ಇಪಿಎಸ್ ಉದ್ಯೋಗಿಗಳ ಕನಿಷ್ಠ ಪಿಂಚಣಿ ಮೊತ್ತ ದುಪ್ಪಟ್ಟು ಸಾಧ್ಯತೆ

ನವದೆಹಲಿ, ಮಾರ್ಚ್ 16: ಉದ್ಯೋಗಿಗಳ ಪಿಂಚಣಿ ಯೋಜನೆ (ಇಪಿಎಸ್)ಯಡಿಯಲ್ಲಿನ ಪಿಂಚಣಿ ಮೊತ್ತವು ದುಪ್ಪಟ್ಟಾಗುವ ಸಾಧ್ಯತೆ ಇದೆ. ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್ಒ)ಗೆ ಒಳಪಡುವ ಕಾರ್ಮಿಕರಿಗೆ ಈ ಸೌಲಭ್ಯ ಸಿಗಲಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಸದ್ಯ ಕನಿಷ್ಠ ಪಿಂಚಣಿ ರೂ. 1000 ವಾಗಿದೆ. ಇದನ್ನು ರೂ. 2000ಕ್ಕೆ ಏರಿಕೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಒಂದೊಮ್ಮೆ ಇದು ಜಾರಿಯಾದರೆ 40ಲಕ್ಷ ಜನರಿಗೆ ಇದರ ಫಲ ಸಿಗಲಿದೆ.

ಇಪಿಎಸ್ -95 ಯೋಜನೆಗಳಡಿಯಲ್ಲಿ 60 ಲಕ್ಷ ಜನರಿದ್ದಾರೆ. ಇದರಲ್ಲಿ ತಿಂಗಳಿಗೆ ರೂ. 1,500ಕ್ಕಿಂತ ಕಡಿಮೆ ಪಿಂಚಣಿ ಪಡೆಯುವವರ ಸಂಖ್ಯೆ 40 ಲಕ್ಷ. ಇವರ ಕನಿಷ್ಠ ಪಿಂಚಣಿಯಲ್ಲಿ ರೂ. 1,000 ರೂಪಾಯಿಗಳಷ್ಟು ಏರಿಕೆ ಮಾಡುವಂತೆ ಕಾರ್ಮಿಕ ಸಂಘಟನೆಗಳು ಮತ್ತು ಸಂಸದೀಯ ಸಮಿತಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿತ್ತು.

Jackpot for Employees’ Pension Scheme pensioners

ದೇಶದಲ್ಲಿ ಇನ್ನೇನು ಒಂದು ವರ್ಷದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು ಈ ಹಿನ್ನಲೆಯಲ್ಲಿ ಪಿಂಚಣಿ ಏರಿಕೆ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ. ಒಂದೊಮ್ಮೆ ಕನಿಷ್ಠ ಪಿಂಚಣಿ ಏರಿಕೆ ಮಾಡಿದರೆ ಪ್ರತಿ ವರ್ಷ ಕೇಂದ್ರ ಸರ್ಕಾರಕ್ಕೆ ಹೆಚ್ಚುವರಿ 3,000 ಕೋಟಿ ರೂ. ವೆಚ್ಚ ತಗುಲಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+