ಭಾರತದಲ್ಲಿ ನ್ಯೂಸ್, ಫೈನ್ಯಾನ್ಸ್, ಕ್ರಿಕೆಟ್ ವೆಬ್ ಸೈಟ್ ಸ್ಥಗಿತಗೊಳಿಸಿದ Yahoo!
ನವದೆಹಲಿ, ಆಗಸ್ಟ್ 26: ಭಾರತದಲ್ಲಿ ಡಿಜಿಟಲ್ ವಿಷಯಗಳ ನಿರ್ವಹಿಸುವ ಮತ್ತು ಪ್ರಕಟಿಸುವ ಮಾಧ್ಯಮ ಕಂಪನಿಗಳ ವಿದೇಶಿ ಮಾಲೀಕತ್ವವನ್ನು ಸೀಮಿತಗೊಳಿಸುವ ಹೊಸ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನಿಯಮಗಳ ಕಾರಣದಿಂದಾಗಿ ಯುಎಸ್ ಮೂಲದ ಟೆಕ್ ದೈತ್ಯ ಯಾಹೂ ತನ್ನ ಸುದ್ದಿ ವೆಬ್‌ಸೈಟ್‌ಗಳನ್ನು ಸ್ಥಗಿತಗೊಳಿಸಿದೆ.
ದೇಶದಲ್ಲಿ ಯಾಹೂ ನ್ಯೂಸ್, ಯಾಹೂ ಕ್ರಿಕೆಟ್, ಹಣಕಾಸು, ಮನರಂಜನೆ ಮತ್ತು ಮೇಕರ್ಸ್ ಇಂಡಿಯಾ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿವೆ. ಆದಾಗ್ಯೂ, ಭಾರತದಲ್ಲಿ ಯಾಹೂ ಇ -ಮೇಲ್ ಬಳಕೆದಾರರು ಮತ್ತು ಸರ್ಚಿಂಗ್ ವಿಷಯದಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕಂಪನಿ ತಿಳಿಸಿದೆ.
"2021ರ ಆಗಸ್ಟ್ 26ರಿಂದ ಯಾಹೂ ಇಂಡಿಯಾ ಯಾವುದೇ ಸುದ್ದಿ ಮತ್ತು ವಿಷಯಗಳನ್ನು ಪ್ರಕಟಿಸುವುದಿಲ್ಲ. ನಿಮ್ಮ ಯಾಹೂ ಖಾತೆ, ಇ-ಮೇಲ್ ಮತ್ತು ಸರ್ಚಿಂಗ್ ಆಪ್ಷನ್ ಎಂದಿನಂತೆ ಕಾರ್ಯನಿರ್ವಹಿಸಲಿದ್ದು, ಯಾವುದೇರೀತಿ ವ್ಯತ್ಯಾಸ ಆಗುವುದಿಲ್ಲ. ನಿಮ್ಮ ಬೆಂಬಲ ಮತ್ತು ಓದುಗರಿಗೆ ಧನ್ಯವಾದಗಳು," ಎಂದು ಯಾಹೂ ವೆಬ್‌ಸೈಟ್‌ನಲ್ಲಿ ಪ್ರಕಟಣೆಯಲ್ಲಿ ತಿಳಿಸಿದೆ. ಯುಎಸ್ ಟೆಕ್ ಪ್ರಮುಖ ವೆರಿಝೋನ್ 2017 ರಲ್ಲಿ ಯಾಹೂವನ್ನು ಸ್ವಾಧೀನಪಡಿಸಿಕೊಂಡಿತ್ತು.

ಭಾರತದಲ್ಲಿ ಯಾಹೂ ಸುದ್ದಿ ಪ್ರಕಟಣೆ ಸ್ಥಗಿತ:
ಆಗಸ್ಟ್ 26, 2021 ರಿಂದ ಭಾರತದಲ್ಲಿ ಯಾಹೂ ಕಂಪನಿಯು ವಿಷಯ ಪ್ರಕಟಣೆಯನ್ನು ನಿಲ್ಲಿಸಲಿದ್ದು, ಯಾಹೂ ಸುದ್ದಿಗಳ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದೆ ಎಂದು ಹೇಳಿದೆ. "ನಾವು ಈ ನಿರ್ಧಾರಕ್ಕೆ ಬರುವುದು ಸುಲಭವಾಗಿರಲಿಲ್ಲ. ಆದಾಗ್ಯೂ, ಭಾರತದಲ್ಲಿ ಡಿಜಿಟಲ್ ವಿಷಯವನ್ನು ನಿರ್ವಹಿಸುವ ಮತ್ತು ಪ್ರಕಟಿಸುವ ಮಾಧ್ಯಮ ಕಂಪನಿಗಳ ವಿದೇಶಿ ಮಾಲೀಕತ್ವವನ್ನು ಸೀಮಿತಗೊಳಿಸುವ ನಿಯಂತ್ರಕ ಕಾನೂನುಗಳಲ್ಲಿನ ಬದಲಾವಣೆಗಳಿಂದ ಯಾಹೂ ಇಂಡಿಯಾ ಪ್ರಭಾವಿತವಾಗಿದೆ. ಯಾಹೂ ಭಾರತದೊಂದಿಗೆ ಸುದೀರ್ಘ ಒಡನಾಟ ಹೊಂದಿದೆ. ಕಳೆದ 20 ವರ್ಷಗಳಿಂದ ಇಲ್ಲಿನ ನಮ್ಮ ಬಳಕೆದಾರರಿಗೆ ಒದಗಿಸಿದ ಪ್ರೀಮಿಯಂ, ಸ್ಥಳೀಯ ವಿಷಯದ ಬಗ್ಗೆ ನಮಗೆ ನಿಜಕ್ಕೂ ಹೆಮ್ಮೆ ಇದೆ "ಎಂದು ಕಂಪನಿ ಹೇಳಿದೆ.
ಭಾರತೀಯರ ಬೆಂಬಲಕ್ಕೆ ಯಾಹೂ ಧನ್ಯವಾದ:
ಯಾಹೂ ಕ್ರಿಕೆಟ್ ಒಂದು 'ನ್ಯೂಸ್' ಘಟಕವನ್ನು ಹೊಂದಿದೆ. ಸುದ್ದಿಗಳು, ವಿಷಯಗಳು ಮತ್ತು ಪ್ರಸ್ತುತ ವಿದ್ಯಮಾನಗಳಲ್ಲಿ ಮಾಧ್ಯಮ ಕಂಪನಿಗಳ ವಿದೇಶಿ ಮಾಲೀಕತ್ವವನ್ನು ಮಿತಿಗೊಳಿಸುತ್ತಿರುವುದರಿಂದ ನಾವು ಪ್ರಭಾವಿತರಾಗಿದ್ದೇವೆ. ಕಳೆದ ಎರಡು ದಶಕಗಳಲ್ಲಿ ಭಾರತೀಯರು ನೀಡಿದ ಬೆಂಬಲ ಮತ್ತು ವಿಶ್ವಾಸಕ್ಕಾಗಿ ಧನ್ಯವಾದಗಳು. ಆದ್ದರಿಂದ ಇಲ್ಲಿನ ಬಳಕೆದಾರರಿಗೆ ನಮ್ಮನ್ನು ಸಂಪರ್ಕಿಸುವ ಅವಕಾಶಗಳು ಮುಕ್ತವಾಗಿದೆ" ಎಂದು ಕಂಪನಿ ಹೇಳಿದೆ.
ಯಾಹೂ ಮೇಲ್ ಬಳಕೆದಾರರಿಗೆ ಸಮಸ್ಯೆಯಿಲ್ಲ:
"ನೀವು ಯಾಹೂ ಮೇಲ್ ಬಳಕೆದಾರರಾಗಿದ್ದರೆ, ಈ ಬದಲಾವಣೆಯು ನಿಮ್ಮ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಬೆಳವಣಿಗೆಯು ನಮ್ಮ ಉತ್ಪನ್ನಗಳಾದ ಯಾಹೂ ಮೇಲ್ ಮತ್ತು ಯಾಹೂ ಸರ್ಚ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಅಲ್ಲಿ ನಾವು ಯಾವುದೇ ಬದಲಾವಣೆ ಇಲ್ಲದೆ ಭಾರತದ ಬಳಕೆದಾರರ ಸೇವೆಯನ್ನು ಮೊದಲಿನಂತೆ ಮುಂದುವರಿಸುತ್ತೇವೆ ಎಂದು ಯಾಹೂ ಕಂಪನಿ ಹೇಳಿದೆ.
ಹೊಸ ವಿದೇಶಿ ಬಂಡವಾಳ ಹೂಡಿಕೆ ನೀತಿ:
ಮುಂದಿನ ಅಕ್ಟೋಬರ್‌ನಲ್ಲಿ ಜಾರಿಗೆ ಬರುವ ಹೊಸ ಎಫ್‌ಡಿಐ ನಿಯಮಾವಳಿಗಳ ಪ್ರಕಾರ, ಭಾರತದಲ್ಲಿ ಡಿಜಿಟಲ್ ಮಾಧ್ಯಮ ಕಂಪನಿಗಳು ವಿದೇಶಿ ಹೂಡಿಕೆಯ ರೂಪದಲ್ಲಿ ಶೇಕಡಾ 26 ರಷ್ಟು ಹೂಡಿಕೆಯನ್ನು ಸ್ವೀಕರಿಸಬಹುದು. ಅದು ಕೇಂದ್ರ ಸರ್ಕಾರದ ಅನುಮೋದನೆಗೆ ಒಳಪಟ್ಟಿರುತ್ತದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications