ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶಿಯ ವಿದ್ಯುತ್ ಕಾರು ತಯಾರಿಗೆ ಒಂದಾದ ದಿಗ್ಗಜರು

|
Google Oneindia Kannada News

ಮುಂಬೈ, ಫೆಬ್ರವರಿ, 09: ನರೇಂದ್ರ ಮೋದಿಯವರ ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ದೇಶದೆಲ್ಲೆಡೆ ಬೆಂಬಲ ಸಿಗುತ್ತಿದ್ದು ಇದೀಗ ಸ್ವದೇಶಿ ಕಾರು ತಯಾರಿಕಾ ಕಂಪನಿಗಳು ಹೊಸದೊಂದು ಕ್ರಾಂತಿ ಮಾಡಲು ಸಿದ್ಧವಾಗಿವೆ.

ಸಂಪೂರ್ಣ ದೇಶಿಯ ನಿರ್ಮಿತ ಎಲೆಕ್ಟ್ರಿಕ್ ಹೈಬ್ರಿಡ್ ಕಾರು ತಯಾರಿಸಲು ಸ್ವದೇಶಿ ಕಂಪನಿಗಳಾದ ಮಾರುತಿ ಸುಝುಕಿ, ಟಾಟಾ ಮೋಟಾರ್ಸ್ , ಮಹೀಂದ್ರಾ ಅಂಡ್ ಮಹೀಂದ್ರಾ ಪರಸ್ಪರ ಒಪ್ಪಂದ ಮಾಡಿಕೊಂಡಿವೆ. ಎಲ್ಲವೂ ಅಂದುಕೊಂಡಂತೆ ಆದರೆ ಅತಿ ಶೀಘ್ರದಲ್ಲೇ ದೇಶೀಯ ವಿದ್ಯುತ್ ಕಾರುಗಳು ಭಾರತದ ರಸ್ತೆಗಳಲ್ಲಿ ಸಂಚರಿಸಲಿವೆ.[ಟಾಟಾಗೆ ಹೊಸ ಆಶಾಕಿರಣವಾದ 'ನೆಕ್ಸನ್' ಮಿನಿ]

Indian Carmakers To Launch Hybrid And Electric Cars

ಕಾರು ತಯಾರಿಕಾ ಕಂಪನಿಗಳ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗ ಮಾತುಕತೆಯನ್ನು ಮುಗಿಸಿದ್ದು ಆರಂಭಿಕ ಒಪ್ಪಿಗೆ ನೀಡಿದೆ. ಮೋಟಾರು ಇಂಜಿನ್ ಸಂಶೋಧನೆ ಮೇಲೆ ವಿಶೇಷ ಗಮನ ನೀಡಲಾಗುತ್ತಿದೆ. [ಸಂಗೀತದ ತಾಳಗತಿಯಂತೆ ಷೆವರ್ಲೆ ಬೀಟ್ ಆಕ್ಟಿವ್ ಸ್ಪಂದನ]

ಸಂಶೋಧನೆಗೆ 25 ಕೋಟಿ ರು.
ಭಾರತದ ಪ್ರಮುಖ ಮೂರು ಕಂಪನಿಗಳು ವಿದ್ಯುತ್ ಕಾರಿಗೆ ಸಂಬಂಧಿಸಿದ ಸಂಶೋಧನೆಗೆ 25 ಕೋಟಿ ರೂ. ಮೊತ್ತ ತೆಗೆದಿರಿಸಿವೆ. ಘಮ್ ಹೆಸರಿನ ಹೈಬ್ರಿಡ್ ಎಲೆಕ್ಟ್ರಿಕ್ ಕಾರು ತಯಾರಿಕಾ ಯೋಜನೆಗೆ ಕೇಂದ್ರ ಸರ್ಕಾರ ಸಹ ಹಣಕಾಸು ನೆರವು ನೀಡಲಿದೆ ಎಂದು ಮಹಿಂದ್ರಾ ರೇವಾದ ಮುಖ್ಯ ಕಾರ್ಯನಿರ್ವಾಹಕ ಅರವಿಂದ್ ಮಾಥ್ಯೂ ತಿಳಿಸಿದ್ದಾರೆ.

English summary
Mumbai: Carmakers are gearing up to launch affordable hybrid and electric cars for India in the Next few years. Tata Motors, Mahindra & Mahindra and Maruti Suzuki join hands with Make in India Campaign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X