ತನ್ನ 200 ಉದ್ಯೋಗಿಗಳನ್ನು ಅಮೆರಿಕಾದಿಂದ ಕರೆತಂದ ಇನ್ಫೋಸಿಸ್

ಬೆಂಗಳೂರು, ಜುಲೈ 6: ಭಾರತದ ಎರಡನೇ ಅತಿದೊಡ್ಡ ಐಟಿ ಸೇವೆಗಳ ಕಂಪನಿಯಾದ ಇನ್ಫೋಸಿಸ್ ಲಿಮಿಟೆಡ್ 200 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಮತ್ತು ಅವರ ಕುಟುಂಬಗಳನ್ನು ಅಮೆರಿಕಾದಿಂದ ಚಾರ್ಟರ್ಡ್ ವಿಮಾನದಿಂದ ವಾಪಸ್ ಕರೆತಂದಿದೆ.

ಚಿಲ್ಲರೆ ವ್ಯಾಪಾರ, ಸಿಪಿಜಿ ಮತ್ತು ಲಾಜಿಸ್ಟಿಕ್ಸ್‌ನ ಸಹಾಯಕ ಉಪಾಧ್ಯಕ್ಷ ಸಮೀರ್ ಗೋಸವಿ ಹಂಚಿಕೊಂಡ ಲಿಂಕ್ಡ್‌ಇನ್ ಪೋಸ್ಟ್‌ನ ಪ್ರಕಾರ, ಇನ್ಫೋಸಿಸ್, ಚಾರ್ಟರ್ಡ್ ಫ್ಲೈಟ್ ಮೂಲಕ ಇನ್ಫೋಸಿಸ್ ಉದ್ಯೋಗಿಗಳು ಮತ್ತು ಅವರ ಕುಟುಂಬಗಳನ್ನು ಭಾರತಕ್ಕೆ ಕರೆತರಲು ವಿಮಾನವನ್ನು ಆಯೋಜಿಸಲಾಗಿದೆ ಎಂದು ದೃಢ ಪಡಿಸಲಾಯಿತು. ಆದರೆ ಅವರ ಹೆಸರು, ಕುಟುಂಬದವರ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದೆ.

ಮಾರ್ಚ್ ಅಂತ್ಯದ ತ್ರೈಮಾಸಿಕದ ವೇಳೆಗೆ ಕಂಪನಿಯ ಆದಾಯಕ್ಕೆ ಶೇಕಡಾ 61.6ರಷ್ಟು ಕೊಡುಗೆ ನೀಡಿದ ಇನ್ಫೋಸಿಸ್‌ಗೆ ಅಮೆರಿಕಾ ಅತಿದೊಡ್ಡ ಮಾರುಕಟ್ಟೆಯಾಗಿದೆ. ಕಂಪನಿಯು ಅಮೆರಿಕಾದಲ್ಲಿ ತನ್ನ ಸ್ಥಳೀಯ ನೇಮಕವನ್ನು ಗಮನಾರ್ಹವಾಗಿ ಹೆಚ್ಚಿಸಿದ್ದರೂ, ಅದರ ಅನೇಕ ಭಾರತೀಯ ಉದ್ಯೋಗಿಗಳು ಅಮೆರಿಕಾದಲ್ಲಿ ಎಚ್ 1-ಬಿ ವೀಸಾಗಳ ಮೇಲೆ ನೆಲೆಸಿದ್ದಾರೆ.

Infosys Ltd brings Back Over 200 Employees From US In Chartered Flight

ಕಳೆದ 24 ತಿಂಗಳುಗಳಲ್ಲಿ, ಇನ್ಫೋಸಿಸ್ ತನ್ನ ಸ್ಥಳೀಕರಣ ಉಪಕ್ರಮವನ್ನು ಅಮೆರಿಕಾಲ್ಲಿ ಜಾರಿಗೆ ತಂದಿದೆ, 10,000 ಕ್ಕೂ ಹೆಚ್ಚು ಯುಎಸ್ ಪ್ರಜೆಗಳು ಅಥವಾ ಖಾಯಂ ನಿವಾಸಿಗಳನ್ನು ನೇಮಕ ಮಾಡಿದೆ ಎಂದು ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+