• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾಳೆಯಿಂದ (ಸೆ 5) ರಿಲಯನ್ಸ್ 'ಗಿಗಾ ಸುನಾಮಿ': ಯಾವ ಯಾವ ನಗರಗಳಲ್ಲಿ ಲಭ್ಯ?

|
   ಯಾವ ನಗರಗಳಲ್ಲಿ 'ಜಿಯೋ ಗಿಗಾ ಫೈಬರ್ ಬ್ರಾಡ್ ಬ್ಯಾಂಡ್' | Oneindia Kannada

   ಮುಟ್ಟಿದನ್ನು ಯಶಸ್ವಿಯಾಗಿ ಗುರಿತಲುಪುವ ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಯಜಮಾನ ಮುಖೇಶ್ ಅಂಬಾನಿಯವರ ಬಹು ನಿರೀಕ್ಷಿತ 'ಜಿಯೋ ಗಿಗಾ ಫೈಬರ್ ಬ್ರಾಡ್ ಬ್ಯಾಂಡ್' ಸೇವೆ ನಾಳೆಯಿಂದ (ಸೆ 5), ಭಾರತದ ಹಲವು ನಗರಗಳಿಗೆ ಅಪ್ಪಳಿಸಲಿದೆ.

   ಜಿಯೋ ಸೇವೆಯನ್ನು ಆರಂಭಿಸಿ, ಸಹೋದರ ಅನಿಲ್ ಅಂಬಾನಿಯ ರಿಲಯನ್ಸ್ ಕಮ್ಯೂನಿಕೇಶನ್ ಸೇರಿದಂತೆ, ಹಲವು ಮೊಬೈಲ್ ಸಂಸ್ಥೆಗಳನ್ನು ಮಲಗಿಸಿದ್ದ ಮುಖೇಶ್, ಬ್ರಾಡ್ ಬ್ಯಾಂಡ್ ಸೇವೆಯ ಮೂಲಕ, ಇನ್ನೆಷ್ಟು ಐಎಸ್ಪಿ (ಇಂಟರ್ನೆಟ್ ಸರ್ವಿಸ್ ಪ್ರೊವೈಡರ್) ಸಂಸ್ಥೆಗಳಿಗೆ ಬಿಸಿಮುಟ್ಟಿಸಲಿದ್ದಾರೆ ಎನ್ನುವುದು ಸದ್ಯದಲ್ಲೇ ಗೊತ್ತಾಗಲಿದೆ.

   ಆಧಾರ್ ಕಾರ್ಡ್ ಮಾಡಿಸಲು ಮಾರುದ್ದದ್ದ ಕ್ಯೂ ಇರುತ್ತೋ, ಇಲ್ಲವೋ, 'ಜಿಯೋ ಸಿಮ್ ವೆಲ್ಕಂ ಆಫರ್' ಪಡೆಯಲು, ಜನರು ಸಾಲುದ್ದ ನಿಂತಿದ್ದರು. ಅದೇ, ವ್ಯಾಪಾರ ಬುದ್ದಿಯನ್ನು ಮತ್ತೆ ಮುಖೇಶ್, ಗಿಗಾ ಫೈಬರ್ ಬ್ರಾಡ್ ಬ್ಯಾಂಡ್ ಸೇವೆಗೂ ಬಳಸುತ್ತಿದ್ದಾರೆ.

   ಬ್ರಾಡ್ ಬ್ಯಾಂಡ್ ಲೋಕಕ್ಕೆ ಜಿಯೋ ಫೈಬರ್ ಸೆಪ್ಟೆಂಬರ್ 05ಕ್ಕೆ ಎಂಟ್ರಿ

   ಗಿಗಾ ಬ್ರಾಡ್ ಬ್ಯಾಂಡ್ ಸೇವೆ, ದೇಶದೆಲ್ಲಡೆ ಏಕಕಾಲದಲ್ಲಿ ಆರಂಭವಾಗುತ್ತಿಲ್ಲ. ಆಯ್ದ ನಗರಗಳಲ್ಲಿ ಮಾತ್ರ ಮೊದಲ ಹಂತದಲ್ಲಿ ಕಾರ್ಯರೂಪಕ್ಕೆ ಬರಲಿದೆ. ರಾಜ್ಯದ ಯಾವ ನಗರಗಳಲ್ಲಿ ಈ ಸೇವೆ ಲಭ್ಯವಾಗಲಿದೆ, ಗಿಗಾ ಸೇವೆಗೆ ಅಪ್ಲೈ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ:

   ದೇಶದ ಎಲ್ಲಾ ಮೆಟ್ರೋ ನಗರಗಳು, ಟೈರ್ ಒನ್ ಮತ್ತು ಟೈರ್ ಟು ಸಿಟಿ

   ದೇಶದ ಎಲ್ಲಾ ಮೆಟ್ರೋ ನಗರಗಳು, ಟೈರ್ ಒನ್ ಮತ್ತು ಟೈರ್ ಟು ಸಿಟಿ

   ಜಿಯೋ ಗಿಗಾ ಫೈಬರ್ ತನ್ನ ಅಧಿಕೃತ ವೆಬ್ಸೈಟಿನಲ್ಲಿ ನೀಡಿದ ಮಾಹಿತಿಯ ಪ್ರಕಾರ (https://jiofiber.org/) ದೇಶದ ಎಲ್ಲಾ ಮೆಟ್ರೋ ನಗರಗಳು, ಟೈರ್ ಒನ್ ಮತ್ತು ಟೈರ್ ಟು ಸಿಟಿಗಳಲ್ಲಿ ಈ ಸೇವೆ, ಸೆಪ್ಟಂಬರ್ ಐದರಿಂದ ಲಭ್ಯವಾಗಲಿದೆ. ಮಿನಿಮಮ್ 100Mbps ನಿಂದ 1Gbps ವರೆಗೆ ನೆಟ್ವರ್ಕ್ ಸ್ಪೀಡ್ ನೀಡುವುದಾಗಿ ರಿಯಲನ್ಸ್ ಗಿಗಾ ಹೇಳಿಕೊಂಡಿದೆ.

   ಮಾಸಿಕ 700 ರೂಪಾಯಿಂದ ಹಿಡಿದು, ಹತ್ತು ಸಾವಿರ ರೂಪಾಯಿವರೆಗೆ ಹಲವು ಪ್ಲಾನ್

   ಮಾಸಿಕ 700 ರೂಪಾಯಿಂದ ಹಿಡಿದು, ಹತ್ತು ಸಾವಿರ ರೂಪಾಯಿವರೆಗೆ ಹಲವು ಪ್ಲಾನ್

   ಮಾಸಿಕ 700 ರೂಪಾಯಿಂದ ಹಿಡಿದು, ಹತ್ತು ಸಾವಿರ ರೂಪಾಯಿವರೆಗೆ ಹಲವು ಪ್ಲಾನ್ ಗಳನ್ನು ಇದು ಹೊಂದಿದೆ. ಗಿಗಾ ಸೆಟ್-ಟಾಪ್-ಬಾಕ್ಸ್ ಹಾಕಿಕೊಳ್ಳಲು ಮರುಪಾವತಿಯಾಗುವ, ಒಂದು ಬಾರಿಯ ಶುಲ್ಕವನ್ನು (Refundable, one-time charges) ಇದಕ್ಕಾಗಿ ಪಾವತಿಸಬೇಕು.

   ಅಮಿತ್ ಶಾ ನಿಜವಾದ ಕರ್ಮಯೋಗಿ ಮತ್ತು ಭಾರತದ ಉಕ್ಕಿನ ಮನುಷ್ಯ: ಅಂಬಾನಿ

   ಗಿಗಾ ಸೇವೆಗೆ ಅಪ್ಲೈ ಮಾಡುವುದು ಹೇಗೆ?

   ಗಿಗಾ ಸೇವೆಗೆ ಅಪ್ಲೈ ಮಾಡುವುದು ಹೇಗೆ?

   ರಿಲಯನ್ಸ್ ಗಿಗಾಫೈಬರ್ ಅಧಿಕೃತ ಮಳಿಗೆಗೆ ಹೋಗಿ, ಅರ್ಜಿ ತುಂಬಿ, ಸಂಬಂಧ ಪಟ್ಟ ದಾಖಲೆಗಳನ್ನು ನೀಡುವ ಮೂಲಕ ಈ ಸೇವೆಯನ್ನು ಪಡೆಯಬಹುದು. ಅಥವಾ, ಗಿಗಾ ಫೈಬರ್ ವೆಬ್ಸೈಟಿಗೆ ಹೋಗಿ, ಸ್ಥಳ, ಮನೆ ಅಥವಾ ಕಚೇರಿ ಉಪಯೋಗಕ್ಕೋ ಎಂದು ನಮೂದಿಸಿದರೆ, ವಿಳಾಸ ಮತ್ತಿತರ ಮಾಹಿತಿಯನ್ನು ಕೇಳುತ್ತದೆ. ಅರ್ಜಿಯೆಲ್ಲಾ ಆನ್ಲೈನ್ ನಲ್ಲಿ ತುಂಬಿದ ನಂತರ ಮೊಬೈಲಿಗೆ ಬರುವ OTPಯನ್ನು ನಮೂದಿಸಿದರೆ, ಪರಿಶೀಲನಾ ಪ್ರಕ್ರಿಯೆ ಮುಗಿದಿದೆ, ನಮ್ಮ ಕಸ್ಟಮರ್ ಕೇರ್ ಅಧಿಕಾರಿಗಳು, ನಿಮ್ಮನ್ನು ಸಂಪರ್ಕಿಸುತ್ತಾರೆ ಎನ್ನುವ ಸಂದೇಶ ಬರುತ್ತದೆ.

   ಕರ್ನಾಟಕದ ಈ ನಗರಗಳಲ್ಲಿ ಈ ಸೇವೆ ನಾಳೆಯಿಂದ ಲಭ್ಯವಾಗಲಿದೆ

   ಕರ್ನಾಟಕದ ಈ ನಗರಗಳಲ್ಲಿ ಈ ಸೇವೆ ನಾಳೆಯಿಂದ ಲಭ್ಯವಾಗಲಿದೆ

   ಸಂಸ್ಥೆಯ ಅಂತರ್ಜಾಲದಲ್ಲಿರುವ ಮಾಹಿತಿಯ ಪ್ರಕಾರ, ಕರ್ನಾಟಕದ ಈ ನಗರಗಳಲ್ಲಿ ಈ ಸೇವೆ ನಾಳೆಯಿಂದ ಲಭ್ಯವಾಗಲಿದೆ. ಬೆಂಗಳೂರು, ಬೆಳಗಾವಿ, ಬಳ್ಳಾರಿ, ಹುಬ್ಬಳ್ಳಿ, ಧಾರವಾಡ, ಮಂಗಳೂರು, ಮೈಸೂರು, ಉಡುಪಿ, ಹಾಸನ ನಗರಗಳಲ್ಲಿ ಲಭ್ಯವಾಗಲಿದೆ.

   ಈ ಸೇವೆ, ಸೆ 5ರಿಂದ ಲಭ್ಯವಾಗಲಿದೆ

   ಈ ಸೇವೆ, ಸೆ 5ರಿಂದ ಲಭ್ಯವಾಗಲಿದೆ

   ದೇಶದ ಇತರ ಪ್ರಮುಖ ನಗರದಲ್ಲೂ ಈ ಸೇವೆ, ಸೆ 5ರಿಂದ ಲಭ್ಯವಾಗಲಿದೆ. ಅವು, ದೆಹಲಿ, ಚೆನ್ನೈ, ಕೋಲ್ಕತ್ತಾ, ಮುಂಬೈ, ಪುಣೆ, ಹೈದರಾಬಾದ್, ಜೈಪುರ, ಸೂರತ್, ವಡೋದರ, ನೋಯ್ಡಾ, ಘಾಜಿಯಾಬಾದ್, ಭುವನೇಶ್ವರ, ವಾರಣಾಸಿ, ಅಲಹಾಬಾದ್, ಸೂರತ್, ಆಗ್ರಾ, ಮೀರಠ್, ವಿಶಾಖಪಟ್ಟಣಂ, ಲಕ್ನೋ, ಪಾಟ್ನಾ, ಗುರುಗ್ರಾಮ ..ಮುಂತಾದ ನಗರಗಳು.

   English summary
   What is Jio GigaFiber broadband? Jio GigaFiber plans price. Cities which will get Jio GigaFiber broadband. JioFiber installation charges. How to book Jio GigaFiber? Here is the details.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X