ಕ್ರೀಡಾ ಉತ್ಪನ್ನ ಸಂಸ್ಥೆ Whoopನಲ್ಲಿ ಇನ್ಫೋಸಿಸ್ ಹೂಡಿಕೆ

ಬೆಂಗಳೂರು, ಡಿ.14: ಯುಎಸ್ ಮೂಲದ ಕ್ರೀಡಾ ಉತ್ಪನ್ನ ಸ್ಟಾರ್ಟ್ ಅಪ್ ಸಂಸ್ಥೆ ವೂಪ್ (Whoop) ನಲ್ಲಿ ಭಾರತದ ಐಟಿ ದಿಗ್ಗಜ ಇನ್ಫೋಸಿಸ್ ಭಾರಿ ಮೊತ್ತದ ಹೂಡಿಕೆ ಮಾಡಿದೆ.

ವೂಪ್ ಸಂಸ್ಥೆಯಲ್ಲಿ 3 ಮಿಲಿಯನ್ ಯುಎಸ್ ಡಾಲರ್ ಹೂಡಿಕೆ ಮಾಡಿರುವುದಾಗಿ ಇನ್ಫೋಸಿಸ್ ಪ್ರಕಟಿಸಿದೆ. ಸರಿ ಸುಮಾರು 20 ಕೋಟಿ ರು ಗಳನ್ನು ವೂಪ್ ಸಂಸ್ಥೆಯಲ್ಲಿ ತೊಡಗಿಸಲಾಗಿದೆ. ಸಂಸ್ಥೆಯ ಬಹುಪಾಲು ಕಾರ್ಯ ವೈಖರಿಯ ನಿರ್ವಹಣೆ ಇನ್ಫೋಸಿಸ್ ವಹಿಸಿಕೊಳ್ಳಲಿದೆ. ಪ್ರಮುಖ ಕ್ರೀಡಾ ತಂಡಗಳ ಕಾರ್ಯಕ್ಷಮತೆಗೆ ಬೇಕಾದ ತಂತ್ರಜ್ಞಾನದ ಬೆಂಬಲ ವೂಪ್ ನೀಡಲಿದೆ.

Infosys invests USD 3 mn in sports startup WHOOP

ಅಥ್ಲೀಟ್ ಗಳು, ಈಜುಪಟುಗಳು ಸೇರಿದಂತೆ ಅನೇಕ ಕ್ರೀಡಾಪಟುಗಳು ಬಳಸುವ ಮಣಿಕಟ್ಟಿನಲ್ಲಿ ಧರಿಸುವ ಸಾಧನಗಳು (ದೇಹದ ಒತ್ತಡ, ನಡಿಗೆ, ಓಟದ ವೇಗ, ಮುಂತಾದ ವಿಶ್ಲೇಷಣೆ ತೋರಿಸುವ ಸಾಧನ) ವೂಪ್ ನ ಕೊಡುಗೆಯಾಗಿದೆ. ಡಿಸೆಂಬರ್ 16ರ ವೇಳೆಗೆ ವೂಪ್ ಷೇರು ಖರೀದಿ ಪ್ರಕ್ರಿಯೆ(ಶೇ20ಕ್ಕಿಂತ ಕಡಿಮೆ) ಬಹುತೇಕ ಪೂರ್ಣಗೊಳ್ಳಲಿದೆ ಎಂದು ಇನ್ಫೋಸಿಸ್ ಹೇಳಿದೆ.

ಸೋಮವಾರದಂದು ಬಿಎಸ್ ಇನಲ್ಲಿ ಇನ್ಫೋಸಿಸ್ ಷೇರುಗಳು ಶೇ 1.01ರಷ್ಟು ಏರಿಕೆ ಕಂಡು 1,063ರು ನಂತೆ ಮೇಲಕ್ಕೇರಿತ್ತು. (ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+