ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2017ರಲ್ಲಿ ಹುಬ್ಬಳ್ಳಿಯಲ್ಲಿ ಇನ್ಫೋಸಿಸ್ ಆರಂಭ

By Mahesh
|
Google Oneindia Kannada News

ಬೆಂಗಳೂರು, ಸೆ. 21: ಭಾರತದ ಎರಡನೇ ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ ತನ್ನ ಹುಬ್ಬಳ್ಳಿ ಘಟಕವನ್ನು 2017ರಲ್ಲಿ ಆರಂಭಿಸುವುದಾಗಿ ಪ್ರಕಟಿಸಿದೆ.

ಕರ್ನಾಟಕದ ಹುಬ್ಬಳ್ಳಿ ಸೇರಿದಂತೆ ದೇಶದ 5 ಕಡೆ ನೂತನ ಕೇಂದ್ರಗಳನ್ನು ತೆರೆಯಲು ಮುಂದಾಗಿದೆ. ಹುಬ್ಬಳ್ಳಿ ಕೇಂದ್ರದ ಮೊದಲ ಹಂತದ ನಿರ್ಮಾಣ ಕಾರ್ಯ 2017ರ ಮಾರ್ಚ್ ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಮೊಹಾಲಿ, ನೋಯ್ಡಾ, ನಾಗ್ಪುರ್ ಹಾಗೂ ಇಂದೋರ್ ಕೇಂದ್ರ ಜನವರಿ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಸಂಸ್ಥೆಯ ಕಾರ್ಯಕಾರಿ ಉಪಾಧ್ಯಕ್ಷ ರಾಮದಾಸ್ ಕಾಮತ್ ಯು ಅವರು ಹೇಳಿದ್ದಾರೆ.

Infosys to open Hubballi new facilities in 2017

ಇನ್ಪೋಸಿಸ್ ನಲ್ಲಿ ಸದ್ಯ 1.96 ಲಕ್ಷ ಉದ್ಯೋಗಿಗಳಿದ್ದಾರೆ.ಹೊಸ ನೇಮಕಾತಿ ಆರಂಭವಾಗಿದ್ದು ಉದ್ಯೋಗಿಗಳ ಸಂಖ್ಯೆ 2 ಲಕ್ಷಕ್ಕೇರಲಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಕಾರ್ಪೋರೇಟ್ ಕಛೇರಿ ಹೊಂದಿರುವ ಇನ್ಪೋಸಿಸ್ ಬೆಂಗಳೂರಿನಲ್ಲಿ ಒಟ್ಟು 8 ಕಚೇರಿಗಳನ್ನು ಹೊಂದಿದೆ.

ಇನ್ಫೋಸಿಸ್ ನ ಮೋಹಾಲಿಯಲ್ಲಿ 5,000, ಇಂದೋರ್, ನಾಗ್ಪುರ ಹಾಗೂ ಹುಬ್ಬಳ್ಳಿಯಲ್ಲಿ ತಲಾ 3,000 ಉದ್ಯೋಗಿಗಳನ್ನು ಹೊಂದಬಲ್ಲ ಕೇಂದ್ರಗಳಾಗಿವೆ.

English summary
We are coming up with new facilities in Mohali, Noida, Nagpur, Indore and Hubballi. We will start with one portion of these projects, Ramadas Kamath U, Infosys executive vice-president
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X