಬ್ಲ್ಯೂ ಪೇಂಟ್ಸ್ ಇದೇ ಮೊದಲ ಬಾರಿಗೆ ಕ್ರಾಂತಿಕಾರಿಯಾದ "ಯಾವುದೇ ಬಣ್ಣ=ಒಂದೇ ದರ'' ಯೋಜನೆಯನ್ನು ಪ್ರಕಟಿಸಿದೆ. ಈ ಮೂಲಕ ಯಾವುದೇ ಬಣ್ಣವನ್ನು ಒಂದೇ ಬೆಲೆಗೆ ನೀಡುವ ಭರವಸೆಯೊಂದಿಗೆ ಏಕೀಕೃತ ಭಾರತ ನಿರ್ಮಾಣದ ಗುರಿಯನ್ನು ಹಾಕಿಕೊಂಡಿದೆ.

ಇಂಥ ಪಾರದರ್ಶಕವಾದ ದರ ನೀಡುತ್ತಿರುವ ಭಾರತದ ಮೊದಲ ಪೇಂಟ್ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪೇಂಟ್ ಉದ್ಯಮದಲ್ಲಿ ಕಲರೆಂಟ್ ವೆಚ್ಚ ಪ್ರತ್ಯೇಕ ಎಂದು ಗ್ರಾಹಕರಿಂದ ಹೆಚ್ಚಿನ ಬೆಲೆಯನ್ನು ವಸೂಲಿ ಮಾಡಲಾಗುತ್ತಿತ್ತು. ಇಂತಹ ಅಪಾರದರ್ಶಕತೆಯ ಕಲರ್ ದರವನ್ನು ತೊಡೆದುಹಾಕುವ ನಿಟ್ಟಿನಲ್ಲಿ ಈ ಕ್ರಾಂತಿಕಾರಕ ಹೆಜ್ಜೆಯನ್ನು ಇಡಲಾಗಿದೆ.

ಜೆಎಸ್‍ಡಬ್ಲ್ಯೂ ಒಂದು ಗ್ರೀನ್‍ಫೀಲ್ಡ್ ವೆಂಚರ್

ಜೆಎಸ್‍ಡಬ್ಲ್ಯೂ ಒಂದು ಗ್ರೀನ್‍ಫೀಲ್ಡ್ ವೆಂಚರ್

ಜೆಎಸ್‍ಡಬ್ಲ್ಯೂ ಒಂದು ಗ್ರೀನ್‍ಫೀಲ್ಡ್ ವೆಂಚರ್ ಆಗಿದ್ದು, ಇದರ ಹಿಂದೆ ಕಟಿಂಗ್-ಎಡ್ಜ್ ಟೆಕ್ನಾಲಜಿ, ಆಟೋಮೇಶನ್ ಮತ್ತು ಈ ಕ್ಷೇತ್ರದಲ್ಲಿ ಪ್ರಮುಖ ಸಂಸ್ಥೆಯಾಗಿದೆ. ಕಂಪನಿಯು ಇಂಡಸ್ಟ್ರಿಯಲ್ ಕೋಟಿಂಗ್ಸ್ ಅಲ್ಲದೇ ಅಲಂಕಾರಿಕ ಬಣ್ಣಗಳನ್ನು ಉತ್ಪಾದಿಸಿ ಮಾರಾಟ ಮಾಡುತ್ತದೆ. ಇಂಡಸ್ಟ್ರಿಯಲ್ ಕೋಟಿಂಗ್‍ನಲ್ಲಿ ಜೆಎಸ್‍ಡಬ್ಲ್ಯೂ ಪೇಂಟ್ಸ್ ಕಾಯಿಲ್ ಕೋಟಿಂಗ್ಸ್‍ನೋಂದಿಗೆ ಕಾರ್ಯಾಚರಣೆಯನ್ನು ಆರಂಭಿಸುತ್ತಿದೆ.

ಅಲಂಕಾರಿಕ ಪೇಂಟ್ಸ್ ವಿಭಾಗದಲ್ಲಿ ಕಂಪನಿಯು ಒಳಾಂಗಣ ಮತ್ತು ಹೊರಾಂಗಣ ಗೋಡೆಗಳಿಗೆ, ಮರ ಮತ್ತು ಲೋಹಕ್ಕೆ ಕೇವಲ ನೀರು ಆಧಾರಿತ ಪೇಂಟ್‍ಗಳನ್ನು ಉತ್ಪಾದಿಸುತ್ತಿದೆ. ಗ್ರಾಹಕರ ಅಭಿರುಚಿ ಮತ್ತು ಜಾಗತಿಕ ಟ್ರೆಂಡ್‍ಗಳ ನಡುವಿನ ಅಂತರದ ಬಗ್ಗೆ ಜೆಎಸ್‍ಡಬ್ಲ್ಯೂ ಪೇಂಟ್ಸ್ ಮಾರುಕಟ್ಟೆಯನ್ನು ಅಧ್ಯಯನ ಮಾಡಿ ಅರ್ಥ ಮಾಡಿಕೊಂಡಿದೆ. ಈ ನಿಟ್ಟಿನಲ್ಲಿ ಕಂಪನಿಯು ಭಾರತದ ಪೇಂಟ್ಸ್ ಕ್ಷೇತ್ರದಲ್ಲಿ ಬಹುಮುಖ್ಯ ಕಂಪನಿಯಾಗಿ ಕಾರ್ಯನಿರ್ವಹಿಸುವ ಉದ್ದೇಶವನ್ನು ಹೊಂದಿದೆ.

ರೀಟೇಲ್ ಅನುಭವವನ್ನು ಹೆಚ್ಚು ಮಾಡುವ ಉದ್ದೇಶ

ರೀಟೇಲ್ ಅನುಭವವನ್ನು ಹೆಚ್ಚು ಮಾಡುವ ಉದ್ದೇಶ

ರೀಟೇಲ್ ಅನುಭವವನ್ನು ಹೆಚ್ಚು ಮಾಡುವ ಉದ್ದೇಶದಿಂದ ಜೆಎಸ್‍ಡಬ್ಲ್ಯೂ ಪೇಂಟ್ಸ್ ಬೆಂಗಳೂರಿನ ತನ್ನ ರೀಟೇಲ್ ಪಾಲುದಾರರಿಗಾಗಿ ಕಲರ್‍ವಿಸ್ತಾ ಸೆನ್ಸಸ್ ಅನ್ನು ಉದ್ಘಾಟಿಸಿದೆ.

ಜೆಎಸ್‍ಡಬ್ಲ್ಯೂ ಪೇಂಟ್ಸ್ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಜೆಎಸ್‍ಡಬ್ಲ್ಯೂ ಪೇಂಟ್ಸ್‍ನ ವ್ಯವಸ್ಥಾಪಕ ನಿರ್ದೇಶಕ ಪಾರ್ಥ್ ಜಿಂದಾಲ್ ಅವರು, ಜೆಎಸ್‍ಡಬ್ಲ್ಯೂ ಪೇಂಟ್ಸ್ ನಲ್ಲಿ ನಾವು ಚಿಂತನಶೀಲರಾಗಿರುವುದು ಸುಂದರವಾಗಿರುತ್ತದೆ ಎಂಬುದರಲ್ಲಿ ನಂಬಿಕೆ ಇಟ್ಟಿದ್ದೇವೆ. ಈ ಹಿನ್ನೆಲೆಯಲ್ಲಿ ನಾವು ಹಿಂದೆಂದಿಗಿಂತಲೂ ಅತ್ಯುತ್ತಮ ಗುಣಮಟ್ಟದ ಪೇಂಟ್ಸ್‍ನ್ನು ಜೆಎಸ್‍ಡಬ್ಲ್ಯೂ ಪೇಂಟ್ಸ್ ನೀಡುತ್ತದೆ ಎಂಬುದನ್ನು ಭರವಸೆ ನೀಡುತ್ತೇವೆ ಮತ್ತು ಈ ಮೂಲಕ ನಮ್ಮ ಗ್ರಾಹಕರಿಗೆ ಅವರು ಹಾಕಿದ ಮೌಲ್ಯಕ್ಕೆ ತಕ್ಕುದಾದ ಉತ್ಪನ್ನಗಳನ್ನು ಪೂರೈಸುತ್ತೇವೆ ಎಂಬ ಭರವಸೆಯನ್ನೂ ನೀಡುತ್ತಿದ್ದೇವೆ. ಇದೇ ಮೊದಲ ಬಾರಿಗೆ ಯಾವುದೇ ಬಣ್ಣವನ್ನೂ ಖರೀದಿಸಿದರೂ ಒಂದೇ ಬೆಲೆ ಎಂಬ ಧ್ಯೇಯದೊಂದಿಗೆ ಐತಿಹಾಸಿಕ ಹೆಜ್ಜೆ ಇಟ್ಟಿದ್ದೇವೆ.

Array

Array

1. ಉತ್ಪನ್ನದ ಶ್ರೇಣಿ: ಜೆಎಸ್‍ಡಬ್ಲ್ಯೂ ಪೇಂಟ್ಸ್ ನೀರು ಆಧಾರಿತ ಬಣ್ಣಗಳನ್ನು ಮನೆಗಳಿಗೆ ಸರಳ, ಚುರುಕಾದ ಮತ್ತು ಖಚಿತವಾದ ರೀತಿಯಲ್ಲಿ ತಲುಪಿಸಲಿದೆ. ದೇಶದಲ್ಲಿ ಇದು ಏಕೈಕ ನೀರು ಆಧಾರಿತ ಬಣ್ಣವಾಗಿದೆ. ನಮ್ಮ ಅಲಂಕಾರಿಕ ಬಣ್ಣಗಳಲ್ಲಿ ಸಾಲ್ವೆಂಟ್‍ಗಳು ಇರುವುದಿಲ್ಲ ಮತ್ತು ಕಡಿಮೆ ವಿಒಸಿ ಇರುತ್ತದೆ. ಈ ಮೂಲಕ ಇದು ಕುಟುಂಬ ಸ್ನೇಹಿ ಬಣ್ಣವಾಗಿದೆ. ಟಿಂಟಿಂಗ್‍ನ ಕಲರೆಂಟ್‍ಗಳೂ ಸಹ ನೀರು ಆಧಾರಿತವಾಗಿರುವುದು ಇದರ ವಿಶೇಷತೆಯಾಗಿದೆ. ಈ ಬಣ್ಣಗಳನ್ನು ಅತ್ಯುತ್ತಮ ಪರೀಕ್ಷೆ ನಡೆಸಿದ್ದು & ಪ್ರಮಾಣೀಕರಣಗೊಂಡಿದೆ. ಈ ಬಣ್ಣಗಳ ಅವಧಿ 3, 5 & 7 ವರ್ಷಗಳಾಗಿರುತ್ತದೆ.

2. ಯಾವುದೇ ಬಣ್ಣ ಒಂದೇ ಬೆಲೆಗೆ: ಜೆಎಸ್‍ಡಬ್ಲ್ಯೂ ಪೇಂಟ್ಸ್‍ನ ಯಾವುದೇ ಬಣ್ಣವನ್ನು ಖರೀದಿಸಿದರೂ ಒಂದೇ ಬೆಲೆ ಇರುತ್ತದೆ. ಅಂದರೆ, ಕಂಪನಿ ಉತ್ಪಾದಿಸುವ ಎಲ್ಲಾ ಬಣ್ಣಗಳ ಬೆಲೆ ಒಂದೇ ಇರುತ್ತದೆ. ಒಟ್ಟು 1800 ಶೇಡ್‍ಗಳನ್ನು ಉತ್ಪಾದಿಸುತ್ತಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಅತ್ಯುತ್ತಮವಾದ ಮತ್ತು ವಿಸ್ತಾರವಾದ ಕಲರ್ ರೇಂಜ್ ಅನ್ನು ನೀಡಲಿದೆ.

Array

Array

3. ಗ್ರಾಹಕರ ಅನುಭವ: ಜೆಎಸ್‍ಡಬ್ಲ್ಯೂ ಪೇಂಟ್ಸ್ ಮೊದಲ ಬಾರಿಗೆ ಲುಕ್ & ಫೀಲ್ ಅನುಭವವನ್ನು ತನ್ನ ಗ್ರಾಹಕರಿಗೆ ನೀಡುತ್ತಿದೆ. ಕಲರ್‍ವಿಸ್ತಾ ಸೆನ್ಸಸ್ ಸ್ಟೋರ್ ಮೂಲಕ ತನ್ನ ರೀಟೇಲರ್‍ಗಳಿಗೆ ಶ್ರೀಮಂತವಾದ ಅನುಭವವನ್ನು ನೀಡುತ್ತದೆ.

4. ಗ್ರಾಹಕರಿಗೆ ನೆರವು: ಜೆಎಸ್‍ಡಬ್ಲ್ಯೂ ಪೇಂಟ್ಸ್ ತನ್ನ ಗ್ರಾಹಕರ ಅನುಭವಕ್ಕೆ ಮಾನವ ಸ್ಪರ್ಶ ನೀಡಲಿದೆ. ತನ್ನ ಗ್ರಾಹಕ ಸಂಬಂಧ ಅಧಿಕಾರಿ ಗ್ರಾಹಕರ ನೆರವಿಗೆ ಸದಾ ಲಭ್ಯವಿರುತ್ತಾರೆ. ಈ ಮೂಲಕ ಉತ್ಪನ್ನಗಳು, ಬಣ್ಣಗಳ ಆಯ್ಕೆ ವಿಚಾರದಲ್ಲಿ ಮಾಹಿತಿಯನ್ನು ನೀಡುತ್ತಾರೆ.

5. ಆವಿಷ್ಕಾರ & ದಕ್ಷತೆಯ ಪ್ಯಾಕೇಜಿಂಗ್: ಆವಿಷ್ಕಾರಕ & ದಕ್ಷತೆಯ ಪ್ಯಾಕೇಜಿಂಗ್ ವಿನ್ಯಾಸವನ್ನು ಮಾಡಿದ ಮೊದಲ ಪೇಂಟ್ ಕಂಪನಿ ಎಂಬ ಹೆಗ್ಗಳಿಕೆಗೆ ಜೆಎಸ್‍ಡಬ್ಲ್ಯೂ ಪೇಂಟ್ಸ್ ಪಾತ್ರವಾಗಿದೆ.

6. ಉತ್ಪಾದನಾ ಸಾಮರ್ಥ್ಯಗಳು: ಜೆಎಸ್‍ಡಬ್ಲ್ಯೂ ಪೇಂಟ್ಸ್ ಭಾರತದ ಅತಿದೊಡ್ಡ ಸಂಪೂರ್ಣ ಆಟೋಮೇಟೆಡ್ ಕಾಯಿಲ್ ಕೋಟಿಂಗ್ ಸೌಲಭ್ಯದ ಬಣ್ಣ ತಯಾರಿಕಾ ಘಟಕವನ್ನು ಆರಂಭಿಸಿದೆ. ಇದರ ಉತ್ಪಾದನಾ ಸಾಮರ್ಥ್ಯ ವಾರ್ಷಿಕ 25,000 KL ಆಗಿದ್ದು ಮತ್ತು ನೀರು ಆಧಾರಿತ ಅಲಂಕಾರಿಕ ಬಣ್ಣಗಳ ಘಟಕದ ಸಾಮರ್ಥ್ಯ ವಾರ್ಷಿಕ 1,00,000 KL ಆಗಿದೆ. ಈ ಎರಡೂ ಘಟಕಗಳು ಸಂಪೂರ್ಣ ಪರಿಸರ ಸ್ನೇಹಿಯಾಗಿವೆ ಮತ್ತು ZLD (Zero Liquid Discharge) ಘಟಕಗಳಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+