ಇನ್ಫೋಸಿಸ್ ತೊರೆದ ಹೆಚ್ಚು ಸಂಬಳದಾರ ಉದ್ಯೋಗಿ

ಬೆಂಗಳೂರು, ನ.19: ಅಗ್ರಗಣ್ಯ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ ಗೆ ಮತ್ತೊಂದು ಹೊಡೆತ ಬಿದ್ದಿದೆ. ಅಶೋಕ್ ವೆಮೂರಿ ನಂತರ ಅಮೆರಿಕದ ಇನ್ಫೋಸಿಸ್ ನ ಯುಟಿಲಿಟಿಸ್ ಅಂಡ್ ರಿಸೋರ್ಸಸ್ ವಿಭಾಗದ ಮುಖ್ಯಸ್ಥ ಸ್ಟೀಫನ್ ಪ್ರಾಟ್ ಅವರು ಕಚೇರಿಯಿಂದ ಹೊರನಡೆದಿದ್ದಾರೆ. ಕಳೆದ ಆರ್ಥಿಕ ವರ್ಷದ ಲೆಕ್ಕಾಚಾರದಂತೆ ಅತಿ ಹೆಚ್ಚು ಸಂಬಳ ಪಡೆಯುತ್ತಿದ್ದ ಇನ್ಫೋಸಿಸ್ ಅಧಿಕಾರಿ ಎಂಬ ಪಟ್ಟ ಪ್ರಾಟ್ ಪಾಲಾಗಿತ್ತು.

2004ರಲ್ಲಿ ಇನ್ಫೋಸಿಸ್ ಸೇರಿದ ಪ್ರಾಟ್ ಅವರು ಕಂಪನಿಯ ಕಾರ್ಯಕಾರಿ ಸಮಿತಿಯಲ್ಲಿ ಮುಂದುವರೆಯಲಿದ್ದು ಜನವರಿ 31,2014 ಅವರ ಅಧಿಕಾರದ ಕೊನೆ ದಿನವಾಗಲಿದೆ. ಕಳೆದ ಆರ್ಥಿಕ ವರ್ಷದಲ್ಲಿ ಪ್ರಾಟ್ ಗೆ ಸುಮಾರು 2.13 ಮಿಲಿಯನ್ ಡಾಲರ್ (ಸುಮಾರು 11 ಕೋಟಿ ರು.ಗೂ ಅಧಿಕ) ಮೊತ್ತದ ಜತೆಗೆ 1.3 ಮಿಲಿಯನ್ ಡಾಲರ್ ಬೋನಸ್ ಕೂಡಾ ಗಳಿಸಿದ್ದರು. ಇದು ಇನ್ಫೋಸಿಸ್ ನೀಡಿರುವ ಅತಿ ಹೆಚ್ಚು ಮೊತ್ತದ ಸಂಬಳವಾಗಿದೆ.

ಇನ್ಫಿ ತೊರೆದ ಮೇಲೆ ಪ್ರಾಟ್ ತನ್ನದೇ ಆದ ಸಂಸ್ಥೆ ಹುಟ್ಟುಹಾಕಲಿದ್ದಾರೆ ಎಂದು ಅವರ ಆಪ್ತರು ಪಿಟಿಐಗೆ ತಿಳಿಸಿದ್ದಾರೆ. ಪ್ರಾಟ್ ಅವರ ಸ್ಥಾನಕ್ಕೆ ಎನರ್ಜಿ ಹಾಗೂ ಸರ್ವೀಸಸ್ ನ ಮುಖ್ಯಸ್ಥ ಅಲೆಕ್ಸಾಂಡ್ರೆ ಎಲ್ವಿಸ್ ರೋಡ್ರಿಗೇಸ್ ಅವರನ್ನು ಕೂರಿಸಲಾಗುತ್ತದೆ.

Infosys' highest paid executive Stephen Pratt quits

ಕಳೆದ ಕೆಲ ಅವಧಿಯಲ್ಲಿ ಹಿರಿಯ ಅಧಿಕಾರಿಗಳು ಇನ್ಫೋಸಿಸ್ ತೊರೆಯುತ್ತಿದ್ದು, ಇದು ನಿರೀಕ್ಷಿತ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಿದ್ದಾರೆ. ಹೊಸ ತಂಡ ಕಟ್ಟುವ ಮುನ್ನ ಹಳೆ ಅಧಿಕಾರಿಗಳು ಸಂಸ್ಥೆ ತೊರೆಯುತ್ತಿದ್ದಾರೆ. ಸದ್ಯದ ಸಿಇಒ ಎಸ್ ಡಿ ಶಿಬುಲಾಲ್ 2015 ರಲ್ಲಿ ಹುದ್ದೆ ತೊರೆಯಲಿದ್ದಾರೆ. ಅಶೋಕ್ ವೆಮೂರಿ ಸಂಸ್ಥೆ ತೊರೆದು ಐಗೇಟ್ ಸಿಇಒ ಆಗಿದ್ದಾರೆ. ಸಂಸ್ಥೆ ಉಪಾಧ್ಯಕ್ಷರಾಗಿದ್ದ ಸುಧೀರ್ ಚತುರ್ವೇದಿ, ಜಾಗತಿಕ ಮಾರುಕಟ್ಟೆ ವಿಭಾಗದ ಬಸಬ್ ಪ್ರಧಾನ್ ಮುಂತಾದವರು ಸಂಸ್ಥೆ ತೊರೆದಿದ್ದಾರೆ.

ಕಳೆದ ಜೂನ್ ನಲ್ಲಿ ಇನ್ಫೋಸಿಸ್ ಕಾರ್ಯಕಾರಿ ಅಧ್ಯಕ್ಷರಾಗಿ ಎನ್.ಆರ್. ನಾರಾಯಣಮೂರ್ತಿ ಪುನರಾಗಮನದ ನಂತರ ಆಡಳಿತ ಮಂಡಳಿಯಲ್ಲಿ ಮಹತ್ವದ ಪುನಾರಚನೆಯಾಗಿತ್ತು. ಅಶೋಕ್ ವೆಮೂರಿ ರಾಜೀನಾಮೆ ನೀಡಿ ಐಗೇಟ್ ಸಂಸ್ಥೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇರಿದ ನಂತರ ಆಡಳಿತ ಮಂಡಳಿ ಕೆಲವು ಹುದ್ದೆಗಳನ್ನು ಪುನಾರಚಿಸುವುದು ಅವಶ್ಯವಾಗಿತ್ತು.

ಅಮೆರಿಕದಲ್ಲಿ ಇನ್ಪೋಸಿಸ್ ಗಟ್ಟಿಯಾಗಿ ನೆಲೆಗೊಳ್ಳಲು ಹಾಗೂ ಸಂಸ್ಥೆ ಅಭಿವೃದ್ಧಿಗೊಳ್ಳಲು ವೆಮೂರಿ ಕಾರಣರಾಗಿದ್ದರು ಎಂದರೆ ತಪ್ಪಾಗಲಾರದು. ಅದರಂತೆ, ಸಿಎಸ್ ಐನ ಮುಖ್ಯಸ್ಥರಾಗಿದ್ದ ಸ್ಟೀಫನ್ ಪ್ರಾಟ್ ಕಾಕಲ್ ಅಧೀನದಲ್ಲಿ ಕಾರ್ಯ ನಿರ್ವಹಿಸಿದ್ದರು.. ಉತ್ತರ ಅಮೆರಿಕ ಮಾರುಕಟ್ಟೆಗೆ ಅನ್ವಯವಾಗುವಂತೆ 'ಯುಟಿಲಿಟಿಸ್ ಅಂಡ್ ರಿಸೋರ್ಸಸ್' ಎಂಬ ಹೊಸ ವಿಭಾಗ ಸೃಷ್ಟಿಸಿ ಪ್ರಾಟ್ ಗೆ ಅದರ ಜವಾಬ್ದಾರಿ ವಹಿಸಲಾಗಿತ್ತು. ಆದರೆ, ಪ್ರಾಟ್ ಅವರು ವಿ. ಬಾಲಕೃಷ್ಣನ್ ಅವರಿಗೆ ವಿಭಾಗದ ವರದಿ ಒಪ್ಪಿಸುವಂತೆ ಸೂಚಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+