ಎಚ್ಸಿಎಲ್ ಉದ್ಯೋಗಿಗಳಿಗೆ ಬಂಪರ್, ಬೆಂಜ್ ಕಾರು ಗಿಫ್ಟ್
ಬೆಂಗಳೂರು, ಜುಲೈ 21: ಪ್ರಮುಖ ಐಟಿ ಸಂಸ್ಥೆ ಎಚ್ ಸಿ ಎಲ್ ತನ್ನ ಉದ್ಯೋಗಿಗಳಿಗೆ ಪ್ರೋತ್ಸಾಹ ನೀಡಲು ಈ ಹಿಂದೆ ನೀಡುತ್ತಿದ್ದಂತೆ ಮತ್ತೊಮ್ಮೆ ಬೆಂಜ್ ಕಾರು ಗಿಫ್ಟ್ ಮಾಡಲು ಮುಂದಾಗಿದೆ.
ಕೋವಿಡ್ 19 ಸಾಂಕ್ರಾಮಿಕದ ಎರಡೂ ಅಲೆಗಳಲ್ಲೂ ಉದ್ಯೋಗಿಗಳನ್ನು ಉಳಿಸಿಕೊಳ್ಳುವಲ್ಲಿ ಎಚ್ ಸಿ ಎಲ್ ಸಂಸ್ಥೆ ಹೆಚ್ಚಿನ ಕಾಳಜಿ ವಹಿಸಿತ್ತು. ಹೊಸ ನೇಮಕಾತಿಗೆ ತಗುಲುವ ವೆಚ್ಚ ಶೇ 20% ಅಧಿಕವಾಗಲಿದೆ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಎಚ್ ಸಿ ಎಲ್ ಜನಪ್ರಿಯ ಯೋಜನೆಯನ್ನು ಪುನಃ ಆರಂಭಿಸಿದೆ.
''2013ರಲ್ಲಿ ಸಂಸ್ಥೆಯ ಉತ್ತಮ ಕಾರ್ಯನಿರ್ವಹಣೆ ತೋರಿದ ಉದ್ಯೋಗಿಗಳಿಗೆ 50 ಮರ್ಸಿಡಿಸ್ ಬೆಂಜ್ ಕಾರುಗಳನ್ನು ಉಡುಗೊರೆಯನ್ನು ನೀಡಲಾಗಿತ್ತು. ಆದರೆ, ನಂತರ ಈ ಬೋನಸ್ ವಿಧಾನ ಸ್ಥಗಿತಗೊಳಿಸಲಾಗಿತ್ತು. ಆದರೆ, ಮತ್ತೊಮ್ಮೆ ಈ ರೀತಿ ಬೋನಸ್ ನೀಡಲು ಸಂಸ್ಥೆ ಮುಂದಾಗಿದೆ,'' ಎಂದು ಮಾನವ ಸಂಪನ್ಮೂಲ ಅಧಿಕಾರಿ ಅಪ್ಪಾರಾವ್ ವಿವಿ ಹೇಳಿದ್ದಾರೆ.

ಸಿಟಿಸಿ (Cost-to-company)ಗೆ ಅನುಗುಣವಾಗಿ ಶೇ 25 ರಿಂದ 30 ರಷ್ಟು ಕೌಶಲ್ಯ ಆಧಾರಿತ ಭತ್ಯೆ ನೀಡಲಾಗುತ್ತದೆ. ವರ್ಷದಿಂದ ವರ್ಷಕ್ಕೆ ಈ ರೀತಿ ಭತ್ಯೆ ಪಡೆಯುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ಮಾನವ ಸಂಪನ್ಮೂಲ ಅಧಿಕಾರಿ ಅಪ್ಪಾರಾವ್ ವಿವಿ ಹೇಳಿದ್ದಾರೆ.
ಬದಲಿ ನೇಮಕಾತಿ ವೆಚ್ಚ ಶೇ 15-20 ರಷ್ಟು ಅಧಿಕವಾಗಿದೆ. ಕೌಶಲ್ಯಕ್ಕೆ ತಕ್ಕಂತೆ ನೇಮಕಾತಿ ನಡೆದಿದೆ. ಜಾವಾ ಡೆವಲಪರ್ ನೇಮಕಕ್ಕೆ ತಗುಲುವ ವೆಚ್ಚಕ್ಕೆ ಕ್ಲೌಡ್ ವೃತ್ತಿಪರರನ್ನು ನೇಮಿಸಿಕೊಳ್ಳಲು ಸಾಧ್ಯವಿಲ್ಲ. ಪ್ರಸಕ್ತ ಆರ್ಥಿಕ ವರ್ಷದಲ್ಲಿ 22,000 ಫ್ರೆಶರ್ಸ್ ನೇಮಕಾತಿ ಮಾಡಿಕೊಳ್ಳಲಾಗಿದ್ದು, ಕಳೆದ ವರ್ಷ 15,600 ನೇಮಕ ಮಾಡಿಕೊಳ್ಳಲಾಗಿತ್ತು.
ಮೂರು ವರ್ಷಗಳ ಕ್ಯಾಶ್ ಬೋನಸ್ ಯೋಜನೆ ಜಾರಿಗೊಳಿಸಲಾಗಿದೆ. ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಕೋವಿಡ್ ಕಾಲದಲ್ಲೂ ಬೋನಸ್ ನೀಡಲಾಗುತ್ತಿದೆ. ಶೇ 11.8ರಷ್ಟು ಆಟ್ರಿಷನ್ ದರ ಉಳಿಸಿಕೊಂಡಿದೆ. ಎಚ್ಸಿಎಲ್ ಒಟ್ಟಾರೆ 1,68, 977 ಉದ್ಯೋಗಿಗಳನ್ನು ಹೊಂದಿದ್ದು, ಆಟ್ರಿಷನ್ ದರ ಶೇ 16 ರಿಂದ ಶೇ 11.8ಕ್ಕೆ ಇಳಿಕೆಯಾಗಿದೆ. ಪ್ರಸಕ್ತ ವರ್ಷದಲ್ಲಿ ಈ ಟಾಪ್ 3 ಕಂಪನಿಗಳಲ್ಲದೆ ಎಚ್ಸಿಎಲ್ ಟೆಕ್ ಸೇರಿದಂತೆ ಸುಮಾರು 1 ಲಕ್ಷ ಫ್ರೆಶರ್ಸ್ ನೇಮಕ ಮಾಡಿಕೊಳ್ಳುವುದಾಗಿ ಘೋಷಿಸಿವೆ.
ಇನ್ಫೋಸಿಸ್ ಶೇ 13.9 ರಷ್ಟು ಆಟ್ರಿಷನ್ ಹೊಂದಿದೆ. ಆನ್ ಸೈಟ್ ಆಟ್ರಿಷನ್ ದರ ಶೇ 24.3 ರಷ್ಟಿದೆ. ವಿಪ್ರೋ ಆಟ್ರಿಷನ್ ದರ ಶೇ 15.5 ಕ್ಕೇರಿದೆ. 10,000 ಉದ್ಯೋಗಿಗಳಿಗೆ ಬಡ್ತಿ ನೀಡಿದೆ. 12,000 ಫ್ರೆಶರ್ಸ್, 30,000 ಕ್ಯಾಂಪಸ್ ಆಫರ್ಸ್ ಮುಂದಿನ ಪ್ರಸಕ್ತ ವರ್ಷಕ್ಕೆ ನೇಮಕಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications