• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇನ್ಫಿ ಉದ್ಯೋಗಿಗಳಿಗೆ ಐಫೋನ್ ಕೊಡುಗೆ ನೀಡಿದ ಸಿಕ್ಕಾ

By Mahesh
|

ಬೆಂಗಳೂರು, ಜ.9: ವಿಶಾಲ್ ಸಿಕ್ಕಾ ಅವರು ಸಿಇಒ ಆಗಿ ಬಂದ ಮೇಲೆ ಇನ್ಫೋಸಿಸ್ ನ ಅದೃಷ್ಟ ಖುಲಾಯಿಸಿದೆ. ಸಂಸ್ಥೆಯ ಉದ್ಯೋಗಿಗಳು ಖುಷಿಯಾಗಿದ್ದಾರೆ, ಮಾರುಕಟ್ಟೆಯಲ್ಲೂ ಇನ್ಫಿ ಮೌಲ್ಯ ಏರುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ.

ಇದು ಕೇವಲ ಹೇಳಿಕೆಯಲ್ಲ, ಶುಕ್ರವಾರ ಪ್ರಕಟಗೊಂಡ ಇನ್ಫೋಸಿಸ್ ಮೂರನೇ ತ್ರೈಮಾಸಿಕ ವರದಿಯಲ್ಲಿ ಇನ್ಫೋಸಿಸ್ ಭರ್ಜರಿ ಬೆಳೆ ತೆಗೆದಿದೆ. ಸಂಸ್ಥೆಯ ಹಿರಿ ತಲೆಗಳ ನಿರ್ಗಮನದ ನಂತರ ಸಿಕ್ಕಾ ಅಧಿಕಾರ ವಹಿಸಿಕೊಂಡ ಮೇಲೆ ಹೊರ ಬಂದಿರುವ ಪ್ರಥಮ ತ್ರೈಮಾಸಿಕ ವರದಿ ಇದಾಗಿದ್ದು, ಮಾರುಕಟ್ಟೆ ತಜ್ಞರು ಜೈಕಾರ ಹಾಕಿದ್ದಾರೆ. [Q3: ಇನ್ಫಿಗೆ ನಿರೀಕ್ಷೆ ಮೀರಿದ ಲಾಭ]

ಇದಕ್ಕೂ ಮುನ್ನ ವಿಶಾಲ್ ಸಿಕ್ಕಾ ಅವರು ತನ್ನ ಉದ್ಯೋಗಿಗಳಿಗೆ ಅಚ್ಚರಿಯ ಉಡುಗೊಡೆಯನ್ನು ನೀಡಿ ಸಂಭ್ರಮದಲ್ಲಿ ಮುಳುಗುವಂತೆ ಮಾಡಿದ್ದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಸಾಂತಾಕ್ಲಾಸ್ ನಂತೆ ವೇಷ ಧರಿಸಿದ ಸಿಇಒ ವಿಶಾಲ್ ಸಿಕ್ಕಾ ಅವರು ಸುಮಾರು 3000 ಉದ್ಯೋಗಿಗಳ ಕೈಗೆ ಆಪಲ್ ಐಫೋನ್ 6 ಗಳನ್ನು ನೀಡಿದ್ದಾರೆ. ಗಿಫ್ಟ್ ಗಳನ್ನೇ ಕಾಣದ ಇನ್ಫೋಸಿಸ್ ಉದ್ಯೋಗಿಗಳು ಸಂಭ್ರಮದಿಂದ ಕುಣಿದಾಡಿದ್ದಾರೆ ಎಂದು ವರದಿ ಮಾಡಲಾಗಿದೆ. [ಸಿಕ್ಕಾ ಸಿಕ್ಕಾಪಟ್ಟೆ ಸಂಬಳ ಏರಿಸ್ತಾರಪ್ಪ!]

ಕಳೆದ ಸೆಪ್ಟೆಂಬರ್ ನಲ್ಲಿ attirton ಪ್ರಮಾಣ ಶೇ 20.1ರಷ್ಟಿತ್ತು. ಇದೇ ದೇಶದಲ್ಲೇ ಅಧಿಕವಾಗಿದೆ. ಸಂಸ್ಥೆ ತೊರೆಯುವವರ ಸಂಖ್ಯೆ ಇಳಿಮುಖ ಮಾಡುವತ್ತ ಗಮನ ಹರಿಸಿರುವ ಸಿಕ್ಕಾ ಅವರು ಉತ್ತಮ ನಿರ್ವಹಣೆ ತೋರಿರುವ 3,000 ಉದ್ಯೋಗಿಗಳನ್ನು ಗುರುತಿಸಿ ಈ ರೀತಿ ಗಿಫ್ಟ್ ನೀಡಿದ್ದಾರೆ. ಜೊತೆಗೆ ಒಂದೊಳ್ಳೆ ಇ ಮೇಲ್ ಕಳಿಸಿದ್ದಾರೆ. ಇದರಿಂದ ಉದ್ಯೋಗಿಗಳ ಕಾರ್ಯ ಕ್ಷಮತೆ ಇಮ್ಮಡಿಯಾಗಿದೆಯಂತೆ.

ಉದ್ಯೋಗಿಗಳನ್ನು ಕಾಯ್ದುಕೊಳ್ಳಲು ತ್ರೈಮಾಸಿಕಕ್ಕೊಮ್ಮೆ ಬಡ್ತಿ, ವೇರಿಯಬಲ್ ಪೇಯನ್ನು ಫಿಕ್ಸ್ಡ್ ಪೇ ಮಾಡುತುವುದು, ಸಾಮಾನ್ಯ ಉದ್ಯೋಗಿಗಳಿಗೂ ನಿರ್ಣಯ ತೆಗೆದುಕೊಳ್ಳುವ ಅಧಿಕಾರ ನೀಡುವುದು ಮುಂತಾದ ತಂತ್ರಗಳನ್ನು ಸಿಕ್ಕಾ ಅನುಸರಿಸುವ ಸಾಧ್ಯತೆಯಿದೆ.

ಶೇ 100ರಷ್ಟು ಬೋನಸ್: ಇದೇ ಸಂದರ್ಭದಲ್ಲಿ ಶೇ 100ರಷ್ಟು ವೇರಿಯಬಲ್ ಪೇಔಟ್ ಬೋನಸ್ ಘೋಷಿಸಲಾಗಿದೆ. ಡಿಸೆಂಬರ್ ತ್ರೈಮಾಸಿಕದಲ್ಲಿ 13,154 ಉದ್ಯೋಗಿಗಳು ಸೇರ್ಪಡೆಗೊಂಡಿದ್ದಾರೆ. ಒಟ್ಟಾರೆ ಉದ್ಯೋಗಿಗಳ ಸಂಖ್ಯೆ ಡಿಸೆಂಬರ್ 31,2014ರಂತೆ 1,69,638 ನಷ್ಟಿದೆ ಎಂದು ಸಿಒಒ ಯುಬಿ ಪ್ರವೀಣ್ ರಾವ್ ಹೇಳಿದ್ದಾರೆ. [ಸಿಇಒ ವಿಶಾಲ್ ಸಿಕ್ಕಾ ಸಂಬಳ ವಿವರ]

ಇತ್ತೀಚೆಗೆ ಎಚ್ ಸಿಎಲ್ ಸಂಸ್ಥೆ ಕೂಡಾ ತನ್ನ 130 ಉದ್ಯೋಗಿಗಳಿಗೆ ಮರ್ಸೀಡೆಸ್ ಕಾರು ನೀಡಿತ್ತು. ಜೊತೆಗೆ ನಿಮ್ಮಿಷ್ಟದ ಪ್ರವಾಸಿ ತಾಣಕ್ಕೆ ಕುಟುಂಬದೊಡನೆ ಹೋಗಿ ಬರಲು ಪ್ಯಾಕೇಜ್ ಟೂರ್ ಕೊಡುಗೆ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Infosys CEO Vishal Sikka gifted 3,000 Apple iPhone 6s to 3,000 top performing employees, reports The Times of India . Reportedly, the gifts, uncommon in Infosys , were accompanied by an email from Sikka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more