ಬರಲಿದೆ ಜೀಪ್ 7 ಸೀಟರ್ ಎಸ್‌ಯುವಿ: ಪವರ್‌ಫುಲ್ 2.0 ಡೀಸೆಲ್ ಎಂಜಿನ್

ನವದೆಹಲಿ, ನವೆಂಬರ್ 30: ಅಮೆರಿಕಾದ ವಾಹನ ತಯಾರಕ ಕಂಪನಿಯು ಏಳು ಆಸನಗಳ ಎಸ್‌ಯುವಿಯನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ದೃಢಪಡಿಸಿದೆ. ಈ ಮೂಲಕ ಜೀಪ್ ಕಂಪನಿಯ ಸರಣಿಯಲ್ಲಿ ಕಂಪಾಸ್ ಎಸ್‍ಯುವಿ ಪವರ್‌ಫುಲ್ 2.0 ಡೀಸೆಲ್ ಎಂಜಿನ್ ಮಾರುಕಟ್ಟೆಗೆ ಬರಲಿದೆ.

2021ರ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಕಂಪನಿ ಸಿದ್ದತೆ ನಡೆಸಿದೆ. ಜೀಪ್ ಕಂಪಾಸ್ 3 ಸಾಲಿನ 7 ಸೀಟುಗಳನ್ನು ಹೊಂದಿರುವ ಎಸ್‍ಯುವಿಯಾಗಿದೆ. ಸಾಮಾನ್ಯ ಕಂಪಾಸ್‌ಗೆ ಹೋಲಿಸಿದರೆ ಜೀಪ್ ಗ್ರ್ಯಾಂಡ್ ಕಂಪಾಸ್ ಮುಂದೆ ವ್ಹೀಲ್ ಬೇಸ್ ನೊಂದಿಗೆ ಬರುವ ನಿರೀಕ್ಷೆಯಿದೆ.

ಜೀಪ್ ಕಂಪಾಸ್ 7-ಸೀಟರ್ ಎಸ್‍ಯುವಿಯು ಭಾರತದಲ್ಲಿ ಹಲವು ಬಾರಿ ಸ್ಪಾಟ್ ಟೆಸ್ಟ್ ನಡೆಸಿದೆ. ಹೆಕ್ಟರ್ ಪ್ಲಸ್‌ನೊಂದಿಗೆ ಎಂಜಿ ಮತ್ತು ಟಾಟಾ ಗ್ರ್ಯಾವಿಟಾಸ್‌ನೊಂದಿಗೆ ಟಾಟಾ ಮೋಟಾರ್ಸ್ ಅನ್ನು ಇದು ಹೋಲುತ್ತದೆ. ಈ ಜೀಪ್ ಕಂಪಾಸ್ 7-ಸೀಟರ್ ಎಸ್‍ಯುವಿಯಲ್ಲಿ 2.0-ಲೀಟರ್, ನಾಲ್ಕು ಸಿಲಿಂಡರ್, ಮಲ್ಟಿಜೆಟ್ ಟರ್ಬೊ ಡೀಸೆಲ್ ಎಂಜಿನ್ ಅನ್ನು ಹೊಂದಿರುತ್ತದೆ.

Jeep 7 Seater SUV: Most Powerfull Version Of Compass 2.0 Litre Diesel Engine

ಈ ಡೀಸೆಲ್ ಎಂಜಿನ್ 200 ಬಿಹೆಚ್‌ಪಿ ಉತ್ಪಾದಿಸುವಂತೆ ಟ್ಯೂನ್ ಮಾಡಲಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಜೀಪ್ ಗ್ರ್ಯಾಂಡ್ ಕಂಪಾಸ್ ಎಸ್‍ಯುವಿಯ 2.0-ಲೀಟರ್ ಎಂಜಿನ್ 173 ಬಿಹೆಚ್‍ಪಿ ಪವರ್ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು 9-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯಾಗಿ ಜೋಡಿಸಿದೆ. ಆದರೆ ಹೊಸ ಎಂಜಿನ್ ಆಯ್ಕೆಯು ಹಿಂದಿನ ಮಾದರಿಗೆ ಹೋಲಿಸಿದರೆ ಹೆಚ್ಚು ಪವರ್‌ಫುಲ್ ಆಗಿದೆ.

ಜೀಪ್ 7 ಆಸನಗಳ ಎಸ್‌ಯುವಿಯ ಹೆಚ್ಚು ಫೋಟೋಗಳು ಹೊರಬಿದ್ದಿಲ್ಲ. ಕಾರಿನ ಒಟ್ಟಾರೆ ವಿನ್ಯಾಸವು ಪ್ರಸ್ತುತ ಕಂಪಾಸ್‌ನಂತೆಯೇ ಇರುತ್ತದೆ. ಹೊಸ ಜೀಪ್ ಕಾರು ಹಿಂಭಾಗದ ತುದಿಯಲ್ಲಿ ಸ್ವಲ್ಪ ಬದಲಾವಣೆಗಳನ್ನು ಹೊಂದಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+