ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂನ್‌ಲೈಟಿಂಗ್ ಮಾಡೀರಿ ಜೋಕೆ, ಉದ್ಯೋಗಿಗಳಿಗೆ ಇನ್‌ಫೋಸಿಸ್ ಎಚ್ಚರಿಕೆ- ಏನಿದರ ಅರ್ಥ?

|
Google Oneindia Kannada News

ನವದೆಹಲಿ, ಸೆ. 13: ಖರ್ಚು ಹೆಚ್ಚಾದಂತೆ, ಜೀವನ ವೆಚ್ಚ ಹೆಚ್ಚಾದಂತೆ ಜನರು ಸೈಡ್ ಬಿಸಿನೆಸ್ ಕಡೆಗೆ ವಾಲುತ್ತಿರುವ ಪ್ರವೃತ್ತಿ ಹೆಚ್ಚುತ್ತಿದೆ. ಹಿಂದೆಲ್ಲಾ ಸರಕಾರಿ ಉದ್ಯೋಗಿಗಳಲ್ಲಿ ಇಂಥ ಪ್ರವೃತ್ತಿ ಇತ್ತು. ಈಗ ಬಹಳ ಮಂದಿ ಎರಡೆರಡು ಕೆಲಸ ಮಾಡುತ್ತಾ ಜೀವನ ನಿಭಾಯಿಸುವ ಪ್ರಯತ್ನ ಮಾಡುತ್ತಾರೆ. ಐಟಿ ಉದ್ಯೋಗಿಗಳೂ ಇದಕ್ಕೆ ಹೊರತಾಗಿಲ್ಲ.ಇದೇ ವೇಳೆ, ಇನ್ಫೋಸಿಸ್ ಸಂಸ್ಥೆ ತನ್ನ ಉದ್ಯೋಗಿಗಳಿಗೆ ಇಂಥ ಡಬಲ್ ಕೆಲಸ ಮಾಡಬೇಡಿ ಎಂದು ಕಟ್ಟುನಿಟ್ಟಾಗಿ ಎಚ್ಚರಿಕೆ ನೀಡಿದೆ.

"ಎರಡು ಟೈಮಿಂಗ್ ಇಲ್ಲ, ಮೂನ್ ಲೈಟಿಂಗ್ ಇಲ್ಲ" ಎಂದು ಇನ್ಫೋಸಿಸ್‌ನ ಮ್ಯಾನೇಜ್ಮೆಂಟ್‌ನಿಂದ ಎಲ್ಲಾ ಉದ್ಯೋಗಿಗಳಿಗೆ ಇಮೇಲ್ ಕಳುಹಿಸಲಾಗಿದೆ.

ಇಲ್ಲಿ ಮೂನ್ ಲೈಟಿಂಗ್ ಎಂದರೆ ಕಂಪನಿಯ ಕೆಲಸದ ಜೊತೆಗೆ ಬೇರೆಡೆ ಹೆಚ್ಚುವರಿಯಾಗಿ ಕೆಲಸ ಮಾಡುವುದು. ಈ ವಿಚಾರದಲ್ಲಿ ಇನ್ಫೋಸಿಸ್ ಕಟ್ಟುನಿಟ್ಟಾಗಿರಲು ನಿರ್ಧರಿಸಿದೆ. ಕಂಪನಿಯ ಅಧಿಕೃತ ನೀತಿ ಸಂಹಿತೆ ಮತ್ತು ಉದ್ಯೋಗಿ ಕೈಪಿಡಿಯಲ್ಲಿ ಇರುವ ನಿಯಮಗಳನ್ನು ಉಲ್ಲೇಖಿಸಿ ತನ್ನ ಉದ್ಯೋಗಿಗಳಿಗೆ ಮೂನ್‌ಲೈಟಿಂಗ್ ಸಹವಾಸಕ್ಕೆ ಹೋಗದಿರಿ ಎಂದು ಇನ್ಫೋಸಿಸ್ ಸೂಚಿಸಿದೆ.

ಜಗತ್ತಿನಲ್ಲೇ 3ನೇ ಅತಿದೊಡ್ಡ ಆರ್ಥಿಕತೆ ಆಗಲಿದೆ ಭಾರತ ಎಂದ ಅಮಿತ್ ಶಾಜಗತ್ತಿನಲ್ಲೇ 3ನೇ ಅತಿದೊಡ್ಡ ಆರ್ಥಿಕತೆ ಆಗಲಿದೆ ಭಾರತ ಎಂದ ಅಮಿತ್ ಶಾ

ಕಂಪನಿಯ ಆಫರ್ ಲೆಟರ್‌ನಲ್ಲೂ ಈ ಬಗ್ಗೆ ಪ್ರಸ್ತಾಪ ಇದೆ. ಇಲ್ಲಿ ಕೆಲಸ ಮಾಡುವಾಗ ಬೇರೊಂದು ಪೂರ್ಣ ಪ್ರಮಾಣದ ಅಥವಾ ಅರೆಕಾಲಿಕ ಉದ್ಯೋಗವನ್ನು ಮಾಡುವಂತಿಲ್ಲ ಎಂಬ ಷರತ್ತನ್ನು ಆಫರ್ ಲೆಟರ್‌ನಲ್ಲಿ ಸೇರಿಸಿದೆ. ಇನ್ಫೋಸಿಸ್ ಮಾತ್ರವಲ್ಲ ಬಹುತೇಕ ಎಲ್ಲಾ ಕಂಪನಿಗಳ ಆಫರ್ ಲೆಟರ್‌ಗಳಲ್ಲಿ ಇಂಥದ್ದೊಂದು ಷರತ್ತು ಇರುತ್ತದೆ. ಆದರೆ, ಇಮೇಲ್ ಮೂಲಕ ಉದ್ಯೋಗಿಗಳಿಗೆ ಮೂನ್‌ಲೈಟಿಂಗ್ ವಿರುದ್ಧ ಎಚ್ಚರಿಕೆ ನೀಡುವುದು ಅಪರೂಪ.

Infosys Warns Employees Against Moonlighting

ಸೆಕೆಂಡ್ ಜಾಬ್ ಸಾಮಾನ್ಯ
ಒಂದಕ್ಕಿಂತ ಹೆಚ್ಚು ಕಾಯಕ ಮಾಡುವುದು ಮೊದಲಿಂದಲೂ ಇದ್ದದ್ದೇ. ವೃತ್ತಿಯ ಅವಕಾಶ, ಸಮಯಾವಕಾಶ ಇತ್ಯಾದಿ ಅಂಶಗಳು ಇಲ್ಲಿ ಪೂರಕವಾಗಿರಬೇಕು. ಈಗಂತೂ ಇಂಟರ್ನೆಟ್‌ನಲ್ಲಿ ಪಾರ್ಟ್ ಟೈಮ್ ಅಥವಾ ಫ್ರೀಲಾನ್ಸ್ ಉದ್ಯೋಗಗಳು ದಂಡಿಯಾಗಿ ಸಿಗುತ್ತವೆ. ಐಟಿ ಉದ್ಯೋಗಿಗಳು ತಮ್ಮ ಬಿಡುವಿನ ಸಮಯದಲ್ಲಿ ಆ್ಯಪ್‌ಗಳನ್ನು ಮಾಡಬಹುದು, ಕೋಡಿಂಗ್ ಮಾಡಬಹುದು. ವಿಡಿಯೋ ಎಡಿಟಿಂಗ್, ಟ್ರಾನ್ಸ್‌ಲೇಶನ್ ಇತ್ಯಾದಿ ಹಲವಾರು ಕೆಲಸಗಳು ಫ್ರೀಲಾನ್ಸ್ ಆಗಿ ಲಭ್ಯ ಇವೆ. ಹೀಗಾಗಿ, ಅನೇಕ ಮಂದಿ ತಮ್ಮ ಬಿಡುವಿನ ವೇಳೆಯಲ್ಲಿ ಫ್ರೀಲಾನ್ಸ್ ಕೆಲಸಗಳನ್ನು ಮಾಡಿ ಹೆಚ್ಚುವರಿ ಆದಾಯ ರೂಪಿಸಿಕೊಳ್ಳುತ್ತಾರೆ.

Teachers recruitment: 2500 ಪ್ರೌಢ ಶಾಲಾ ಶಿಕ್ಷಕರ ನೇಮಕಕ್ಕೆ ಆದೇಶTeachers recruitment: 2500 ಪ್ರೌಢ ಶಾಲಾ ಶಿಕ್ಷಕರ ನೇಮಕಕ್ಕೆ ಆದೇಶ

ಉದ್ಯೋಗಿಗಳು ಬಿಡುವಿನ ವೇಳೆ ಬೇರೆ ಕೆಲಸ ಮಾಡಲು ಯಾವ ಕಂಪನಿಗಳು ಅನುಮತಿಸುವುದಿಲ್ಲ. ಕೆಲ ಕಂಪನಿಗಳು ಈ ವಿಚಾರದಲ್ಲಿ ಕಟ್ಟುನಿಟ್ಟಾಗಿದ್ದರೆ, ಇನ್ನೂ ಕೆಲ ಕಂಪನಿಗಳು ಏನೂ ಕ್ರಮ ಕೈಗೊಳ್ಳದೆ ಸುಮ್ಮನಾಗುತ್ತವೆ.

ಇತ್ತೀಚೆಗೆ, ಟೆಕ್ ಮಹೀಂದ್ರ ಸಂಸ್ಥೆಯ ಸಿಇಒ ಸಿ.ಪಿ. ಗುರ್ನಾನಿ ಈ ರೀತಿಯ ಬಹು ಕೆಲಸಗಳನ್ನು ಮಾಡುವ ಉದ್ಯೋಗಿಗಳಿಗೆ ಬೆಂಬಲ ನೀಡಿ ಅಚ್ಚರಿ ಮೂಡಿಸಿದ್ದರು.

(ಒನ್ಇಂಡಿಯಾ ಸುದ್ದಿ)

English summary
Infosys managements is said to have sent mail to employees, warning not to do moonlighting, that is any additional job.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X