ಜಿಯೊ ಪೈಪೋಟಿಯಿಂದ ಏರ್ ಟೆಲ್ ಗೆ ಶೇ. 72ರಷ್ಟು ನಷ್ಟ
ಜಿಯೋ ಸಂಸ್ಥೆಯುವ ಒಡ್ಡಿರುವ ಸವಾಲುಗಳನ್ನು ದಿಟ್ಟತನದಿಂದ ಎದುರಿಸಿದ್ದರೂ ಏರ್ ಟೆಲ್ ಗೆ ಈ ಪೈಪೋಟಿಯಲ್ಲಿ ಜಯ ಸಾಧಿಸಲು ಇನ್ನೂ ಸಾಧ್ಯವಾಗಿಲ್ಲ. ಇನ್ನೊಂದೆಡೆ, ಜಿಯೋ ಕಂಪನಿಯ ಉಚಿತ ಸೇವೆಗಳು ಒಂದಿಲ್ಲೊಂದು ರೂಪದಲ್ಲಿ ಮುಂದುವರಿಯುತ್ತಲೇ ಇವೆ.
ನವದೆಹಲಿ, ಮೇ 9: ದೇಶೀಯ ದೂರಸಂಪರ್ಕ ಕ್ಷೇತ್ರದಲ್ಲಿ ಜಿಯೋ ಮೊಬೈಲ್ ಸಂಸ್ಥೆ ತನಗೆ ಒಡ್ಡುತ್ತಿರುವ ಪೈಪೋಟಿಗೆ ಸಡ್ಡು ಹೊಡೆದು ಮುನ್ನುಗ್ಗಿದರೂ ಭಾರ್ತಿ ಏರ್ ಟೆಲ್ ಸಂಸ್ಥೆಯ 2017ರ ಮಾರ್ಚ್ ತಿಂಗಳಿಗೆ ಮುಕ್ತಾಯಗೊಂಡ ಈ ವರ್ಷದ ಮೊದಲ ತ್ರೈ ಮಾಸಿಕ ಅವಧಿಯಲ್ಲಿ ಶೇ. 72ರಷ್ಟು ನಷ್ಟ ಅನುಭವಿಸಿದೆ.
ಮಂಗಳವಾರ, ಏರ್ ಟೆಲ್ ಬಿಡುಗಡೆಗೊಳಿಸಿದ ತ್ರೈ ಮಾಸಿಕ ವರದಿಯಲ್ಲಿ ಈ ನಷ್ಟವನ್ನು ಕಂಪನಿಯೇ ಖುದ್ದಾಗಿ ಉಲ್ಲೇಖಿಸಿದೆ.

ಅದರಂತೆ, ಈ ಬಾರಿಯ ತ್ರೈ ಮಾಸಿಕದ ಆದಾಯವು 21,934 ಕೋಟಿ ರು.ಗಳಷ್ಟಿದ್ದು, ಅದರ ಹಿಂದಿನ ತ್ರೈ ಮಾಸಿಕ ಅವಧಿಗೆ ಹೋಲಿಸಿದರೆ, ಶೇ. 72ರಷ್ಟು ನಷ್ಟವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.
ಕಳೆದ ವರ್ಷದಿಂದ ದೂರಸಂಪರ್ಕ ಕ್ಷೇತ್ರಕ್ಕೆ ಕಾಲಿಟ್ಟಿರುವ ರಿಲಯನ್ಸ್ ಜಿಯೋ ಸಂಸ್ಥೆ, ತನ್ನ ಉಚಿತ ಡೇಟಾ ಮುಂತಾದ ಸೌಲಭ್ಯಗಳನ್ನು ನೀಡಿ ಗ್ರಾಹಕರನ್ನು ತನ್ನತ್ತ ಸೆಳೆದುಕೊಂಡು ಸಾಗರೋಪಾದಿಯಲ್ಲಿ ಮುನ್ನುಗ್ಗುತ್ತಿದೆ.












Click it and Unblock the Notifications