Q2: ನಿರೀಕ್ಷಿತ ಲಾಭ ಪಡೆದ ಇನ್ಫೋಸಿಸ್
ಬೆಂಗಳೂರು, ಅ.11: ದೇಶದ ಎರಡನೇ ಅತಿದೊಡ್ಡ ಐಟಿ ಸಂಸ್ಥೆ ಬೆಂಗಳೂರಿನ ಇನ್ಫೋಸಿಸ್ ಶುಕ್ರವಾರ ತನ್ನ ಎರಡನೇ ತ್ರೈಮಾಸಿಕ ವರದಿ ಪ್ರಕಟಿಸಿದೆ. ಸೆ.30ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಶೇ 1.63ರಷ್ಟು 2407 ಕೋಟಿ ರು ನಿವ್ವಳ ಲಾಭ ಗಳಿಸಿದೆ.
ಬಿಎಸ್ ಇಗೆ ಮಾಹಿತಿ ನೀಡಿರುವ ಬೆಂಗಳೂರಿನ ಐಟಿ ಕಂಪನಿ ಕಳೆದ ವರ್ಷ 2369 ಕೋಟಿ ರು ನಿವ್ವಳ ಲಾಭ ಗಳಿಸಿತ್ತು. ನಿವ್ವಳ ಆದಾಯ ಶೇ 31.5 ರಷ್ಟು ಏರಿಕೆಯಾಗಿದ್ದು 12,965 ಕೋಟಿ ರು ಆದಾಯ ಹೊಂದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 11267 ಕೋಟಿ ರು ಆದಾಯ ಹೊಂದಿತ್ತು.
ನಿವ್ವಳ ಆದಾಯ ಡಾಲರ್ ಎಣಿಕೆಯಂತೆ ಸೆ.30,2013ರಂದು ಕೊನೆಗೊಂಡ ತ್ರೈಮಾಸಿಕಕ್ಕೆ 2066 ಯುಎಸ್ ಡಾಲರ್ ಬಂದಿದೆ. ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಇದು ಶೇ 3.8ರಷ್ಟು ಏರಿಕೆಯಾಗಿದೆ.
ಬಿಎಸ್ ಇನಲ್ಲಿ ಶುಕ್ರವಾರ ಸಮಯದ 2.45ರ ವೇಳೆಗೆ ಇನ್ಫೋಸಿಸ್ ಷೇರುಗಳು ಉತ್ತಮ ಪ್ರಗತಿ ಕಂಡಿದೆ. 3260 ರುನಂತೆ ಶೇ 4.35 ರಷ್ಟು ಏರಿಕೆ ಕಂಡಿದೆ. ಇದೇ ವೇಳೆ ಎನ್ ಎಸ್ ಇನಲ್ಲಿ ಶೇ 4.27ರಷ್ಟು ಏರಿಕೆ ಕಂಡು 3261.25ರು ನಂತೆ ಮೇಲಕ್ಕೇರಿದೆ.

ಡಾಲರ್ ಹಾಗೂ ರುಪಾಯಿ ಸಮರದ ನಡುವೆಯೂ ಯುಎಸ್ ಡಾಲರ್ ಆದಾಯ ಮುನ್ಸೂಚನೆ ಅದೇ ಸ್ಥಿತಿಯಲ್ಲಿ ಕಾಯ್ದುಕೊಂಡಿದೆ. ಮೊದಲ ತ್ರೈಮಾಸಿಕದಲ್ಲಿ 2013-14 ಆರ್ಥಿಕ ವರ್ಷಕ್ಕೆ ಶೇ 6-10ರಷ್ಟಿಂದ ಶೇ 9-10 ರಷ್ಟಕ್ಕೆ ಮುನ್ಸೂಚನೆ ಪ್ರಮಾಣ ಇಡಲಾಗಿತ್ತು.
ರುಪಾಯಿ ಪ್ರಮಾಣ 2013-14 ಆರ್ಥಿಕ ವರ್ಷಕ್ಕೆ ಶೇ 13-17 ಪ್ರಮಾಣದಿಂದ ಶೇ 21-22 ಪ್ರಮಾಣಕ್ಕೇರಿಸಲಾಗಿತ್ತು. ಪ್ರಸಕ್ತ ತ್ರೈಮಾಸಿಕದಲ್ಲಿ ಐದು ಕಾನೂನು ಸಮರಗಳನ್ನು ಇನ್ಫೋಸಿಸ್ ಗೆದ್ದಿದೆ. 68ಕ್ಕೂ ಅಧಿಕ ಹೊಸ ಕ್ಲೈಂಟ್ ಗಳನ್ನು ಹೊಂದಲಾಗಿದೆ. ಕ್ಲೌಡ್ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ಪ್ರಗತಿ ಕಂಡಿದೆ ಎಂದು ಇನ್ಫೋಸಿಸ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಎಸ್ ಡಿ ಶಿಬುಲಾಲ್ ಹೇಳಿದ್ದಾರೆ.
ಗ್ಲೋಬಲ್ ಏರ್ಜ್, ವರ್ಚ್ಯುಯಲ್ ಆಪರೇಷನ್ಸ್ ಹಾಗೂ ಇಂಟಿಗ್ರೇಟೆಡ್ ಮ್ಯಾನ್ಮೇಟ್ ಮೆಂಟ್ ಮುಂತಾದ ಉನ್ನತ ಮಟ್ಟದ ವ್ಯವಸ್ಥೆಗಳ ಮೂಲಕ ಮಾರುಕಟ್ಟೆಯಲ್ಲಿ ಹೊಸ ಹಾದಿ ಕಂಡುಕೊಳ್ಳಲಾಗುತ್ತದೆ. ಇತ್ತೀಚೆಗಷ್ಟೇ ಟೋಯೊಟಾ ಮೋಟರ್ ಯುರೋಪ್ ಜತೆ ನಾಲ್ಕು ವರ್ಷದ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಯುರೋಪ್ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಇನ್ಫೋಸಿಸ್ ಉತ್ತಮ ಪ್ರಗತಿ ಕಾಣಲಿದೆ ಎಂದು ಶಿಬುಲಾಲ್ ಹೇಳಿದರು. (ಪಿಟಿಐ)












Click it and Unblock the Notifications