2 ಲಕ್ಷಕ್ಕಿಂತಲೂ ಅಧಿಕ ನಗದು ವ್ಯವಹಾರ ನಡೆಸಿದರೆ ಶೇ.100ರಷ್ಟು ದಂಡ
ನವದೆಹಲಿ, ಜೂನ್ 02 : ಎರಡು ಲಕ್ಷ ರುಪಾಯಿ ಅಥವಾ ಅದಕ್ಕಿಂತ ಹೆಚ್ಚು ನಗದು ವಹಿವಾಟು ನಡೆಸುವವರಿಗೆ ಅಷ್ಟೇ ಪ್ರಮಾಣದ ದಂಡ ಹಾಕುವುದಾಗಿ ಶುಕ್ರವಾರ ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ.
ಇದೇ ವೇಳೆ ಅಕ್ರಮವಾಗಿ ಎರಡು ಲಕ್ಷ ರುಪಾಯಿಗಿಂತ ಹೆಚ್ಚು ನಗದು ವಹಿವಾಟು ನಡೆಸುವವರ ಬಗ್ಗೆ ಮಾಹಿತಿ ಇದ್ದರೆ ಈ ಕುರಿತು '[email protected]' ಗೆ ಮೇಲ್ ಮಾಡುವಂತೆ ಆದಾಯ ತೆರಿಗೆ ಇಲಾಖೆ ಜನತೆಯನ್ನು ಕೋರಿದೆ.[2 ಲಕ್ಷ ರುಪಾಯಿ ಮೇಲಿನ ಆಭರಣದ ನಗದು ಖರೀದಿಗೆ ಶೇ 1ರಷ್ಟು ತೆರಿಗೆ]

ಕಪ್ಪು ಹಣ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಏಪ್ರಿಲ್ 1, 2017ರಿಂದ ಎರಡು ಲಕ್ಷ ಅಥವಾ ಅದಕ್ಕಿಂತ ಹೆಚ್ಚು ನಗದು ವಹಿವಾಟನ್ನು ನಿಷೇಧಿಸಿದೆ.
ಒಂದೇ ವಹಿವಾಟಿನಲ್ಲಿ ಅಥವಾ ಒಂದೇ ಸಂದರ್ಭ, ಓರ್ವ ವ್ಯಕ್ತಿಗೆ ಸಂಬಂಧಪಟ್ಟಂತೆ 2 ಲಕ್ಷಕ್ಕಿಂತಲೂ ಅಧಿಕ ನಗದು ವ್ಯವಹಾರವನ್ನು ಯಾರೂ ನಡೆಸುವಂತಿಲ್ಲ.
ಒಂದು ವೇಳೆ 2 ಲಕ್ಷಕ್ಕಿಂತಲೂ ಅಧಿಕ ನಗದು ವ್ಯವಹಾರವ ನಡೆಸಿದರೆ ಆದಾಯ ತೆರಿಗೆ ನೀತಿಯ ಸೆಕ್ಷನ್ 269ST ಅನ್ವಯ ಅಪರಾಧಿಗಳಿಗೆ ಶೇ.100ರಷ್ಟು ದಂಡ ವಿಧಿಸಲಾಗುತ್ತದೆ.
ಕಳೆದ ಮಾರ್ಚ್ ನಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಿದ 2017-18 ಬಜೆಟ್ ನಲ್ಲಿ ನಗದು ವಹಿವಾಟಿನ ಮಿತಿಯನ್ನು ಮೂರು ಲಕ್ಷ ರು.ನಿಂದ 2 ಲಕ್ಷ ರು,ಗೆ ಇಳಿಸಿದ್ದರು.












Click it and Unblock the Notifications