Intel Lays Off: 15 ಸಾವಿರ ಉದ್ಯೋಗಿಗಳ ಕಡಿತಕ್ಕೆ ಮುಂದಾದ ಇಂಟೆಲ್
ಆರ್ಥಿಕ ಹಿಂಜರಿತ ಭೀತಿಯ ಹಿನ್ನೆಲೆ ಟೆಕ್ ಕಂಪನಿ ಇಂಟೆಲ್ ತನ್ನ ಉದ್ಯೋಗಿಗಳನ್ನು ಕಡಿತ ಮಾಡಲು ಮುಂದಾಗಿದೆ. ಗುರುವಾರ 15 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳಿಗೆ ಮೆಮೊ ನೀಡಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಉದ್ಯೋಗಿಗಳನ್ನು ವಜಾಗೊಳಿಸುವದರಿಂದ ಕಂಪನಿಯಲ್ಲಿ ಶೇಕಡಾ 15 ರಷ್ಟು ಉದ್ಯೋಗಿಗಳ ಸಂಖ್ಯೆ ಕಡಿತವಾಗಿದೆ.
ಇಂಟೆಲ್ ಕಳೆದ ವರ್ಷದ ಕೊನೆಯಲ್ಲಿ 1.24 ಲಕ್ಷ ಉದ್ಯೋಗಿಗಳನ್ನು ಹೊಂದಿತ್ತು. ಈಗ ಬಹುರಾಷ್ಟ್ರೀಯ ಕಂಪನಿ ಜೂನ್‌ನಲ್ಲಿ ತಮ್ಮ ಮುಂದಿನ ಪ್ರಾಜಕ್ಟ್‌ಗಳನ್ನು ಸದ್ಯ ನಿಲ್ಲಿಸುವುದಾಗಿ ಘೋಷಿಸಿದೆ. ಕಂಪನಿಗೆ ಎರಡನೇ ತ್ರೈಮಾಸಿಕದಲ್ಲಿ ಆದ ಕುಸಿತದಿಂದ ಕಂಪನಿಯು ತನ್ನ ಹಲವು ಯೋಜನೆಗಳನ್ನು ನಿಲ್ಲಿಸಿದೆ. ಅಲ್ಲದೆ 2025ರ ವೇಳೆಗೆ ಹತ್ತು ಶತಕೋಟಿ ಡಾಲರ್‌ಗಳಷ್ಟು ವೆಚ್ಚವನ್ನು ಕಡಿಮೆ ಮಾಡಲು ಯೋಜಿಸಿದೆ.

ಉದ್ಯೋಗ ಕಡಿತ
ಈ ಬಗ್ಗೆ ಉದ್ಯಗಿಗಗಳಿಗೆ ಕಳಿಸಲಾದ ಇಮೇಲ್‌ನಲ್ಲಿ ಇಂಟೆಲ್ ಸಿಇಒ ಪ್ಯಾಟ್ ಗೆಲ್ಸಿಂಗರ್ ಉದ್ಯೊಗಳಿಗೆ ಕಳುಸಿದ ಮೇಲ್‌ನಲ್ಲಿ ನಮ್ಮ ಕಂಪನಿ ಆದಾಯ ನಿರೀಕ್ಷೆ ಎಷ್ಟು ಬೆಳೆಯಲಿಲ್ಲ. ಅಲ್ಲದೆ ಎಐ ತಂತ್ರಜ್ಞಾನಗಳ ಸಂಪೂರ್ಣ ಪ್ರಯೋಜನವನ್ನು ಹೊಂದಿಲ್ಲ ಎಂದು ತಿಳಿಸಿದೆ. ಇತ್ತೀಚಿಗೆ ನಮ್ಮ ವೆಚ್ಚಗಳು ಹೆಚ್ಚಾಗಿದ್ದು, ಇದನ್ನು ಸರಿದೂಗಿಸಲು ಕಂಪನಿ ದಿಟ್ಟ ಕ್ರಮ ಕೈಗೊಳ್ಳಬೇಕಿದೆ ಎಂದು ತಿಳಿಸಿದರು.
ವೆಚ್ಚ ಕಡಿತಕ್ಕೆ ನಿರ್ಧಾರ
ಇನ್ನು ವರದಿಯ ಪ್ರಕಾರ ಇಂಟೆಲ್ ತನ್ನ 19,000 ಉದ್ಯೋಗಿಗಳನ್ನು ಕೈ ಬಿಡುವ ಸಾಧ್ಯತೆ ಇದೆ. ಕಂಪನಿ ತನ್ನ ಸಂಧೋಧನೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತಹ ವೆಚ್ಚಗಳನ್ನು ಪ್ರತಿ ವರ್ಷವೂ ಕಡಿಮೆ ಮಾಡುತ್ತಲೆ ಇದೆ. ಮುಂದಿನ ವರ್ಷದಿಂದ ಕಂಪನಿ ಪ್ರತಿ ವರ್ಷ ಶತಕೋಟಿ ಡಾಲರ್‌ಗಳಷ್ಟು ಕಡಿತ ಗೊಳಿಸುವ ಸಾಧ್ಯತೆ ಇದೆ. ಇನ್ನು ಅಗತ್ಯವಿಲ್ಲದ ವಿಭಾಗವನ್ನು ನಿಲ್ಲಿಸಲು ಕಂಪನಿ ಪ್ಲ್ಯಾನ್ ಮಾಡಿಕೊಂಡಿದೆ. ಅತಿಯಾದ ವೆಚ್ಚವನ್ನು ತಡೆಯಲು ಕಂಪನಿ ಹಲವು ವಿಧದಲ್ಲಿ ಪ್ರಯತ್ನ ಪಡುತ್ತಿದೆ.
ಆದಾಯ ಕುಸಿತ
ಇಂಟೆಲ್ ಕಂಪನಿ ಆದಾಯ ಕುಸಿತ ಕಂಡಿದೆ. 2023 ರ ತ್ರೈಮಾಸಿಕಕ್ಕೆ ಹೋಲಿಸಿದರೆ, ಶೇಕಡಾ 1 ರಷ್ಟು ಆದಾಯ ಕುಸಿತ ಕಂಡಿದೆ. ಇನ್ನು ಕಂಪನಿ ಸಾವಿರಾರು ಉದ್ಯೋಗಿಗಳನ್ನು ಕೈ ಬಿಟ್ಟಿದ್ದು, ಇನ್ನು ಹಲವರು ಬೇಕಿದ್ದರೆ ಬಿಟ್ಟು ಹೋಗಬಹುದು ಎಂದು ಆಕ್ಷನ್ ಸಹ ನೀಡಿದೆ. ತಾವಾಗಿಯೇ ಕಂಪನಿಯಿಂದ ಹೊರ ನಡೆಯುವ ಉದ್ಯೋಗಿಗಳಿಗೆ ಕಂಪನಿ ಒಳ್ಳೆಯ ಪರಿಹಾರ ನೀಡಲಿದೆ. ಕಳೆದ 25 ವರ್ಷಗಳ ಹಿಂದೆ ಕಂಪನಿ ಸಿಪಿಯು ಚಿಪ್‌ಗಳ ಕ್ರಾಂತಿಯನ್ನು ಮಾಡಿತ್ತು ಎಂಬುದನ್ನು ಸ್ಮರಿಸಬಹುದು.












Click it and Unblock the Notifications