ಹೊಸ ವರ್ಷದಲ್ಲಿ ಬಹುತೇಕ ಟೆಲಿಕಾಂ ಕಂಪನಿಯ ಪ್ಲ್ಯಾನ್‌ಗಳು ಶೇ 20ರಷ್ಟು ದುಬಾರಿ!
ನವದೆಹಲಿ, ಡಿಸೆಂಬರ್ 15: ಹೊಸ ವರ್ಷ ಬರುವ ಮೊದಲು ನೀವು ರೀಚಾರ್ಚ್ ಮಾಡಿದ್ರೆ ಉತ್ತಮ, ಏಕೆಂದರೆ ಶೀಘ್ರದಲ್ಲಿ ಯೋಜನೆಗಳ ದರಗಳು ಹೆಚ್ಚಾಗಲಿದೆ. 2021 ರಲ್ಲಿ ವಿವಿಧ ಟೆಲಿಕಾಂ ಕಂಪನಿಗಳ ಯೋಜನೆಗಳು ಶೇಕಡಾ 20ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಡಿಸೆಂಬರ್ 31 ರೊಳಗೆ ಎಲ್ಲಾ ಕಂಪನಿಗಳು ತಮ್ಮ ಹೊಸ ದರದ ಯೋಜನೆಯನ್ನು ಪ್ರಕಟಿಸಲಿವೆ ಎಂದು ಹೇಳಲಾಗುತ್ತಿದೆ. ಏಕೆಂದರೆ 2019 ರ ಡಿಸೆಂಬರ್‌ನಲ್ಲಿ ರಿಲಯನ್ಸ್ ಜಿಯೋ, ವೊಡಾಫೋನ್ ಐಡಿಯಾ ಮತ್ತು ಏರ್‌ಟೆಲ್ ತಮ್ಮ ಯೋಜನೆಗಳ ದರವನ್ನು ಹೆಚ್ಚಿಸಿದ್ದವು ಎಂಬುದನ್ನು ನೆನಪಿಸಿಕೊಳ್ಳಬೇಕಾಗುತ್ತದೆ. ಅದರ ಹೊರತಾಗಿಯೂ ಪ್ರಸ್ತುತ ಇರುವ ಯೋಜನೆಗಳ ಬೆಲೆ ಸಮಂಜಸವಾಗಿಲ್ಲ ಎಂದು ಟೆಲಿಕಾಂ ಕಂಪನಿಗಳು ಟ್ರಾಯ್‌ಗೆ ದೂರಿವೆ. ಇದರಿಂದಾಗಿ ಕಂಪನಿಗೆ ನಷ್ಟವಾಗುತ್ತಿದೆ ಎಂದು ಹೇಳಿವೆ.
ವೊಡಾಫೋನ್ ಐಡಿಯಾ ಈಗಾಗಲೇ ತನ್ನ ಎರಡು ಪೋಸ್ಟ್ ಯೋಜನೆಗಳ ಬೆಲೆಯನ್ನು 50 ರೂ. ಹೆಚ್ಚಿಸಿದೆ. ವೊಡಾಫೋನ್ ಐಡಿಯಾದ 598 ರೂ.ಗಳ ಪೋಸ್ಟ್‌ಪೇಯ್ಡ್ ಯೋಜನೆ ಈಗ 649 ರೂಗಳಾಗಿದ್ದರೆ, 749 ರೂ.ಗಳ ಯೋಜನೆಯ ಬೆಲೆಯನ್ನು ಈಗ 799 ರೂ.ಗೆ ಹೆಚ್ಚಿಸಲಾಗಿದೆ.

ಇತರೆ ಟೆಲಿಕಾಂ ಕಂಪನಿಗಳು ಸಹ ಟ್ರಾಯ್ ಅನುಮತಿಸಿದರೆ ಯೋಜನೆಯ ಕನಿಷ್ಠ ಬೆಲೆಯನ್ನು ನಿಗದಿಪಡಿಸಲಾಗುತ್ತದೆ. ಅದರ ನಂತರ ಯಾವುದೇ ಕಂಪನಿಯ ಯೋಜನೆ ಆ ನಿಗದಿತ ಬೆಲೆಗಿಂತ ಕಡಿಮೆಯಾಗುವುದಿಲ್ಲ.
ವರದಿಯ ಪ್ರಕಾರ, ಟೆಲಿಕಾಂ ಕಂಪನಿಗಳ ಹೊಸ ಯೋಜನೆಗಳು ಹೊಸ ವರ್ಷದಲ್ಲಿ ಶೇ. 15 ರಿಂದ 20 ರಷ್ಟು ಹೆಚ್ಚಾಗಬಹುದು. ಅಂದರೆ, ಒಂದು ಯೋಜನೆ 100 ರೂಪಾಯಿಗಳಾಗಿದ್ದರೆ, ಅದಕ್ಕಾಗಿ ನೀವು 115 ಅಥವಾ 120 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.












Click it and Unblock the Notifications