ಚೀನಾದ 59 App ಬ್ಯಾನ್ ಓಕೆ! PUBG ನಿಷೇಧವಾಗಿಲ್ಲ ಏಕೆ?

ಬೆಂಗಳೂರು, ಜೂನ್ 30: ಭಾರತಕ್ಕೆ ಕಾಲಿಟ್ಟ ದಿನದಿಂದಲೇ, ಈ ದೇಶಾದ್ಯಂತ ಬಿರುಗಾಳಿ ಎಬ್ಬಿಸಿ, ಫೇವರಿಟ್ ಟೈಂಪಾಸ್ ಗೇಮ್ ಎಂದೆನಿಸಿರುವ PUBG ಕೂಡಾ ನಿಷೇಧವಾಗಿದೆಯೆ? ನಿಷೇಧ ಮಾಡಿಲ್ಲವೇಕೆ? ಎಂಬುದು ಸದ್ಯದ ಟ್ರೆಂಡಿಂಗ್ ಪ್ರಶ್ನೆ.

Recommended Video

      Pubg isn't in the list of banned apps, why?| ಚೀನಾದ 59 App ಬ್ಯಾನ್ ಓಕೆ! PUBG ನಿಷೇಧವಾಗಿಲ್ಲ ಏಕೆ?

      ಜನಪ್ರಿಯ ವಿಡಿಯೋ ಹಂಚಿಕೆ ಅಪ್ಲಿಕೇಷನ್ ಟಿಕ್ ಟಾಕ್ ಸೇರಿದಂತೆ ಚೀನಾ ಮೂಲದ ಮೊಬೈಲ್ ಅಪ್ಲಿಕೇಷನ್ ಗಳ ಬಳಕೆ ನಿಷೇಧಿಸಿ ಭಾರತ ಸರ್ಕಾರ ಆದೇಶ ಹೊರಡಿಸಿರುವುದು ಗೊತ್ತಿರಬಹುದು. ಇದೇ ರೀತಿ ಚೀನಾ ಮೂಲದ ಪ್ಲೇಯರ್ ಅನ್‍ನೋನ್ ಬ್ಯಾಟಲ್‍ಗ್ರೌಂಡ್ (ಪಬ್‍ಜಿ) ವಿಶ್ವದಲ್ಲೇ ಅತಿ ಹೆಚ್ಚು ಇನ್‍ಸ್ಟಾಲ್ ಆದ ಮೊಬೈಲ್ ಗೇಮ್ ಎಂಬ ಖ್ಯಾತಿಗೆ ಪಾತ್ರವಾಗಿದೆ.

      ಈಗ ಭಾರತದ ಯುವ ಪೀಳಿಗೆಗೆ ಹುಚ್ಚು ಹಿಡಿಸಿರುವ ಅಪ್ಲಿಕೇಷನ್ ಪೈಕಿ ಟಿಕ್ ಟಾಕ್ ಬ್ಯಾನ್ ಆಗಿದೆ. ಆದರೆ, ಪಬ್ಜಿ ಗೇಮ್ ಇನ್ನೂ ಜೀವಂತವಿದೆ. ಭಾರತ ಸರ್ಕಾರ ಇನ್ನೂ PUBG Call of Duty ಮೇಲೆ ನಿಷೇಧ ಹೇರಿಲ್ಲ. ಆಂಡ್ರಾಯ್ಡ್, ಐಒಎಸ್ ಗಳಲ್ಲಿ ಲಭ್ಯವಿದೆ. ಗೂಗಲ್ ಪ್ಲೇಸ್ಟೋರಿನಿಂದ ಡೌನ್ಲೋಡ್ ಕೂಡಾ ಮಾಡಿಕೊಳ್ಳಬಹುದು.

      ಚೀನಾ ಮೂಲದ ಆಪ್ ಅಲ್ಲ!

      ಚೀನಾ ಮೂಲದ ಆಪ್ ಅಲ್ಲ!

      ಆದರೆ, ಪಬ್ಜಿ ಮೂಲತಃ ಚೀನಾದಲ್ಲಿ ತಯಾರಾದ ಅಪ್ಲಿಕೇಷನ್ ಅಲ್ಲ, ಜಪಾನ್ ಸಿನಿಮಾ ಬ್ಯಾಟಲ್ ರಾಯಲ್ ನಿಂದ ಸ್ಫೂರ್ತಿ ಪಡೆದು ಬ್ರೆಂಡನ್ ಎಂಬಾತ ದಕ್ಷಿಣ ಕೊರಿಯಾದ ಬ್ಲೂಹೋಲ್ ಕಂಪನಿಗಾಗಿ ನಿರ್ಮಿಸಿದ ವಿಡಿಯೋ ಗೇಮ್ ಇದಾಗಿದೆ. ನಂತರ ಚೀನಾದ ಟೆನ್ಸೆಂಟ್ ಕಂಪನಿ ಈ ಜನಪ್ರಿಯ ಗೇಮ್ ನಲ್ಲಿ ಹೂಡಿಕೆ ಮಾಡಿ, ಎಲ್ಲೆಡೆ ಪಬ್ಲಿಷ್, ಪ್ರಚಾರ ಮಾಡಿದೆ

      ಟೆನ್ಸೆಂಟ್ ಅವರ ಪಬ್‍ಜಿ ಮೊಬೈಲ್

      ಟೆನ್ಸೆಂಟ್ ಅವರ ಪಬ್‍ಜಿ ಮೊಬೈಲ್

      ಟೆನ್ಸೆಂಟ್ ಅವರ ಪಬ್‍ಜಿ ಮೊಬೈಲ್ ಭಾರತದಲ್ಲಷ್ಟೇ ಅಲ್ಲ, ಯುಎಸ್ ಗೇಮಿಂಗ್ ಮಾರುಕಟ್ಟೆಯಲ್ಲೂ ತನ್ನ ಪ್ರಾಬಲ್ಯ ಹೊಂದಿದೆ. ಗೂಗಲ್ ಪ್ಲೇ ಇಂಡಿಯಾವು ಪಬ್‍ಜಿ ಮೊಬೈಲ್‍ಗೆ ಬೆಸ್ಟ್ ಗೇಮ್ ಆಫ್ ದಿ ಇಯರ್ ಎಂದು ಕಳೆದೆರಡು ವರ್ಷಗಳಿಂದ ನೀಡಿದೆ. ಪಬ್‍ಜಿಯನ್ನು ಗ್ರಾಹಕರು ಸ್ನ್ಯಾಪ್‍ಚಾಟ್, ಯೂಟ್ಯೂಬ್, ನೆಟ್‍ಫ್ಲಿಕ್ಸ್ ಮತ್ತು ಸ್ಪೋಟಿಫೈಗಿಂತಲೂ ಹೆಚ್ಚು ಬಾರಿ ಡೌನ್‍ಲೋಡ್ ಮಾಡಿದ್ದಾರೆ.

      ಚೀನಾ ಮೂಲದ ಕಂಪನಿಗಳ ಅಪ್ಲಿಕೇಷನ್ ಬಳಕೆ

      ಚೀನಾ ಮೂಲದ ಕಂಪನಿಗಳ ಅಪ್ಲಿಕೇಷನ್ ಬಳಕೆ

      ಭಾರತ ಹಾಗೂ ಚೀನಾ ನಡುವಿನ ಗಡಿ ಸಂಘರ್ಷದ ಪರಿಣಾಮದಿಂದ ಚೀನಾ ದೇಶ ಮೂಲದ ಅನೇಕ ಸ್ಮಾರ್ಟ್ ಫೋನ್ ಹಾಗೂ ಮೊಬೈಲ್ ಅಪ್ಲಿಕೇಷನ್ ಗಳನ್ನು ನಿಷೇಧಿಸುವ ಪ್ರಕ್ರಿಯೆ ಮುಂದುವರೆದಿದೆ. ಈ ಕುರಿತಂತೆ ಸಾರ್ವಜನಿಕ ವಲಯದಲ್ಲಿ ಸ್ವಯಂಪ್ರೇರಿತರಾಗಿ ಆಪ್ ಡಿಲೀಟ್ ಆಗುತ್ತಿದೆ. ಇನ್ನೊಂದೆಡೆ ಗುಪ್ತಚರ ಇಲಾಖೆಯಿಂದ ಚೀನಾ ಮೂಲದ ಕಂಪನಿಗಳ ಅಪ್ಲಿಕೇಷನ್ ಬಳಕೆ ಬಗ್ಗೆ ಎಚ್ಚರಿಕೆ ಸಂದೇಶ ನೀಡಲಾಗಿದೆ.

      ಬಹು ಜನಪ್ರಿಯ ಆಪ್ ಗಳಾದ ಟಿಕ್ ಟಾಕ್

      ಬಹು ಜನಪ್ರಿಯ ಆಪ್ ಗಳಾದ ಟಿಕ್ ಟಾಕ್

      ಬಹು ಜನಪ್ರಿಯ ಆಪ್ ಗಳಾದ ಟಿಕ್ ಟಾಕ್, ಜೂಮ್, ಶೇರ್ ಇಟ್, ಯುಸಿ ಬ್ರೌಸರ್, ಕ್ಸೆಂಡರ್ ಹಾಗೂ ಕ್ಲೀನ್ ಮಾಸ್ಟರ್ ಕೂಡಾ ಇವೆ. ಈ ಆಪ್ ಗಳಲ್ಲಿ ಸ್ಪೈವೇರ್ ತುಂಬಿ ದೇಶದ ಭದ್ರತೆಗೆ ಧಕ್ಕೆ ಉಂಟು ಮಾಡುವ ಸಾಧ್ಯತೆ ಬಗ್ಗೆ ಏಜೆನ್ಸಿ ಹೇಳಿದೆ. ಏಪ್ರಿಲ್ ತಿಂಗಳಿನಲ್ಲಿ ಜೂಮ್ ವಿಡಿಯೋ ಕಾನ್ಫರೆನ್ಸ್ ಆಪ್ ಭದ್ರತೆ ಬಗ್ಗೆ ಅಪಸ್ವರ ಕೇಳಿ ಬಂದಾಗ, ಈ ಕುರಿತಂತೆ ಗೃಹ ಸಚಿವಾಲಯವು ಮಾರ್ಗಸೂಚಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ನಂತರ ಮಾರ್ಗಸೂಚಿಯಂತೆ ಜೂಮ್ ಆಪ್ ಕೂಡಾ ಸುರಕ್ಷತೆ ಹೆಚ್ಚಿಸಿ ಹೊಸ ಆವೃತ್ತಿ ಬಿಡುಗಡೆ ಮಾಡಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+