ಇನ್ಫೋಸಿಸ್ ಗೆ ಆಘಾತ, ಸಿಎಫ್ಒ ರಾಜೀವ್ ರಾಜೀನಾಮೆ

ಬೆಂಗಳೂರು, ಅ.12: ದೇಶದ ಎರಡನೇ ಅತಿದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ ಗೆ ಸೋಮವಾರ ಆಘಾತವಾಗಿದೆ. ಸಂಸ್ಥೆ ಮುಖ್ಯ ವಾಣಿಜ್ಯ ಅಧಿಕಾರಿ (ಸಿಎಫ್ ಒ) ರಾಜೀವ್ ಬನ್ಸಾಲ್ ಅವರು ರಾಜೀನಾಮೆ ಘೋಷಿಸಿದ್ದಾರೆ.

ಡಿಸೆಂಬರ್ 31, 2015ರಿಂದ ರಾಜೀವ್ ಅವರ ಸಿಎಫ್ ಒ ಅವಧಿ ಮುಕ್ತಾಯವಾಗಲಿದೆ. ರಾಜೀವ್ ಅವರ ಸ್ಥಾನಕ್ಕೆ ಕಾರ್ಯಕಾರಿ ಉಪಾಧ್ಯಕ್ಷ ರಂಗನಾಥ್ ದ್ವಾರಕನಾಥ್ ಮಾವಿನಕೆರೆ ಅವರನ್ನು ನಿಯುಕ್ತಿಗೊಳಿಸಲಾಗಿದೆ. ಇನ್ಫೋಸಿಸ್ ತನ್ನ ಎರಡನೇ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದ ಬೆನ್ನಲ್ಲೇ ಈ ಘೋಷಣೆ ಹೊರ ಬಂದಿದೆ.[ಇನ್ಫಿ ಬಿಟ್ಟು ಐಗೇಟ್ ಸಿಇಒ ಆಗಿದ್ದ ಅಶೋಕ್ ರಾಜೀನಾಮೆ]

Infosys CFO Rajiv Bansal steps down

ಇನ್ಫೋಸಿಸ್ ನಲ್ಲಿ ವಿ ಬಾಲಕೃಷ್ಣನ್ ಅವರಿಂದ ತೆರವಾಗಿದ್ದ ಸಿಎಫ್ ಒ ಸ್ಥಾನವನ್ನು ತುಂಬಿದ್ದ ಬನ್ಸಾಲ್ ಅವರು 15 ವರ್ಷಕ್ಕೂ ಅಧಿಕ ಕಾಲದ ಇನ್ಫೋಸಿಸ್ ನಂಟನ್ನು ಕಳಚಿಕೊಂಡಿದ್ದಾರೆ.[ಟಿಸಿಎಸ್, ಇನ್ಫೋಸಿಸ್, ವಿಪ್ರೋಗೆ ಕಾದಿದೆ ಅಪಾಯ!]

ಇನ್ಫೋಸಿಸ್ ಸ್ಥಾಪಕರಾದ ಎಸ್ ಡಿ ಶಿಬುಲಾಲ್ ನಿರ್ಗಮನ, ಎನ್ ಆರ್ ನಾರಾಯಣ ಮೂರ್ತಿ ಪುನರ್ ಪ್ರವೇಶ, ಸಿಇಒ ಆಗಿ ವಿಶಾಲ್ ಸಿಕ್ಕಾ ಬಂದ ಮೇಲೆ ಆಗಿರುವ ಬದಲಾವಣೆ, ಆರ್ಥಿಕ ಪ್ರಗತಿ ಎಲ್ಲವನ್ನು ಕಂಡಿರುವ ರಾಜೀವ್ ಬನ್ಸಾಲ್ ಅವರು ಮುಂದೆ ಯಾವ ಕಂಪನಿ ಸೇರಲಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.[ಇನ್ಫೋಸಿಸ್: ಕನ್ನಡಿಗ ಕೆವಿ ಕಾಮತ್ ಜಾಗಕ್ಕೆ ಶೇಷಸಾಯಿ]

ಇನ್ನೊಂದೆಡೆ ಇನ್ಫೋಸಿಸ್ ನ ಹಿರಿಯ ಉದ್ಯೋಗಿಗಳಲ್ಲಿ ಒಬ್ಬರಾದ ರಂಗನಾಥ್ ಅವರು 2000ರಲ್ಲಿ ಸಂಸ್ಥೆ ಸೇರಿದವರು. ಅದಕ್ಕೂ ಮುಂಚೆ ಐಸಿಐಸಿಐ ಬ್ಯಾಂಕಿನಲ್ಲು ಹಿರಿಯ ಉಪಾಧ್ಯಕ್ಷರಾಗಿದ್ದರು. ಐಐಟಿ ಮದ್ರಾಸ್ ರಿಂದ ಎಂಟೆಕ್ ಹಾಗೂ ಅಹಮದಾಬಾದಿನ ಐಐಎಂನಿಂದ ಎಂಬಿಎ ಪಡೆದಿದ್ದಾರೆ.

ಈ ನಡುವೆ ದೇಶದ ಎರಡನೇ ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ ತನ್ನ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಭರ್ಜರಿ ಆದಾಯ, ಲಾಭ ಪಡೆದುಕೊಂಡಿದೆ. ಸೆಪ್ಟೆಂಬರ್ ಅಂತ್ಯಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಶೇ 12.1 ರಂತೆ 3398 ಕೋಟಿ ರು ನಿವ್ವಳ ಲಾಭ ಪಡೆದುಕೊಂಡಿದೆ. ಮಾರುಕಟ್ಟೆ ನಿರೀಕ್ಷೆ 2,300 ಕೋಟಿ ರು ಮಾತ್ರ ಇತ್ತು. [ಪೂರ್ಣ ವರದಿ ಇಲ್ಲಿ ಓದಿ] (ಒನ್ ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+