ಇನ್ಫೋಸಿಸ್ ಸಿಕ್ಕಾ ಸಿಕ್ಕಾಪಟ್ಟೆ ಸಂಬಳ ಏರಿಸ್ತಾರಪ್ಪ!
ಬೆಂಗಳೂರು, ಸೆ.23: ಸಾಫ್ಟ್ ವೇರ್ ರಫ್ತು ಕ್ಷೇತ್ರದ ಅಗ್ರಗಣ್ಯ ಸಂಸ್ಥೆ ಇನ್ಫೋಸಿಸ್ ಉದ್ಯೋಗಿಗಳ ಮುಖದಲ್ಲಿ ಮಂದಹಾಸ ಉಕ್ಕಿ ಹರಿಯುತ್ತಿದೆ. ಇನ್ಫೋಸಿಸ್ ನ ಚುಕ್ಕಾಣಿ ವಹಿಸಿಕೊಂಡಿರುವ ವಿಶಾಲ್ ಸಿಕ್ಕಾ ಅವರು 6 ಕೋಟಿ ರು ತನಕ ಸಂಬಳ ಏರಿಕೆ ಮಾಡಿ ತನ್ಮ್ಮ ಸಂಸ್ಥೆ ಉದ್ಯೋಗಿಗಳನ್ನು ಸಿಕ್ಕಾಪಟ್ಟೆ ಖುಷಿಪಡಿಸಿದ್ದಾರೆ.
ಹಲವು ತಿಂಗಳುಗಳ ಕಾಲ ಸಂಬಳ ಏರಿಕೆ, ಬೋನಸ್ ಎಂದರೆ ಏನೋ ಎಂದು ಅರಿಯದಂತೆ ಇದ್ದ ಇನ್ಫಿ ಉದ್ಯೋಗಿಗಳ ಕನಸಿಗೆ ಈಗ ರೆಕ್ಕೆ ಪುಕ್ಕ ಬಂದಿದೆ. ಸಂಸ್ಥೆಯ ಟಾಪ್ ಕಾರ್ಯಕಾರಿ ಉದ್ಯೋಗಿಗಳಿಗೆ 1ಮಿಲಿಯನ್ ಡಾಲರ್ ತನಕ ಸಂಬಳ ಏರಿಕೆ ಘೋಷಿಸಲಾಗಿದೆ.

1.2 ರಿಂದ 2 ಕೋಟಿ ರು ಆಸುಪಾಸಿನಲ್ಲಿ ಸಂಬಳ ಎಣಿಸುತ್ತಿದ್ದ ಉದ್ಯೋಗಿಗಳು 6 ಕೋಟಿ ರು ರೇಂಜಿಗೇರಿದ್ದಾರೆ. ಇದೆಕ್ಕಲ್ಲ ಹೊಸ ಸಿಇಒ ಸಿಕ್ಕಾ ಕಾರಣ ಎನ್ನಲಾಗಿದೆ. ಟಾಪ್ ಲೆವಲ್ ಉದ್ಯೋಗಿಗಳಿಗೆ ಮೂರರಿಂದ ಐದು ಪಟ್ಟು ಸಂಬಳ ಏರಿಕೆಯಾಗಿದೆ.
ಸಿಕ್ಕಾಗೂ ಭರ್ಜರಿ ಪ್ಯಾಕೇಜ್: ಇನ್ಫೋಸಿಸ್ ತನ್ನ ಹೊಸ ಸಿಇಒ ಸಿಕ್ಕಾಗೆ ವಾರ್ಷಿಕವಾಗಿ 5.08 ಮಿಲಿಯನ್ ಯುಎಸ್ ಡಾಲರ್ ಗಳಷ್ಟು. ಅಂದರೆ, ವಿಶಾಲ್ ಸಿಕ್ಕಾಗೆ ಸುಮಾರು 30 ಕೋಟಿ ರುಪಾಯಿಯಷ್ಟು ವಾರ್ಷಿಕ ಸಂಬಳ ಸಿಗಲಿದೆ.ಸಂಬಳ ಮತ್ತು ಷೇರು ಎರಡೂ ಸೇರಿ ಇನ್ಫೋಸಿಸ್ ಸಿಇಒ ಅವರ ವಾರ್ಷಿಕ ವರಮಾನ 42 ಕೋಟಿ ರುಪಾಯಿ ಇದೆ. ಅಂದರೆ, ತಿಂಗಳಿಗೆ ಇವರು 3.5 ಕೋಟಿ ರುಪಾಯಿ ಆದಾಯ ಗಳಿಸುತ್ತಾರೆ.[ಪೂರ್ತಿ ವಿವರ ಇಲ್ಲಿ ಓದಿ]












Click it and Unblock the Notifications