• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಿಯೋದ ಇ-ಸಿಮ್ (eSIM) ಸೇವೆ ಈಗ ಹೊಸ ಮೊಟೊರೊಲಾ ರೇಜರ್‌ನಲ್ಲಿ ಲಭ್ಯ

|

ಬೆಂಗಳೂರು, ಮಾರ್ಚ್ 18: ಮೊಟೊರೊಲಾ ಹೊಸದಾಗಿ ಬಿಡುಗಡೆ ಮಾಡಿರುವ ಹೊಸ ಮೊಟೊರೊಲಾ ರೇಜರ್‌ ಬಳಕೆದಾರರಿಗೆ ಜಿಯೋ ಇ-ಸಿಮ್ (eSIM) ಸೇವೆಯನ್ನು ನೀಡಲು ಮುಂದಾಗಿದೆ. ಭಾರತದಲ್ಲಿ ಮೊಟೊರೊಲಾ ರೇಜರ್ ಪ್ರಿ-ಬುಕಿಂಗ್ 16 ಮಾರ್ಚ್ 2020 ರಂದು ಪ್ರಾರಂಭವಾಗಿದ್ದು, ಈ ಫೋನ್ ಖರೀದಿ ಮಾಡಿದವರು ಜಿಯೋದ ಇ-ಸಿಮ್ (eSIM) ಸೇವೆಯ ಲಾಭವನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ.

ಇದಲ್ಲದೆ ಜಿಯೋ ಮೊಟೊರೊಲಾ ರೇಜರ್‌ ಬಳಕೆದಾರರಿಗೆ ಬೆಸ್ಟ್ ಪ್ಲಾನ್ ಲಾಂಚ್ ಮಾಡಿದ್ದು, ಜಿಯೋ ವಾರ್ಷಿಕ ಪ್ರಿಪೇಯ್ಡ್ ಯೋಜನೆಯಡಿಯಲ್ಲಿ ರೂ. 4,999 / - ನಲ್ಲಿ ಡಬಲ್ ಡೇಟಾ ಮತ್ತು ಡಬಲ್ ವ್ಯಾಲಿಡಿಟಿಯನ್ನು ಒದಗಿಸುತ್ತಿದೆ.

ಇತ್ತೀಚೆಗೆ ಬಿಡುಗಡೆ ಮಾಡಿದ ಮೊಟೊರೊಲಾ ರೇಜರ್‌ನಲ್ಲಿ ಇ-ಸಿಮ್ (eSIM) ಸೇವೆಯ ಬೆಂಬಲವನ್ನು ಜಿಯೋ ಘೋಷಿಸಿದೆ, ಇದು ವಿಶ್ವದ ಮೊಟ್ಟಮೊದಲ ಕ್ಲಾಮ್‌ಶೆಲ್ ಶೈಲಿಯ ಫೋಲ್ಡಬಲ್ ಡಿಸ್‌ಪ್ಲೇ ಹೊಂದಿರುವ ಸ್ಮಾರ್ಟ್‌ಫೋನ್ ಆಗಿದೆ.

ಭೌತಿಕ ಸಿಮ್ ಕಾರ್ಡ್ ಇಲ್ಲದೆ, ಮೊಟೊರೊಲಾ ರೇಜರ್ ಬಳಕೆದಾರರು ಜಿಯೋ ನೆಟ್‌ವರ್ಕ್‌ನ ಮೂಲಕ ಕರೆಗಳನ್ನು ಮಾಡಲು ಮತ್ತು ಸ್ವೀಕರಿಸಲು, ಡೇಟಾ ಮತ್ತು ಅಪ್ಲಿಕೇಶನ್‌ಗಳನ್ನು ಬಳಸಲು ಜಿಯೋ ಇ-ಸಿಮ್ (eSIM) ಸೇವೆಯು ಅನುಮತಿಸುತ್ತದೆ. ಎಲ್ಲಾ ಜಿಯೋ ಪ್ರಿಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಗ್ರಾಹಕರು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಈ ಸೇವೆಯನ್ನು ಬಳಸಬಹುದು. ಭೌತಿಕ ಸಿಮ್ ಕಾರ್ಡ್ ಸೇರಿಸಲು ಅಥವಾ ಬದಲಾಯಿಸುವ ಅಗತ್ಯವಿಲ್ಲದೆ, ಇ-ಸಿಮ್ (eSIM) ತಡೆರಹಿತ ಸಾಧನ ಸೆಟಪ್ ಅನುಭವವನ್ನು ಜಿಯೋ ಮೂಲಕ ಪಡೆಯಬಹುದಾಗಿದೆ.

ಜಿಯೋ ನೆಟ್‌ವರ್ಕ್‌ನಲ್ಲಿನ ಮೊಟೊರೊಲಾ ರೇಜರ್ ಬಳಕೆದಾರರಿಗೆ ವಿಶೇಷ ಆಫರ್ ಅನ್ನು ಸಹ ನೀಡಲಾಗುತ್ತಿದೆ, ಜಿಯೋ ರೂ .4999 / - ವಾರ್ಷಿಕ ಯೋಜನೆಯೊಂದಿಗೆ ರೀಚಾರ್ಜ್ ಮಾಡಿಸಿಕೊಂಡರೆ ಡಬಲ್ ಡೇಟಾ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಇದರೊಂದಿಗೆ ಹೆಚ್ಚುವರಿ 1 ವರ್ಷದ ಅನಿಯಮಿತ ಸೇವೆಗಳು ಸಂಪೂರ್ಣವಾಗಿ ಉಚಿತವಾಗಿ ಮೊಟೊರೊಲಾ ರೇಜರ್ ಬಳಕೆದಾರರು ಪಡೆದುಕೊಳ್ಳಬಹುದಾಗಿದೆ. (ಯಾವುದೇ ದೈನಂದಿನ ಮಿತಿ ಇಲ್ಲದೆ 350 + 350 ಜಿಬಿ ಹೈಸ್ಪೀಡ್ ಡೇಟಾವನ್ನು ನೀಡಲಿದ್ದು + ಅನಿಯಮಿತ ಧ್ವನಿ ಮತ್ತು 700 ಜಿಬಿ ಡೇಟಾವನ್ನು ಮತ್ತೊಂದು ವರ್ಷಕ್ಕೆ ಉಚಿತವಾಗಿ ನೀಡಲಿದೆ. ಇದರಿಂದ ಗ್ರಾಹಕರಿಗೆ ರೂ .14,997 / - ಉಳಿತಾಯವಾಗಲಿದೆ.)

ಐಕಾನಿಕ್ ಮೊಟೊರೊಲಾ ರೇಜರ್ ಬ್ಲ್ಯಾಕ್ ನಾಯ್ರ್ ಬಣ್ಣದಲ್ಲಿ ಪ್ರೀ ಬುಕ್ಕಿಂಗೆ ಲಭ್ಯವಿದೆ, ಇದು ಮಾರ್ಚ್ 16 ರಿಂದ ಪ್ರಾರಂಭವಾಗಿದ್ದು, 2020 ರ ಏಪ್ರಿಲ್ 2 ರಿಂದ ರಿಲಯನ್ಸ್ ಡಿಜಿಟಲ್ ನಲ್ಲಿ ರೂ. 124,999 / - ಕ್ಕೆ ಮಾರಾಟವಾಗಲಿದೆ.

English summary
Reliance Jio has announced eSIM service support on the recently launched Motorola Razr, which is the first-ever clamshell-style foldable display smartphone in the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X