ಕೊರೊನಾ ಕಾಟದ ನಡುವೆ ಇನ್ಫಿಗೆ Q1ನಲ್ಲಿ ಶೇ 12ರಷ್ಟು ಲಾಭ

ಬೆಂಗಳೂರು, ಜುಲೈ 15: ಕೊರೊನವೈರಸ್ ಸೋಂಕು, ಲಾಕ್ಡೌನ್ ನಡುವೆ ವರ್ಕ್ ಫ್ರಮ್ ಹೋಂ ಜಾರಿಗೆ ತಂದು ಇನ್ಫೋಸಿಸ್ ಗೆದ್ದುಕೊಂಡಿದೆ. ದೇಶದ ಎರಡನೇ ಅತಿದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ತನ್ನ ಮೊದಲ ತ್ರೈಮಾಸಿಕ ವರದಿಯನ್ನು ಇಂದು ಪ್ರಕಟಿಸಿದೆ.

Recommended Video

      Facebook ತ್ಯಜಿಸಿ ಇಲ್ಲ ಸೇನೆಯಿಂದ ಹೊರನಡೆಯಿರಿ | Oneindia Kannada

      ಇನ್ಫೋಸಿಸ್ ತ್ರೈಮಾಸಿಕದಲ್ಲಿ ಸಂಸ್ಥೆಯ ನಿವ್ವಳ ಲಾಭ ಶೇ 12.4ರಷ್ಟು ಏರಿಕೆ ಕಂಡಿದ್ದು, 4,272 ಕೋಟಿ ರು ಗಳಿಕೆಯಾಗಿದೆ. ಮಾರುಕಟ್ಟೆ ತಜ್ಞರು 3,820 ಕೋಟಿ ರು ಗಳಿಸಬಹುದು ಎಂದು ನಿರೀಕ್ಷಿಸಿದ್ದರು.

      ಆದಾಯದಲ್ಲಿ ಶೇ 8.5 ರಷ್ಟು ಏರಿಕೆ ಕಂಡು ಬಂದಿದ್ದು, 23,665 ಕೋಟಿ ರು ಗಳಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 21,803 ಕೋಟಿ ರು ಮಾತ್ರ ಗಳಿಸಿತ್ತು. ಮಾರುಕಟ್ಟೆ ತಜ್ಞರು 22, 600 ಕೋಟಿ ರು ಗಳಿಸಬಹುದು ಎಂದು ನಿರೀಕ್ಷಿಸಿದ್ದರು.

      Infosys Q1 net profit up 12.4 pc to Rs 4,272 cr

      ಈ ತ್ರೈಮಾಸಿಕದಲ್ಲಿ ಸಂಸ್ಥೆಯು 1.74 ಬಿಲಿಯನ್ ಡಾಲರ್ ಒಪ್ಪಂದಗಳನ್ನು ಕಂಡಿದೆ. ತ್ರೈಮಾಸಿಕ ವರದಿ ಪ್ರಕಟವಾಗುವ ಸುದ್ದಿ ಬರುತ್ತಿದ್ದಂತೆ ಬಿಎಸ್ಇಯಲ್ಲಿ ಸಂಸ್ಥೆ ಷೇರುಗಳು 6.16 ರಷ್ಟು ಏರಿಕೆ ಕಂಡು 831. 45 ರು ನಂತೆ ವಹಿವಾಟು ನಡೆಸಿತ್ತು.

      ಕೊವಿಡ್19 ವಿರುದ್ಧ ಹೋರಾಟದಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಣೆ ಕಂಡಿಲ್ಲವಾದ್ದರಿಂದ ಉದ್ಯೋಗಿಗಳಿಗೆ ಸದ್ಯಕ್ಕೆ ಸಂಬಳ ಏರಿಕೆ, ಬಡ್ತಿ ನೀಡಲು ಸಾಧ್ಯವಿಲ್ಲ ಎಂದಿದ್ದ ಇನ್ಫೋಸಿಸ್, ತನ್ನ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರೆಸುತ್ತಿರುವುದಾಗಿ ಘೋಷಿಸಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+