ಭಾರತದ ಪ್ರಥಮ ಕೋಡಿಂಗ್ ಶಾಲೆ ಬೆಂಗಳೂರಲ್ಲಿ ಆರಂಭ
ಬೆಂಗಳೂರು, ಜುಲೈ 04: ಮಸಾಯ್ ಸ್ಕೂಲ್ ಉದ್ಯೋಗ ಆಧಾರಿತ ಸೀಡ್ ಫಂಡಿಂಗ್ ಸ್ಟಾರ್ಟ್‍ಅಪ್ ಕಂಪೆನಿಯಾಗಿದ್ದು, ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಆರಂಭಿಸಿದೆ.
ಮಸಾಯ್ ಸ್ಕೂಲ್ ಕೋಡಿಂಗ್ ಕೇಂದ್ರಿತ ಕಲಿಕಾ ಕಾರ್ಯಕ್ರಮಗಳನ್ನು ನಡೆಸಲಿದ್ದು, ಕಲಿಕಾ ಆಸಕ್ತರನ್ನು ಕೌಶಲಭರಿತನ್ನಾಗಿ ಮಾಡಿ, ನೌಕರಿ ಲಭ್ಯವಿರುವ ವೃತ್ತಿಗಳಿಗೆ ಅಗತ್ಯವಿರುವ ತರಬೇತಿ ನೀಡಲಾಗುತ್ತದೆ. ಮುಂದಿನ 10ರಿಂದ 12 ತಿಂಗಳ ಅವಧಿಯಲ್ಲಿ 500ಕ್ಕೂ ಹೆಚ್ಚಿನ ವಿದ್ಯಾರ್ಥಿಗಳನ್ನು ಪದವೀಧರರನ್ನಾಗಿ ಮಾಡುವ ಆಲೋಚನೆ ಹೊಂದಿದೆ.
ಆಸಕ್ತರು ಕೋರ್ಸ್‍ಗಳಿಗೆ ಉಚಿತವಾಗಿ ಹೆಸರು ನೋಂದಾಯಿಸಬಹುದು ಹಾಗೂ ಸೂಕ್ತ ನೌಕರಿ ದೊರೆತ ಬಳಿಕ ಕೋರ್ಸ್‍ನ ಶುಲ್ಕವನ್ನು ಭರಿಸಲು ಅವಕಾಶವಿರುತ್ತದೆ. ಕೋಡಿಂಗ್ ಎಕ್ಸ್ ಪರ್ಟ್ ಆಗುವ ಆಕಾಂಕ್ಷೆಯುಳ್ಳ ಯಾರೂ ಬೇಕಿದ್ದರೂ ಕೋರ್ಸ್‍ಗೆ ಸೇರಲು ಮುಕ್ತ ಅವಕಾಶವಿದೆ. ಕೆಲಸ ಮಾಡಲು ಅವಕಾಶವಿರುವ ಸೌಲಭ್ಯದೊಂದಿಗೆ ಕಳೆದ ಜೂನ್ ತಿಂಗಳನಲ್ಲಿ ಆರಂಭಿಕ ಬ್ಯಾಚ್ ಅನ್ನು ಬೆಂಗಳೂರಿನಲ್ಲಿ ಆರಂಭಿಸಲಾಗಿದೆ.

ಗ್ರಾಬ್‍ಹೌಸ್‍ನ ಮಾಜಿ ಸಂಸ್ಥಾಪಕರಾಗಿರುವ ಪ್ರತೀಕ್ ಶುಕ್ಲಾ ಅವರು ಮಸಾಯ್ ಸ್ಕೂಲ್‍ನ ಸ್ಥಾಪಕರಾಗಿದ್ದು, ಇಲ್ಲಿ 5 ತಿಂಗಳ ಅವಧಿಯ ವಿಸ್ತೃತವಾದ ವೆಬ್ ಡೆವಲಪ್‍ಮೆಂಟ್ ಪ್ರೋಗ್ರಾಂನ ಜತೆಗೆ ವ್ಯಕ್ತಿತ್ವ ವಿಕಸನ ಮತ್ತು ಕೌಶಲ ತರಬೇತಿ ನೀಡಲಾಗುತ್ತದೆ.
ಹೈಬ್ರಿಡ್ ಮಾಡೆಲ್ ಆಧರಿಸಿದ ಆನ್‍ಲೈನ್ ಮತ್ತು ತರಗತಿ ಆಧಾರಿತ ತರಬೇತಿ ನೀಡಲಾಗುವುದು, ಸಮಗ್ರ ತರಬೇತಿಯಿಂದ ಐಟಿ ವಲಯಕ್ಕೆ ಅಗತ್ಯವಿರುವ ಉದ್ಯೋಗ ಸೃಜನೆಯಾಗಲಿವೆ.
ಮಸಾಯ್ ಸ್ಕೂಲ್‍ನ ಸಂಸ್ಥಾಪಕರಾದ ಪ್ರತೀಕ್ ಶುಕ್ಲಾ ಮಾತನಾಡಿ, "ಭಾರತವು ಇಂದು ಐಟಿ ಉದ್ಯೋಗಸೃಜನೆಯಲ್ಲಿ ವಿಶ್ವದಲ್ಲೇ ಅತಿದೊಡ್ಡ ದೇಶವಾಗಿದ್ದು, ಅದು ಬೆಳೆಯುತ್ತಲೇ ಇದೆ. ಪ್ರತಿವರ್ಷ ಸಾವಿರಾರು ಎಂಜಿನಿಯರಿಂಗ್ ಕಾಲೇಜುಗಳಿಂದ ಲಕ್ಷಾಂತರ ಪದವೀಧರರು ಹೊರಬರುತ್ತಿದ್ದಾರೆ.
ಆದರೆ, ವಾಸ್ತವದಲ್ಲಿ ಅರ್ಧದಷ್ಟು ಮಂದಿಗೂ ಉದ್ಯೋಗ ಸಿದ್ಧವಿಲ್ಲ. ಶಿಕ್ಷಣ ಸಂಸ್ಥೆಗಳು ನುರಿತ ಕೌಶಲಕ್ಕಿಂತ ಕೇವಲ ಶಿಕ್ಷಣಕ್ಕಷ್ಟೇ ಆದ್ಯತೆ ನೀಡುತ್ತಿರುವುದರಿಂದ ಕೌಶಲದ ಅಂತರ ಹೆಚ್ಚುತ್ತಿದೆ. ಈ ಕಾರಣಕ್ಕಾಗಿ ನಾವು ಮಸಾಯ್ ಸ್ಕೂಲ್ ತೆರೆದಿದ್ದೇವೆ. ಈ ನಿಟ್ಟಿನಲ್ಲಿ ಮುಂದೆ ಸಾಗಲು ಕೌಶಲ ಅಭಿವೃದ್ಧಿಗೆ ಒತ್ತು ನೀಡಿದ್ದೇವೆ. ನಮ್ಮ ಕೋರ್ಸ್‍ಗಳನ್ನು ಸದ್ಯದ ಉದ್ಯಮದ ಅಗತ್ಯಗಳನ್ನು ಆಧರಿಸಿ ಕೋಡಿಂಗ್ ಪಠ್ಯ ರೂಪಿಸಿ ವಿನ್ಯಾಸಪಡಿಸಿದ್ದೇವೆ" ಎಂದು ತಿಳಿಸಿದರು.
ಪ್ರತೀಕ್ ಅವರು ಇನ್ನು ಮುಂದುವರೆದು "ಮಸಾಯ್ ತನ್ನ ವಿದ್ಯಾರ್ಥಿಗಳಿಗೆ ಪ್ರತಿ ದಿನ 10 ರಿಂದ 12 ಗಂಟೆ ಅವಧಿಯ ಕೋಡಿಂಗ್ ಕೌಶಲದಲ್ಲಿ ಪರಿಣತರಾಗಿ ರೂಪುಗೊಳ್ಳಲು ಅನುವಾಗುವಂತೆ ಕಾರ್ಪೋರೇಟ್ ವಲಯದ ಕೆಲಸದ ಅನುಭವ ನೀಡಲಿದ್ದೇವೆ. ಕೇವಲ ಕೋಡಿಂಗ್ ಕೌಶಲ ಮಾತ್ರವಲ್ಲದೆ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ನಾವು ಒತ್ತು ನೀಡಲಿದ್ದೇವೆ. ಶಿಕ್ಷಣ ನೀಡುವ ನಾವು ವಿದ್ಯಾರ್ಥಿಗಳಿಗೆ ಕೇವಲ ಏನನ್ನೋ ಕಲಿಸದೇ ಅವರು ಎಲ್ಲವನ್ನು ಕಲಿತಿರಬೇಕು ಎಂಬುದಕ್ಕೇ ಆದ್ಯತೆ ಕೋಡುತ್ತವೆ. ಯಶಸ್ಸಿಗೆ ಶಿಸ್ತು ಅತ್ಯಗತ್ಯ ಎಂಬುದನ್ನು ನಾವು ಬಲವಾಗಿ ನಂಬಿದ್ದೇವೆ. ಮಸಾಯ್ ಸ್ಕೂಲ್ ಬಗ್ಗೆ ಒಂದೇ ಮಾತಿನಲ್ಲಿ ಹೇಳುವುದಾದರೆ ಕೋಡಿಂಗ್ ಜತೆಗೆ ಮಿಲಿಟರಿ ಶಿಸ್ತು ಹೊಂದಿರುವ ಶಾಲೆ ಎಂದು ಹೇಳಬಹುದು" ಎನ್ನುತ್ತಾರೆ.
-
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Karnataka Rains: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
RCB: ಆರ್ಸಿಬಿ ಜೆರ್ಸಿ ಧರಿಸಿದವರಿಗೆ ಉಚಿತ ಪ್ರಯಾಣ; ಬೆಂಗಳೂರು ಆಟೋ ಚಾಲಕನ 'ಆಫರ್' ಪೋಸ್ಟರ್ ವೈರಲ್












Click it and Unblock the Notifications