ಲಂಡನ್ ಗೂಗಲ್ ಆಫೀಸ್ ನಲ್ಲಿ ಮಸಾಜ್ ಪಾರ್ಲರ್, ಸ್ವಿಮ್ಮಿಂಗ್ ಪೂಲ್!
ಕ್ಯಾಲಿಫೋರ್ನಿಯಾದಲ್ಲಿರುವ ಗೂಗಲ್ ಕಚೇರಿಯೇ ಹತ್ತು ಹಲವಾರು ವೈಶಿಷ್ಟ್ಯಗಳಿಂದ ಕೂಡಿದೆ. ಶೀಘ್ರದಲ್ಲೇ ಲಂಡನ್ ನಲ್ಲಿ ಕಟ್ಟಲಾಗುವ ಗೂಗಲ್ ಹೊಸ ಕಚೇರಿ ತನ್ನ ಹಿಂದಿನ ಕಚೇರಿಗಳಿಗಿಂತ ಅಧಿಕ ಸೌಲಭ್ಯಗಳನ್ನು ಹೊಂದಿರುತ್ತದೆ ಎನ್ನಲಾಗುತ್ತಿದೆ.
ಲಂಡನ್, ಜೂನ್ 2: ಲಂಡನ್ ನಗರದಲ್ಲಿ ಗೂಗಲ್ ಸಂಸ್ಥೆಯು ನಿರ್ಮಿಸಲು ಉದ್ದೇಶಿಸಿರುವ ಹೊಸ ಕಚೇರಿಯ ಬ್ಲೂ ಪ್ರಿಂಟ್ ತಯಾರಾಗಿದೆ. ಅದರ ಪ್ರಕಾರ, ಆ ಹೊಸ ಕಚೇರಿಯಲ್ಲಿ ಮಸಾಜ್ ಪಾರ್ಲರ್, ಮೂರು ಲೇನ್ ಗಳುಳ್ಳ ಸ್ವಿಮ್ಮಿಂಗ್ ಪೂಲ್, ಆಟವಾಡಲು ಬ್ಯಾಸ್ಕೆಟ್ ಬಾಲ್, ಟೆನಿಸ್ ಅಂಕಣಗಳು ಸೇರಿದಂತೆ ಹತ್ತು ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ಇಂಥದ್ದೊಂದು ಪ್ರಸ್ತಾವನೆಯನ್ನು ಯುಕೆ ಆಡಳಿತದ ಮುಂದಿಟ್ಟಿರುವ ಗೂಗಲ್ ಸಂಸ್ಥೆ ಇದಕ್ಕೆ ಒಪ್ಪಿಗೆ ನೀಡಬೇಕೆಂದು ಮನವಿ ಮಾಡಿದೆ. ಇದಕ್ಕೆ ಯುಕೆ ಆಡಳಿತ ಸದ್ಯದಲ್ಲೇ ಒಪ್ಪಿಗೆ ಸಿಗಲಿದೆ.[ಸರ್ಚಿಂಗ್ ನಲ್ಲಿ ಸಂಚಲನ, ಗೂಗಲ್ ಗೆ ಸೆಡ್ಡು ಹೊಡೆದ ಬಿಂಗ್]
ಗೂಗಲ್ ಯು.ಕೆ. ವತಿಯಿಂದ ಸಲ್ಲಿಕೆಯಾಗಿರುವ ಈ ಅರ್ಜಿಯು ಪುರಸ್ಕೃತವಾದರೆ, ಕಾಮ್ಡೆನ್ ಕೌನ್ಸಿಲ್ ಎಂಬ ನಿರ್ಮಾಣ ಸಂಸ್ಥೆಯು ಈ ಕಚೇರಿಯನ್ನು ನಿರ್ಮಿಸುವ ಕೆಲಸಕ್ಕೆ ಕೈ ಹಾಕಲಿದೆ. ಮುಂದಿನ ವರ್ಷದಿಂದ ಕಚೇರಿ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಯುಕೆಯಲ್ಲಿರುವ ಸಮಾರು 4000 ತನ್ನ ಉದ್ಯೋಗಿಗಳಿಗಾಗಿ ಗೂಗಲ್ ನಿರ್ಮಿಸುತ್ತಿರುವ ಈ ಸುಂದರ ಕಚೇರಿಯ ಬಗ್ಗೆ ನಿಮಗೆ ಗೊತ್ತಿಲ್ಲದ ಮಾಹಿತಿ ಇಲ್ಲಿ ನಿಮಗಾಗಿ.

ಕಿಂಗ್ಸ್ ಕ್ರಾಸ್ ಜಿಲ್ಲೆಯಲ್ಲಿ ತಲೆಯೆತ್ತಲಿದೆ ದೈತ್ಯ ಕಚೇರಿ
ಈ ಕಚೇರಿಯ ಕಟ್ಟಡವು ಸುಮಾರು 93,000 ಚದುರಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗಲಿದೆ. ಇದನ್ನು ಸದ್ಯಕ್ಕೆ ಗೂಗಲ್ ಯುಕೆ ಕ್ಯಾಂಪಸ್ ಎಂದು ಹೆಸರಿಸಲಾಗಿದೆ. ಅಂದಹಾಗೆ, ಇದನ್ನು ಕಿಂಗ್ಸ್ ಕ್ರಾಸ್ ಜಿಲ್ಲೆಯಲ್ಲಿ ಕಟ್ಟಲು ಗೂಗಲ್ ನಿರ್ಧರಿಸಿದೆ. ಒಟ್ಟು 11 ಅಂತಸ್ತಿನ ಕಟ್ಟಡ ಇದಾಗಲಿದೆ.

ಪ್ಲಾನ್ ಬದಲಿಸಿದ್ದಕ್ಕಾಗಿ ಸ್ವಲ್ಪ ತಡ
ಕಿಂಗ್ಸ್ ಕ್ರಾಸ್ ಜಿಲ್ಲೆಯ ರೈಲ್ವೇ ಕಚೇರಿಯ ಬಳಿಯಲ್ಲೇ ನಿರ್ಮಿಸಲು ಉದ್ದೇಶಿಸಿರುವ ಈ ಗೂಗಲ್ ಕ್ಯಾಂಪಸ್ ನ ಯೋಜನೆಗೆ 2013ರಲ್ಲೇ ಯುಕೆ ಸರ್ಕಾರದ ಅನುಮೋದನೆ ಸಿಕ್ಕಿತ್ತು. ಆದರೆ, ಈಗ ಆ ಪ್ಲಾನ್ ಅನ್ನು ಗೂಗಲ್ ಸಂಸ್ಥೆ ಬದಲಾಯಿಸಿರುವುದರಿಂದ ನಿಯಮಗಳ ಪ್ರಕಾರ, ಸರ್ಕಾರದ ಒಪ್ಪಿಗೆಗಾಗಿ ಮತ್ತೊಮ್ಮೆ ಅರ್ಜಿ ಹಾಕಿದೆ.

ಥಾಮಸ್ ಹೆದರ್ ವಿಕ್ ಸಂಸ್ಥೆಗೆ ಜವಾಬ್ದಾರಿ
ಕಚೇರಿಯ ಮೇಲ್ಫಾವಣಿ ಮೇಲೆ ಸುಂದರವಾದ ಉದ್ಯಾನವನ್ನು ಬೆಳೆಸಲಾಗುತ್ತದೆ. ಸುಮಾರು 984 ಅಡಿ ವಿಸ್ತೀರ್ಣದಲ್ಲಿ ಈ ತೋಟ ನಿರ್ಮಾಣವಾಗಲಿದೆ. ಲಂಡನ್ ನ ಹೆಗ್ಗುರುತು ಎಂದೆನಿಸಿರುವ ಡಬಲ್ ಡೆಕ್ಕರ್ ಬಸ್ ಹಾಗೂ ಗೂಗಲ್ ಸಂಸ್ಥೆಯ ಕ್ಯಾಲಿಫೋರ್ನಿಯಾದಲ್ಲಿನ ಕ್ಯಾಂಪಸ್ ನಿರ್ಮಿಸಿರುವ ಥಾಮಸ್ ಹೆದರ್ ವಿಕ್ ಅವರು ಈ ಕ್ಯಾಂಪಸ್ ಅನ್ನು ನಿರ್ಮಾಣ ಮಾಡಲಿದೆ.

ಆಟೋಟಗಳಿಗೂ ಮಹತ್ವ
ಈ ಮೊದಲೇ ತಿಳಿಸಿದಂತೆ, ಆ ಬೃಹತ್ ಕಟ್ಟಡದಲ್ಲಿ ಉದ್ಯೋಗಿಗಳಿಗಾಗಿಯೇ ಮಸಾಜ್ ಕೊಠಡಿಗಳು, ಸ್ವಿಮ್ಮಿಂಗ್ ಪೂಲ್ ಗಳು, ಬಾಡಿ ಲೈನ್ ಜಿಮ್ ಗಳು ಹಾಗೂ ಆಟಗಳಿಗಾಗಿ ಬ್ಯಾಸೆಟ್ ಬಾಲ್, ಫುಟ್ಬಾಲ್, ಟೇಬಲ್ ಟೆನಿಸ್ ಹಾಗೂ ಟೆನಿಸ್ ಅಂಕಣಗಳು ಇರಲಿವೆ. ಕ್ರೀಡಾ ಅಂಕಣಗಳ ವಿಶೇಷತೆಯೇನೆಂದರೆ, ಎಲ್ಲಾ ಉದ್ಯೋಗಿಗಳೂ ತಾವಿರುವ ಸ್ಥಳದಿಂದಲೇ ಕೊಂಚ ಇಣಿಕಿ ನೋಡಿದರೂ ಈ ಆಟೋಟಗಳನ್ನು ನೇರವಾಗಿ ಕಾಣುವಂಥ ವಿಶಿಷ್ಟ ಬಗೆಯ ವಿನ್ಯಾಸವನ್ನು ಈ ಕಟ್ಟಡಕ್ಕೆ ಕಲ್ಪಿಸಲಾಗಿದೆಯಂತೆ.

ನೌಕರರು ನಿರಾಳ
ಇನ್ನು, ಯಥವಾತ್ತಾಗಿ ರೆಸ್ಟೋರೆಂಟ್ ಗಳು, ಉಚಿತ ವಿದ್ಯುತ್ ಕಾರುಗಳು, ಲಾಂಡ್ರಿ, ಪಬ್ ಗಳು, ಶಾಪಿಂಗ್ ಕಾಂಪ್ಲೆಕ್ಸ್ ಗಳು, ಮಕ್ಕಳ ಪ್ಲೇ ಹೋಂ ಗಳು, ಫ್ಯಾಮಿಲಿ ಔಟಿಂಗ್ ಗಳು, ಕಚೇರಿಯಲ್ಲಿ ನಿದ್ರಾ ಕ್ಯಾಬಿನ್ ಗಳು ಸೇರಿದಂತೆ ಇನ್ನೂ ಹತ್ತು ಹಲವು ಸೌಕರ್ಯಗಳು ಗೂಗಲ್ ನ ಬೇರೆ ಕ್ಯಾಂಪಸ್ಸಿನಲ್ಲಿರುವಂತೆ ಇಲ್ಲಿಯೂ ಇವೆ.












Click it and Unblock the Notifications