ನಂದನ್ ನಿಲೇಕಣಿ ಮರುನೇಮಕ: ಇನ್ಫೋಸಿಸ್ ಷೇರು ಮೌಲ್ಯ ಹೆಚ್ಚಳ
ಇನ್ಫೋಸಿಸ್ ಕಂಪನಿ ಮುಖ್ಯಸ್ಥರಾಗಿ ನಂದನ್ ನಿಲೇಕಣಿ ನೇಮಕ ಹಿನ್ನೆಲೆಯಲ್ಲಿ ಇನ್ಫೋಸಿಸ್ ಷೇರು ಮೌಲ್ಯದಲ್ಲಿ ಹೆಚ್ಚಳ. ಗುರುವಾರ ಸಂಜೆಗೆ ಅಂತ್ಯಗೊಂಡ ಷೇರು ವ್ಯವಹಾರದಂತೆ, ಇನ್ಫೋಸಿಸ್ ಷೇರುಗಳ ಮೌಲ್ಯ ಶೇ. 2.09ರಷ್ಟು ಏರಿಕೆ.
ಮುಂಬೈ, ಆಗಸ್ಟ್ 25: ಇನ್ಫೋಸಿಸ್ ಸಂಸ್ಥೆಯ ಸಹ ಸಂಸ್ಥಾಪಕ ನಂದನ್ ನಿಲೇಕಣಿ ಅವರು ಪುನಃ ಆ ಸಂಸ್ಥೆಯ ಮುಖ್ಯಸ್ಥರಾಗಿ ನೇಮಕಗೊಂಡಿದ್ದು ಅಧಿಕೃತವಾಗಿ ಘೋಷಣೆಗೊಳ್ಳುತ್ತಲೇ, ಇನ್ಫೋಸಿಸ್ ಷೇರುಗಳ ಮೌಲ್ಯ ಏರಿಕೆ ಕಂಡಿದೆ.
ಈ ಹಿಂದೆ, ಕಂಪನಿಯ ಕಾರ್ಯ ನಿರ್ವಾಹಕರಾಗಿದ್ದ ವಿಕಾಸ್ ಸಿಕ್ಕಾ ಹಾಗೂ ಇನ್ಫೋಸಿಸ್ ನ ಮತ್ತೊಬ್ಬ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ನಡುವಿನ ವಿರಸ ಹಾಗೂ ಅದರ ಕಾರಣದಿಂದಾಗಿ, ಸಿಕ್ಕಾ ಅವರಿಂದ ಕಂಪನಿಯ ಸಿಇಒ ಹುದ್ದೆಗೆ ರಾಜಿನಾಮೆ ಕಾರಣಗಳಿಂದಾಗಿ ಕಂಪನಿಯ ಷೇರುಗಳ ಮೌಲ್ಯ ಕುಸಿತ ಕಂಡಿತ್ತು.

ಇದೀಗ, ನಂದನ್ ನಿಲೇಕಣಿಯವರ ಆಗಮನದಿಂದ ಕಂಪನಿಯಲ್ಲಿ ಹೊಸ ಉತ್ಸಾಹವೂ ಗರಿಗೆದರಿದ್ದು, ಷೇರು ಮಾರುಕಟ್ಟೆಯಲ್ಲಿ ಅದರ ಮೌಲ್ಯವೂ ಹೆಚ್ಚಾಗಿದೆ.
ಬುಧವಾರವೇ ನಿಲೇಕಣಿ ಪುನರಾಗಮನ ಸುದ್ದಿ ಹರಡುತ್ತಿದ್ದಂತೆ, ನಿಧಾನವಾಗಿ ಏರಿಕೆ ಕಾಣಲು ಶುರುವಾಗಿದ್ದ ಷೇರು ಮೌಲ್ಯ, ಗುರುವಾರ (ಆಗಸ್ಟ್ 24) ಸಂಜೆ ಹೊತ್ತಿಗೆ ಪ್ರತಿಶತ 2.09ರಷ್ಟು ಏರಿಕೆ ಕಂಡಿತ್ತು.












Click it and Unblock the Notifications