ಜಿಯೋ ಡೇಟಾ ಬೂಸ್ಟರ್ ಯೋಜನೆಗಳು: 11 ರೂ.ಗಳಿಂದ ಪ್ರಾರಂಭ
ನವದೆಹಲಿ, ಜನವರಿ 14: ಭಾರತದ ಅಗ್ರಮಾನ್ಯ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ರಿಲಯನ್ಸ್ ಜಿಯೋ ಭಾರತದಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಒಳಗೊಂಡಿದೆ. ಅತಿ ಹೆಚ್ಚು ಪ್ರಿಪೇಯ್ಡ್ ಯೋಜನೆಗಳನ್ನು ಒಳಗೊಂಡಿರುವ ಜಿಯೋ ರೀಚಾರ್ಜ್ ಕೂಡ ತುಂಬಾ ಸುಲಭ.
ಇವುಗಳಲ್ಲಿ ಸಾಕಷ್ಟು ಉಚಿತ ಲಾಭದ ಯೋಜನೆಗಳು ಸೇರಿವೆ. ತನ್ನ ಪ್ರಿಪೇಯ್ಡ್ ಪ್ಲಾನ್‌ಗಳ ಜೊತೆಗೆ ಜಿಯೋ ಡೇಟಾ ಬೂಸ್ಟರ್ ಯೋಜನೆಗಳು 11 ರೂ.ಗಳಿಂದ ಪ್ರಾರಂಭವಾಗಿ 1,208 ರೂ.ವರೆಗೂ ಇದೆ.
4G ಡೌನ್ಲೋಡ್ ವೇಗದಲ್ಲಿ ಜಿಯೋಗೆ ಮತ್ತೊಮ್ಮೆ ಮೊದಲನೇ ಸ್ಥಾನ

100 ರೂಪಾಯಿ ಒಳಗಿನ ಡೇಟಾ ಬೂಸ್ಟ್‌ರ್ ಯೋಜನೆಗಳು
11 ರೂಪಾಯಿ: ಈ ಯೋಜನೆಯಲ್ಲಿ ಪ್ರಾರಂಭವಾಗುವ ಡೇಟಾ ಬೂಸ್ಟ್‌ನಲ್ಲಿ ಡೇಟಾ ವೋಚರ್ 800 ಎಂಬಿ ಸಿಗುತ್ತದೆ. ಇದರ ಸಿಂಧುತ್ವವು ನಿಮ್ಮ ಅಸ್ತಿತ್ವದಲ್ಲಿರುವ ಪ್ರಿಪೇಯ್ಡ್ ಯೋಜನೆಗೆ ಅನುಗುಣವಾಗಿರುತ್ತದೆ.
21 ರೂಪಾಯಿ: ಈ ಯೋಜನೆ 2 ಜಿಬಿ ಡೇಟಾ ಲಾಭದೊಂದಿಗೆ ಬರುತ್ತದೆ. ಈ ಯೋಜನೆಯ ವ್ಯಾಲಿಡಿಟಿ ಅಸ್ತಿತ್ವದಲ್ಲಿರುವ ಯೋಜನೆಗೆ ಸಮಾನವಾಗಿರುತ್ತದೆ.
51 ರೂಪಾಯಿ: ಈ ಯೋಜನೆ 6 ಜಿಬಿ ಡೇಟಾ ಲಾಭದೊಂದಿಗೆ ಬರುತ್ತದೆ. ಈ ಯೋಜನೆಯ ವ್ಯಾಲಿಡಿಟಿ ಅಸ್ತಿತ್ವದಲ್ಲಿರುವ ಯೋಜನೆಗೆ ಸಮಾನವಾಗಿರುತ್ತದೆ
101 ರೂಪಾಯಿ: ಈ ಯೋಜನೆ 12 ಜಿಬಿ ಡೇಟಾ ಲಾಭದೊಂದಿಗೆ ಬರುತ್ತದೆ. ಈ ಯೋಜನೆಯ ವ್ಯಾಲಿಡಿಟಿ ಅಸ್ತಿತ್ವದಲ್ಲಿರುವ ಯೋಜನೆಗೆ ಸಮಾನವಾಗಿರುತ್ತದೆ.

500 ರೂಪಾಯಿ ಒಳಗಿನ ಡೇಟಾ ಯೋಜನೆಗಳು
151 ರೂಪಾಯಿ: ವರ್ಕ್ ಫ್ರಮ್ ಯೋಜನೆಯು ಇದರಲ್ಲಿ ಸೇರಿದ್ದು, ನೀವು ಒಟ್ಟು 30 ಜಿಬಿ ಅನಿಯಮಿತ ಡೇಟಾವನ್ನು ಪಡೆಯುತ್ತೀರಿ. ಯೋಜನೆಯ ವ್ಯಾಲಿಡಿಟಿ 30 ದಿನಗಳು.
201 ರೂಪಾಯಿ: 4 ಜಿ ಡೇಟಾ 40 ಜಿಬಿ ಅನ್‌ಲಿಮಿಟೆಡ್ ಡೇಟಾವನ್ನು ನೀಡುತ್ತದೆ. ಯೋಜನೆಯ ವ್ಯಾಲಿಡಿಟಿ 30 ದಿನಗಳು.
251 ರೂಪಾಯಿ: ಈ ಬೂಸ್ಟರ್ ಯೋಜನೆ ನಿಮಗೆ 30 ದಿನಗಳ ವ್ಯಾಲಿಡಿಟಿಯೊಂದಿಗೆ ಒಟ್ಟು 50 ಜಿಬಿ ಡೇಟಾ ಪ್ರಯೋಜನವನ್ನು ನೀಡುತ್ತದೆ.
499 ರೂಪಾಯಿ: ಈ ಪ್ಯಾಕ್‌ನ ವ್ಯಾಲಿಡಿಟಿ 56 ದಿನಗಳು. 56 ದಿನಗಳವರೆಗೆ ನೀವು ಪ್ರತಿದಿನ 1.5 ಜಿಬಿ ಡೇಟಾವನ್ನು ಪಡೆಯುತ್ತೀರಿ. ಈ ಯೋಜನೆಯು ಒಂದು ವರ್ಷದ ಉಚಿತ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆಯೊಂದಿಗೆ ಬರುತ್ತದೆ.
1Gbpsಗೂ ಹೆಚ್ಚಿನ ವೇಗದ ಸಾಧಿಸಿದ ಜಿಯೋ ಮತ್ತು ಕ್ವಾಲ್ಕಾಮ್

612 ರೂಪಾಯಿ ಮತ್ತು 1004 ರೂಪಾಯಿ ಯೋಜನೆ
612 ರೂಪಾಯಿ ಯೋಜನೆಯಲ್ಲಿ ನೀವು 72 ಜಿಬಿ ಡೇಟಾವನ್ನು ಪಡೆಯುತ್ತೀರಿ. ನೀವು ಒಂದು ವರ್ಷದ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಪಡೆಯುತ್ತೀರಿ. ಇನ್ನು 1004 ರೂಪಾಯಿ ಯೋಜನೆಯಲ್ಲಿ ಒಟ್ಟು 120 ದಿನಗಳ ವ್ಯಾಲಿಡಿಟಿ ಜೊತೆಗೆ 200 ಜಿಬಿ ಡೇಟಾವನ್ನು ಪಡೆಯುತ್ತೀರಿ.
ನಾಲ್ಕು ಕೂಪನ್ ರೀತಿಯಲ್ಲಿ ಈ ಯೋಜನೆ ಸಿಗಲಿದ್ದು, ಪ್ರತಿ ಪ್ಯಾಕ್‌ನಲ್ಲಿ 50 ಜಿಬಿ ಡೇಟಾ ಲಭ್ಯವಿದೆ. ಪ್ರತಿ ಪ್ಯಾಕ್‌ನ ವ್ಯಾಲಿಡಿಟಿ 30 ದಿನಗಳಾಗಿದ್ದು, ಒಂದು ವರ್ಷದ ಡಿಸ್ನಿ + ಹೋಸ್ಟರ್ ವಿಐಪಿ ಚಂದಾದಾರಿಕೆಯನ್ನು ಸಹ ಪಡೆಯುತ್ತೀರಿ.

1206 ರೂಪಾಯಿ ಯೋಜನೆ
ಈ ಬೂಸ್ಟರ್ ಯೋಜನೆ 180 ದಿನಗಳವರೆಗೆ ವ್ಯಾಲಿಡಿಟಿ ಹೊಂದಿದೆ ಮತ್ತು ನೀವು ಒಟ್ಟು 240 ಜಿಬಿ ಡೇಟಾ ಪ್ರಯೋಜನವನ್ನು ಪಡೆಯುತ್ತೀರಿ. ಈ ಯೋಜನೆಯಲ್ಲಿ ನೀವು ಕೂಪನ್ ಪಡೆಯುತ್ತೀರಿ ಮತ್ತು ಪ್ರತಿ ಕೂಪನ್ 30 ದಿನಗಳವರೆಗೆ ಮಾನ್ಯವಾಗಿರುತ್ತದೆ. ಪ್ರತಿ ಕಾರ್ಡ್ 40 ಜಿಬಿ ಡೇಟಾದೊಂದಿಗೆ ಬರುತ್ತದೆ. ಈ ಬೂಸ್ಟರ್ ಯೋಜನೆಯಲ್ಲಿ ನೀವು ಒಂದು ವರ್ಷದ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಸಹ ಪಡೆಯುತ್ತೀರಿ