• search

ಬೆಂಗಳೂರಿನ ಇನ್ಫೋಸಿಸ್‍ಗೆ ಸಿಲ್ವರ್ ವಿನ್ನರ್- ಜಾಗತಿಕ ಪ್ರಶಸ್ತಿ

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು, ಆಗಸ್ಟ್ 2, 2018: ಇನ್ಫೋಸಿಸ್ ಸಂಸ್ಥೆಯು ಲೀಗ್ ಆಫ್ ಅಮೆರಿಕನ್ ಕಮ್ಯೂನಿಕೇಷನ್ಸ್ ಪ್ರೊಫೆಷನಲ್ಸ್(ಎಲ್‍ಎಸಿಪಿ) ವಿಷನ್ ಅವಾರ್ಡ್ಸ್ 2017ರ ಸಿಎಸ್‍ಆರ್ ರಿಪೋರ್ಟ್ಸ್ ವಿಭಾಗದಲ್ಲಿ'ಸಿಲ್ವರ್ ವಿನ್ನರ್- ಜಾಗತಿಕ' ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

  ಇಂಟೆಲ್ ಸಂಸ್ಥೆಗೆ ಪ್ಲಾಟಿನಮ್, ದಿ ಹೋಮ್ ಡೆಪೋ ಡಿ ಮೆಕ್ಸಿಕೋ, ಲುಕೊಯಿಲ್, ಕೊರಿಯಾ ಹೈಡ್ರೋ ಅಂಡ್ ನ್ಯೂಕ್ಲಿಯರ್ ಪವರ್ ಕೋ ಲಿಮಿಟೆಡ್, ಜನರಲ್ ಮೋಟರ್ಸ್ , ಮೆಕ್ಸಿಕೋಗೆ ಚಿನ್ನದ ಪ್ರಶಸ್ತಿ ಸಿಕ್ಕಿದೆ.

  ಮೆಟ್ರೋ ನಿಗಮದೊಂದಿಗೆ ಒಡಂಬಡಿಕೆ ಮಾಡಿಕೊಂಡ ಇನ್ಫೋಸಿಸ್

  ಸಂಸ್ಥೆಯ ಸಾಮಾಜಿಕ ಕಾರ್ಯಕ್ರಮಗಳ ಅಂಗವಾದ ಇನ್ಫೋಸಿಸ್ ಪ್ರತಿಷ್ಠಾನದ ವಾರ್ಷಿಕ ವರದಿಯಲ್ಲಿ ಅತ್ಯುತ್ಕೃಷ್ಟತೆಯನ್ನು ಸಾಧಿಸಿದ್ದಕ್ಕಾಗಿ ಇನ್ಫೋಸಿಸ್‍ಗೆ ಈ ಗೌರವ ಸಂದಿದೆ. ಮಾಹಿತಿಯಲ್ಲಿನ ನಿಖರತೆ, ಷೇರುದಾರರಿಗೆ ಪತ್ರ, ಮೊದಲ ಪ್ರಭಾವ, ಕ್ರಿಯಾಶೀಲತೆ, ಸಂದೇಶದಲ್ಲಿ ಸ್ಪಷ್ಟತೆ, ಹಣಕಾಸಿನ ವರದಿ ಮತ್ತು ರಿಪೋರ್ಟ್ ಕವರ್ ಸೇರಿದಂತೆ ವಿವಿಧ ಮಾನದಂಡಗಳಲ್ಲಿ ಇನ್ಫೋಸಿಸ್ ಅತ್ಯಧಿಕ ಅಂಕಗಳನ್ನು ಗಳಿಸಿದೆ.

  Infosys bags Silver winner at LACP vision awards

  2001ರಲ್ಲಿ ಅಸ್ತಿತ್ವಕ್ಕೆ ಬಂದ, ಲೀಗ್ ಆಫ್ ಅಮೆರಿಕನ್ ಕಮ್ಯೂನಿಕೇಷನ್ಸ್ ಪ್ರೊಫೆಷನಲ್ಸ್ ಎಲ್‍ಎಲ್‍ಸಿ(ಎಲ್‍ಎಸಿಪಿ) ಸಾರ್ವಜನಿಕ ಸಂಪರ್ಕ ಕ್ಷೇತ್ರದೊಳಗೇ ಒಂದು ಫೋರಮ್ ಅನ್ನು ಸೃಷ್ಟಿಸುವ ಉದ್ದೇಶ ಹೊಂದಿದೆ. ಆ ಮೂಲಕ ಸಂವಹನ ಮತ್ತು ವಿನ್ಯಾಸದ ಕ್ಷೇತ್ರದೊಳಗೆ ಅತ್ಯುತ್ತಮ ದರ್ಜೆಯ ಚಟುವಟಿಕೆಗಳ ಬಗ್ಗೆ ಚರ್ಚಿಸುವುದು ಇದರ ಧ್ಯೇಯವಾಗಿದೆ.

  ಪ್ರಸಕ್ತ ವರ್ಷದ ಕಾರ್ಯಕ್ರಮವು, ಸತತ ಹದಿನೆಂಟನೇ ವರ್ಷದ ಸಮಾರಂಭವಾಗಿದ್ದು, ಬಹಳಷ್ಟು ರಾಷ್ಟ್ರಗಳನ್ನು ಪ್ರತಿನಿಧಿಸುವ ಸುಮಾರು 1,000 ಸಂಸ್ಥೆಗಳನ್ನು ಒಳಗೊಂಡಿತ್ತು.

  ಕಳೆದ ಮೂರು ವರ್ಷಗಳ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ವರದಿಗಾಗಿ ಇನ್ಫೋಸಿಸ್‍ಗೆ ಎಲ್‍ಎಸಿಪಿ ವಿಷನ್ ಅವಾರ್ಡ್ ಅನ್ನು ನೀಡಲಾಯಿತು. 2015-16ರ ವರದಿಗಾಗಿ ಕಂಪನಿಯು ಕಂಚಿನ ಪ್ರಶಸ್ತಿ ಗೆದ್ದಿದ್ದರೆ, 2016-17ರ ವರದಿಯಲ್ಲಿ ರಜತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು.

  1996ರಲ್ಲಿ ಅಸ್ತಿತ್ವಕ್ಕೆ ಬಂದ ಇನ್ಫೋಸಿಸ್ ಪ್ರತಿಷ್ಠಾನವು ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಆರೋಗ್ಯಸೇವೆ, ಕಲೆ ಮತ್ತು ಸಂಸ್ಕೃತಿ ಮತ್ತು ನಿರ್ಗತಿಕರ ಸೇವಾ ಕ್ಷೇತ್ರಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ, ಅಂಥ ಕಾರ್ಯಗಳಿಗೆ ಬೆಂಬಲ ನೀಡುತ್ತಾ ಬಂದಿದೆ.

  ಭಾರತದ ಬೇರೆ ಬೇರೆ ರಾಜ್ಯಗಳ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವುದು ಕೂಡ ಸಂಸ್ಥೆಯ ಧ್ಯೇಯವಾಗಿದೆ. ಸಮಾಜದ ಎಲ್ಲ ವರ್ಗಗಳೊಂದಿಗೆ ಕಾರ್ಯ ನಿರ್ವಹಿಸಲು, ಅಪರಿಮಿತ ಆಸಕ್ತಿಯಿಂದ ಪ್ರಾಜೆಕ್ಟ್ ಗಳ ಆಯ್ಕೆ ಮಾಡಲು ಮತ್ತು ಹೆಚ್ಚಿನ ಪ್ರಮಾಣದಲ್ಲಿ ಸಮಾಜದಿಂದ ಸಾಂಪ್ರದಾಯಿಕವಾಗಿ ಕಡೆಗಣಿಸಲ್ಪಟ್ಟ ಪ್ರದೇಶಗಳಲ್ಲಿ ಕೆಲಸ ಮಾಡಲು ಇನ್ಫೋಸಿಸ್ ಪ್ರತಿಷ್ಠಾನವು ಹೆಮ್ಮೆ ಪಡುತ್ತದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Infosys bags Silver winner from League of American Communications Professionals LLC (LACP) vision awards. Intel gets Platinum, General Motors, Korea Hydro and Nuclear Power co ltd, Lukoil, TheHome depot de Mecico get Gold.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more