ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್ಸಿಗೆ ಶುಭ ಶುಕ್ರವಾರ, ಅಪರಿಮಿತ ಲಾಭ!

By Mahesh
|
Google Oneindia Kannada News

ಬೆಂಗಳೂರು, ಜ.9: ದೇಶದ ಎರಡನೇ ಅತಿದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ ತನ್ನ ಮೂರನೇ ತ್ರೈಮಾಸಿಕ ವರದಿಯನ್ನು ಶುಕ್ರವಾರ ಪ್ರಕಟಿಸಿದೆ. ಡಿ.31, 2014ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಮಾರುಕಟ್ಟೆ ವಿಶ್ಲೇಷಕರ ನಿರೀಕ್ಷೆಗೂ ಮೀರಿದ ಆದಾಯ ಲಾಭವನ್ನು ಸಿಕ್ಕಾ ಅವರ ಕಂಪನಿ ದಾಖಲಿಸಿದೆ.

ಪ್ರಸಕ್ತ ತ್ರೈಮಾಸಿಕದಲ್ಲಿ ವಿಶ್ಲೇಷಕರ ಎಣಿಕೆಯಂತೆ 3,150 ಕೋಟಿ ರು ಲಾಭದ ನಿರೀಕ್ಷೆಯಿತ್ತು. ಅದರೆ, ಈ ತ್ರೈಮಾಸಿಕ ಅವಧಿಯಲ್ಲಿ 3,250 ಕೋಟಿ ರು ಲಾಭ ದಾಖಲಾಗಿದೆ. ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಒಟ್ಟಾರೆ ಆದಾಯ ಗಳಿಕೆ ಕೂಡಾ ನಿರೀಕ್ಷಿತ ಮಟ್ಟದಲ್ಲಿದೆ. ಕಳೆದ ತ್ರೈಮಾಸಿಕದಲ್ಲಿ 13,342 ಕೋಟಿ ರು ಗಳಿಕೆ ಕಂಡಿದ್ದ ಕಂಪನಿ ಈ ತ್ರೈಮಾಸಿಕದಲ್ಲಿ 13,796 ಕೋಟಿ ರು ಆದಾಯ ಪಡೆದುಕೊಂಡಿದೆ. [Q2 ವರದಿ: ಇನ್ಫೋಸಿಸ್ ಗೆ ಲಾಭ]

ತ್ರೈಮಾಸಿಕ ವರದಿ ಪ್ರಕಟಗೊಂಡ ಬೆನ್ನಲ್ಲೇ ಕಂಪನಿಯ ಷೇರುಗಳು ಶೇ 5ರಷ್ಟು ಏರಿಕೆ ಕಂಡಿದೆ. ಮುಖ್ಯವಾಗಿ ಡಾಲರ್ ಆದಾಯ ಮಾರ್ಗದರ್ಶಿ ಚೇತರಿಕೆ ನೀಡಿದೆ. ದಿನದಲ್ಲಿ 2095 ಮುಖಬೆಲೆಯಂತೆ ಷೇರುಗಳು ಏರಿಕೆ ಕಂಡಿತ್ತು. [ಇನ್ಫೋಸಿಸ್ಸಿನ 'ಸೇನಾಪತಿ']

Infosys Q3 2014-15 Beat Estimates

ಮೂರನೇ ತ್ರೈಮಾಸಿಕ 2014 ಡಾಲರ್ ಆದಾಯ ಮಾರ್ಗದರ್ಶಿ 2218 ಮಿಲಿಯನ ಡಾಲರ್ ಆಗಿದ್ದು, ನಿರೀಕ್ಷಿತ ಮಟ್ಟ ಮುಟ್ಟಲಾಗಿಲ್ಲ. ನಿರ್ವಹಣಾ ವೆಚ್ಚ ಕೂಡಾ ಶೇ 26.74ರಷ್ಟು ಏರಿಕೆ ಕಂಡಿದೆ. ಶೇ 7-9ರಂತೆ ಡಾಲರ್ ಆದಾಯ ಮಾರ್ಗದರ್ಶಿಯನ್ನು ಕಂಪನಿ ನೀಡಿರುವುದಕ್ಕೆ ಮಾರುಕಟ್ಟೆಯಲ್ಲೂ ಸ್ವಾಗತ ಸಿಕ್ಕಿದೆ. [ವಿಶಾಲ ಸಿಕ್ಕಾ ಬಂದ ಜೋಳಿಗೆ ತುಂಬಾ ಐಫೋನ್ ತಂದ]

ಕಳೆದ ತ್ರೈಮಾಸಿಕದಲ್ಲಿ ಕಂಪನಿಯ ಸ್ಥಾಪಕರಾದ ಕ್ರಿಸ್ ಗೋಪಾಲಕೃಷ್ಣನ್ ಹಾಗೂ ನಾರಾಯಣ ಮೂರ್ತಿ ಅವರ ನಿರ್ಗಮನದೊಂದಿಗೆ ಕಂಪನಿಯ ಎಲ್ಲಾ ಏಳು ಸ್ಥಾಪಕರು ಸಂಸ್ಥೆಯನ್ನು ತೊರೆದ್ದಂತಾಗಿದೆ. ಒಟ್ಟಾರೆ ವಿಶಾಲ್ ಸಿಕ್ಕಾ ಅವರು ಸಿಇಒ ಆಗಿ ಬಂದ ಮೇಲೆ ಹೊಸ ಉತ್ಸಾಹದೊಂದಿಗೆ ಇನ್ಫೋಸಿಸ್ ಬದಲಾವಣೆ ಹಾಗೂ ಯಶಸ್ಸಿನ ಹಾದಿ ಹಿಡಿಯುತ್ತಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

English summary
Infosys reported yet another set of good quarterly numbers with net profits for the quarter ending Dec 31, 2014 coming in at Rs 3250 crores, as against analysts estimates of around Rs 3150 crores. Revenues at the company came in almost in line with estimates at Rs 13,796 crores as against Rs 13,342 crores in the previous quarter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X