ನಿಮ್ಮ ಖಾತೆಗೆ ಐಟಿಆರ್ ಹಣ ಯಾವಾಗ ಬರುತ್ತದೆ ? ರಿಫಂಡ್ ಸ್ಟೇಟಸ್ ಈ ರೀತಿ ಚೆಕ್ ಮಾಡಿ
ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಕೆಗೆ ವಿಧಿಸಲಾಗಿದ್ದ ಗಡುವು ಮುಗಿದಿದೆ. ಜುಲೈ 31 ರ ವೇಳೆಗೆ 2026-27ರ ವರ್ಷಕ್ಕೆ ಸಂಬಂಧಿಸದಂತೆ 5.9 ಕೋಟಿಗೂ ಹೆಚ್ಚು ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ದೃಢಪಡಿಸಿದೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರಂ X ನಲ್ಲಿ ಪೋಸ್ಟ್ ಮಾಡಿರುವ ಇಲಾಖೆ, ಎಲ್ಲರಿಗೂ ಧನ್ಯವಾದ ಹೇಳಿದೆ. ಜುಲೈ 31 ರ ವೇಳೆಗೆ 2026-27 ನೇ ಸಾಲಿಗೆ 5.9 ಕೋಟಿಗೂ ಹೆಚ್ಚು ಐಟಿಆರ್‌ಗಳನ್ನು ಸಲ್ಲಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ. ನಿಮ್ಮ ನಂಬಿಕೆ ಮತ್ತು ನಿಗದಿತ ಸಮಯದೊಳಗೆ ತೆರಿಗೆ ಸಲ್ಲಿಸುವ ಕ್ರಮದಿಂದ ದೇಶದ ಬೆಳವಣಿಗೆಗೆ ಶಕ್ತಿ ತುಂಬುತ್ತದೆ ಎಂದು ಹೇಳಿದೆ.

ಐಟಿ ಇಲಾಖೆಯು ರಿಟರ್ನ್‌ಗಳನ್ನು ಪ್ರೊಸೆಸ್ ಮಾಡುವ ಪ್ರಕ್ರಿಯೆ ಶುರು ಮಾಡಿದೆ. ಹಾಗಾಗಿ, ಐಟಿಆರ್ ಸಲ್ಲಿಸಿದವರು ಶೀಘ್ರದಲ್ಲೇ ರಿಟರ್ನ್ ಪಡೆಯುತ್ತಾರೆ ಎಂದು ಹೇಳಿದೆ. ಈ ತೆರಿಗೆದಾರರು ತಮ್ಮ ಐಟಿ ರಿಫಂಡ್ ಸ್ಟೇಟಸ್ ಅನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು. ತೆರಿಗೆ ರಿಫಂಡ್ ಸ್ಟೇಟಸ್ ಅನ್ನು ಹೇಗೆ ಪರಿಶೀಲಿಸುವುದು ಎಂಬುದರ ಕುರಿತ ವಿವರವಾದ ಮಾಹಿತಿ ಇಲ್ಲಿದೆ.
ಐಟಿಆರ್ ಮತ್ತು ರಿಟರ್ನ್ ಸ್ಟೇಟಸ್ ಅನ್ನು ಆನ್‌ಲೈನ್‌ನಲ್ಲಿ ಈ ರೀತಿ ಚೆಕ್ ಮಾಡಿ :
ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ಅಥವಾ NSDL TIN ವೆಬ್‌ಸೈಟ್ ಮೂಲಕ ನಿಮ್ಮ ರಿಫಂಡ್ ಸ್ಟೇಟಸ್ ಅನ್ನು ಆನ್‌ಲೈನ್‌ನಲ್ಲಿಯೇ ಚೆಕ್ ಮಾಡಬಹುದು.
ಐಟಿಆರ್ ಸ್ಟೇಟಸ್ ಪರಿಶೀಲಿಸಲು, ಈ ಹಂತಗಳನ್ನು ಅನುಸರಿಸಿ
* ಆದಾಯ ತೆರಿಗೆ ಪೋರ್ಟಲ್‌ಗೆ ಹೋಗಿ
* ಇನ್‌ಕಂ ಟ್ಯಾಕ್ಸ್ ರಿಟರ್ನ್ ಸ್ಟೇಟಸ್ ಲಿಂಕ್ ಮೇಲೆ ಕ್ಲಿಕ್ ಮಾಡಿ
* ನಿಮ್ಮ ಎಕ್ನಾಲೆಜ್ಡ್ ನಂಬರ್ ಮತ್ತು ಸರಿಯಾದ ಮೊಬೈಲ್ ನಂಬರ್ ಅನ್ನು ಹಾಕಿ. ಕಂಟಿನ್ಯೂ ಮೇಲೆ ಕ್ಲಿಕ್ ಮಾಡಿ.
* ನಿಮ್ಮ ಮೊಬೈಲ್ ನಂಬರ್‌ಗೆ ಬಂದ 6-ಅಂಕಿಯ OTP ಅನ್ನು ಹಾಕಿ ಸಬ್ಮಿಟ್ ಬಟನ್ ಒತ್ತಿ.
* ಸಕ್ಸಸ್ ಫುಲ್ ವ್ಯಾಲಿಡೇಶನ್ ನಂತರ ITR ಸ್ಟೇಟಸ್ ನೋಡಬಹುದು.
ರಿಫಂಡ್ ಸ್ಟೇಟಸ್ ಚೆಕ್ ಮಾಡುವುದು ಹೇಗೆ?
ಐಟಿಆರ್ ರಿಫಂಡ್ ಸ್ಟೇಟಸ್ ಪರಿಶೀಲಿಸಲು, ಈ ಹಂತಗಳನ್ನು ಅನುಸರಿಸಿ:
* ಆದಾಯ ತೆರಿಗೆ ಪೋರ್ಟಲ್‌ನ ಮುಖಪುಟದಲ್ಲಿರುವ ರಿಫಂಡ್ ಸ್ಟೇಟಸ್ ಲಿಂಕ್ ಮೇಲೆ ಕ್ಲಿಕ್ ಮಾಡಿ.
* ಪ್ಯಾನ್, ಮೌಲ್ಯಮಾಪನ ವರ್ಷ ಮತ್ತು ಮೊಬೈಲ್ ನಂಬರ್ ಅನ್ನು ಹಾಕಿ.
* OTP ಬಂದ ನಂತರ ಕೊಟ್ಟಿರುವ ಸ್ಥಳದಲ್ಲಿ ಹಾಕಿ
* ಈಗ ರಿಫಂಡ್ ಸ್ಟೇಟಸ್ ಕಾಣಿಸುತ್ತದೆ.
ಆದರೂ, ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ, ನಿಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದ ಕಾರಣ ಅದು ನಿಷ್ಕ್ರಿಯವಾಗಿದೆ ಎಂದು ಹೇಳುವ ಪಾಪ್-ಅಪ್ ಮೆಸೇಜ್ ಬರಬಹುದು. ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು, ಲಿಂಕ್ ನೌ ಬಟನ್ ಕ್ಲಿಕ್ ಮಾಡಿ ಇಲ್ಲಾ ಕಂಟಿನ್ಯೂ ಬಟನ್ ಕ್ಲಿಕ್ ಮಾಡಬಹುದು.
ಆಗಸ್ಟ್ 31 ರ ಗಡುವು ಯಾರಿಗೆ?
ಆದರೆ, ಈ ವರ್ಷ, ಸರ್ಕಾರವು ಕೆಲವು ವರ್ಗದ ತೆರಿಗೆದಾರರಿಗೆ ಐಟಿಆರ್ ಸಲ್ಲಿಸುವ ಗಡುವನ್ನು ಜುಲೈ 31 ರಿಂದ ಆಗಸ್ಟ್ 31, 2026 ರವರೆಗೆ ವಿಸ್ತರಿಸಿದೆ. ಈ ಅವಕಾಶ ಎಲ್ಲಾ ತೆರಿಗೆದಾರರಿಗೆ ಸಿಗುವುದಿಲ್ಲ ಎನ್ನುವುದು ಗಮನಿಸಬೇಕಾದ ವಿಷಯ.
ಯಾರಿಗೆ ಹೆಚ್ಚುವರಿ ಸಮಯ ಸಿಗುತ್ತದೆ?
ಹೊಸ ವ್ಯವಸ್ಥೆಯ ಪ್ರಕಾರ, ವ್ಯವಹಾರ ಅಥವಾ ವೃತ್ತಿಯಿಂದ ಆದಾಯ ಗಳಿಸುವ ತೆರಿಗೆದಾರರು, ಅಂದರೆ ತೆರಿಗೆ ಲೆಕ್ಕಪರಿಶೋಧನೆಗೆ ಒಳಗಾಗುವ ಅಗತ್ಯವಿಲ್ಲದವರು, ಆಗಸ್ಟ್ 31, 2026 ರೊಳಗೆ ತಮ್ಮ ಐಟಿಆರ್ ಅನ್ನು ಸಲ್ಲಿಸಬಹುದು.
ಇದು ಮುಖ್ಯವಾಗಿ ಐಟಿಆರ್-3 ಮತ್ತು ಐಟಿಆರ್-4 ಫಾರ್ಮ್‌ಗಳನ್ನು ಸಲ್ಲಿಸುವ ತೆರಿಗೆದಾರರನ್ನು ಒಳಗೊಂಡಿದೆ.
ಹೆಚ್ಚುವರಿಯಾಗಿ, ಕೆಲವು ಟ್ರಸ್ಟ್‌ಗಳು ಈ ವಿಸ್ತೃತ ಗಡುವಿನ ಪ್ರಯೋಜನ ಪಡೆಯುತ್ತವೆ.
ಐಟಿಆರ್ ಸಲ್ಲಿಸುವಲ್ಲಿ ವಿಳಂಬವಾದರೆ ಏನಾಗುತ್ತದೆ?
ತಮ್ಮ ವರ್ಗಕ್ಕೆ ಅನ್ವಯವಾಗುವ ಗಡುವನ್ನು ಮೀರಿ ಐಟಿಆರ್ ಸಲ್ಲಿಸುವ ತೆರಿಗೆದಾರರು ಈ ಕೆಳಗಿನ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ:
* ಲೇಟ್ ಫೀಸ್
* ಬಡ್ಡಿ
* ಕೆಲವು ತೆರಿಗೆ ಪ್ರಯೋಜನಗಳ ನಷ್ಟ


Click it and Unblock the Notifications
