ಜಿಯೋಫೋನ್‌‌ನಲ್ಲಿ ಕೊನೆಗೂ ವಾಟ್ಸಾಪ್ ಲಭ್ಯ!

ಬೆಂಗಳೂರು, ಸೆಪ್ಟೆಂಬರ್ 11: ಎರಡನೇ ವಾರ್ಷಿಕೋತ್ಸವ ಸಂಭ್ರಮದಲ್ಲಿರುವ ಜಿಯೋ ತನ್ನ ಗ್ರಾಹಕರಿಗೆ ಶುಭ ಸುದ್ದಿ ಕೊಟ್ಟಿದೆ. ಅತ್ಯಂತ ಜನಪ್ರಿಯ ಅಪ್ಲಿಕೇಷನ್ ವಾಟ್ಸಾಪ್ ಕೊನೆಗೂ ಜಿಯೋ ಫೋನ್ ಗೆ ಬಂದಿದೆ. ಸೆಪ್ಟೆಂಬರ್ 20ರಿಂದ ಪೂರ್ಣಪ್ರಮಾಣದಲ್ಲಿ ಲಭ್ಯವಾಗಲಿದೆ.

ಎರಡು ವರ್ಷಗಳಿಗೂ ಕಡಿಮೆ ಅವಧಿಯಲ್ಲಿ 215 ಮಿಲಿಯನ್ ಗ್ರಾಹಕರನ್ನು ಪಡೆದ ಜಿಯೋ ಒಂದು ರೀತಿಯಲ್ಲಿ ವಿಶ್ವದಾಖಲೆಯನ್ನೇ ಸೃಷ್ಟಿಸಿತು.

4ಜಿ ಸ್ಮಾರ್ಟ್‌ಫೋನ್ ಬಳಸುತ್ತಿದ್ದ ಬಹುತೇಕ ಗ್ರಾಹಕರು ಜಿಯೋ ಬಳಸಲು ಪ್ರಾರಂಭಿಸಿದ್ದು ಮತ್ತು ವಿಶ್ವದರ್ಜೆಯ ಸೇವೆಗಳನ್ನು ವಿಶ್ವದಲ್ಲೇ ಕಡಿಮೆ ಬೆಲೆಯಲ್ಲಿ ಪಡೆದುಕೊಂಡಿದ್ದು ಸ್ಪಷ್ಟವಾಗಿತ್ತಾದರೂ, ಭಾರತದ ಮೊಬೈಲ್ ಗ್ರಾಹಕರ ಪೈಕಿ ಮೂರನೇ ಎರಡಕ್ಕೂ ಹೆಚ್ಚಿರುವ ಫೀಚರ್ ಫೋನ್ ಬಳಕೆದಾರರು ಈ ಪ್ರಕ್ರಿಯೆಯಿಂದ ಹೊರಗೆ ಉಳಿದುಬಿಟ್ಟಿದ್ದರು.

Jio Phone Finally Gets WhatsApp

ಸೇವೆಗಳು ಕೈಗೆಟುಕುವ ದರದಲ್ಲಿ ಲಭ್ಯವಾದರೂ, 500 ಮಿಲಿಯನ್ ಫೀಚರ್ ಫೋನ್ ಬಳಕೆದಾರರ ಈ ಸಮುದಾಯಕ್ಕೆ ಪ್ರಾರಂಭಿಕ ಹಂತದ 4ಜಿ ಸ್ಮಾರ್ಟ್‌ಫೋನ್ ಕೊಳ್ಳುವುದೂ ಸಾಧ್ಯವಾಗುವಂತಿರಲಿಲ್ಲ. ಈ ಕಾರಣದಿಂದ ಜಿಯೋಫೋನ್ ಅನ್ನು ರೂಪಿಸಲಾಯಿತು, ಮತ್ತು ರಿಲಯನ್ಸ್ ರೀಟೇಲ್ ಲಿ. ಮೂಲಕ ಅದನ್ನು ಆಗಸ್ಟ್ 2017ರಲ್ಲಿ ಮಾರುಕಟ್ಟೆಗೆ ತರಲಾಯಿತು.

ಯಶಸ್ವಿ ಪರೀಕ್ಷೆಗಳ ನಂತರ, ಮೊತ್ತಮೊದಲ ಬಾರಿಗೆ, ಭಾರತದಾದ್ಯಂತ ಜಿಯೋಫೋನ್‌ನಲ್ಲಿ ವಾಟ್ಸಾಪ್ ಲಭ್ಯವಾಗಲಿದೆ. ಜಿಯೋ - ಕಾಯ್ ಓಎಸ್ ಬಳಸುವ ಜಿಯೋಫೋನ್‌ಗಾಗಿಯೇ ತನ್ನ ಖಾಸಗಿ ಮೆಸೇಜಿಂಗ್ ಆಪ್‌ನ ಹೊಸ ಆವೃತ್ತಿಯನ್ನು ವಾಟ್ಸಾಪ್ ರೂಪಿಸಿದ್ದು, ಮಿತ್ರರು ಹಾಗೂ ಕುಟುಂಬದ ಸದಸ್ಯರೊಡನೆ ಸಂವಹನಕ್ಕಾಗಿ ಸರಳ, ವಿಶ್ವಾಸಾರ್ಹ ಹಾಗೂ ಸುರಕ್ಷಿತ ಮಾರ್ಗವನ್ನು ನೀಡುತ್ತಿದೆ.

"ವಿಶ್ವದಲ್ಲೇ ಅತಿ ಹೆಚ್ಚು ಬಳಕೆಯಾಗುವ ಚಾಟ್ ಅಪ್ಲಿಕೇಶನ್ ಆದ ವಾಟ್ಸಾಪ್ ಅನ್ನು ನಾವು ಎಲ್ಲ ಜಿಯೋಫೋನ್‌ಗಳಲ್ಲೂ ನೀಡುತ್ತಿದ್ದೇವೆ. ಇದನ್ನು ಸಾಧ್ಯವಾಗಿಸಿದ್ದಕ್ಕಾಗಿ ಫೇಸ್‌ಬುಕ್ ಹಾಗೂ ವಾಟ್ಸ್‌ಆಪ್ ತಂಡಗಳಿಗೆ ಜಿಯೋ ಧನ್ಯವಾದ ಅರ್ಪಿಸುತ್ತದೆ." ಎಂದು ರಿಲಯನ್ಸ್ ಜಿಯೋ ಇನ್‌ಫೋಕಾಮ್ ನಿರ್ದೇಶಕ ಆಕಾಶ್ ಅಂಬಾನಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+