ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಅಲುಗಾಡಿಸುತ್ತದಾ ಇ-ರುಪೀ? ಆರ್‌ಬಿಐ ಹೇಳುವುದೇನು?

|
Google Oneindia Kannada News

ನವದೆಹಲಿ, ಅ. 9: ಬಿಟ್ ಕಾಯಿನ್ ಇತ್ಯಾದಿ ಕ್ರಿಪ್ಟೋಕರೆನ್ಸಿಗಳ ಬಲೂನು ದೊಡ್ಡದಾಗುತ್ತಿದ್ದ ಸಂದರ್ಭದಲ್ಲಿ ಕೇಂದ್ರ ಹಣಕಾಸು ಸಚಿವೆ ಭಾರತದಿಂದಲೇ ಪ್ರತ್ಯೇಕ ಡಿಜಿಟಲ್ ಕರೆನ್ಸಿ ತರಲಾಗುವ ಬಗ್ಗೆ ಮಾತನಾಡಿದ್ದರು. ಅದೀಗ ಸಾಕಾರಗೊಳ್ಳುವ ಪ್ರಕ್ರಿಯೆಗಳು ಆರಂಭವಾಗಲಿವೆ.

ಡಿಜಿಟಲ್ ರುಪೀ ಆಗಮನದಿಂದ ಭಾರತದಲ್ಲಿ ಡಿಜಿಟಲ್ ಪೇಮೆಂಟ್ಸ್ ವ್ಯವಸ್ಥೆಯ ಭವಿಷ್ಯ ಏನಾಗಬಹುದು ಎಂಬ ಅನುಮಾನಕ್ಕೆ ಆರ್‌ಬಿಐ ತೆರೆ ಎಳೆಯುವ ಪ್ರಯತ್ನ ಮಾಡಿದೆ. ಈಗಿರುವ ಡಿಜಿಟಲ್ ಪಾವತಿ ವ್ಯವಸ್ಥೆಗೆ ಪೂರಕವಾಗಿ ಇ-ರುಪೀ ಇರುತ್ತದೆಯೇ ಹೊರತು ಹೊಸ ವ್ಯವಸ್ಥೆಗೆ ಎಡೆ ಮಾಡಿಕೊಡುವುದಿಲ್ಲ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.

ವಿಪ್ರೋ, ಇನ್ಫೋಸಿಸ್ ಬಳಿಕ ಅಕ್ಸೆಂಚರ್‌ನಿಂದ ಫ್ರೆಶರ್‌ಗಳ ಆಫರ್‌ ಲೆಟರ್‌ ರದ್ದುವಿಪ್ರೋ, ಇನ್ಫೋಸಿಸ್ ಬಳಿಕ ಅಕ್ಸೆಂಚರ್‌ನಿಂದ ಫ್ರೆಶರ್‌ಗಳ ಆಫರ್‌ ಲೆಟರ್‌ ರದ್ದು

ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ) ಅನ್ನು ಆರಂಭಿಸುವ ಪ್ರಾಯೋಗಿಕ ಹಂತದ ಯೋಜನೆಗಳನ್ನು ಅಂತಿಮಗೊಳಿಸಲಾಗುತ್ತಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಈ ಸಂದರ್ಭದಲ್ಲಿ ಹೇಳಿದೆ.

Indias Digital Currency CBDC Will Complement Existing Payment System, Says RBI

ಡಿಜಿಟಲ್ ರೂಪಾಯಿಯಿಂದ ಭಾರತೀಯ ಆರ್ಥಿಕತೆಗೆ ಸಹಾಯಕವಾಗುತ್ತದೆ. ಭೌತಿಕ ನಗದು ನಿರ್ವಹಣೆಯ ವೆಚ್ಚವನ್ನು ಕಡಿಮೆಗೊಳಿಸಬಹುದು. ಪೇಮೆಂಟ್ ಸೆಟಲ್ಮೆಂಟ್ ಮತ್ತು ಅಂತಾರಾಷ್ಟ್ರೀಯ ಪೇಮೆಂಟ್ ವ್ಯವಸ್ಥೆಯನ್ನು ಸುಲಭಗೊಳಿಸುತ್ತದೆ ಎಂದು ಆರ್‌ಬಿಐ ಹೇಳಿದೆ.

ಆರ್ಥಿಕ ಹಿಂಜರಿತದ ಅಪಾಯ: ಐಎಂಎಫ್ ನೀಡಿದ ಎಚ್ಚರಿಕೆಆರ್ಥಿಕ ಹಿಂಜರಿತದ ಅಪಾಯ: ಐಎಂಎಫ್ ನೀಡಿದ ಎಚ್ಚರಿಕೆ

ಮಾಮೂಲಿಯ ಬ್ಯಾಂಕ್ ನೋಟ್‌ಗಳಂತೆಯೇ ಡಿಜಿಟಲ್ ರೂಪಾಯಿ ಇದ್ದರೂ ಬಹಳ ಬೇಗವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ವಹಿವಾಟಾಗುವಂತೆ ರೂಪಿಸಲಾಗುತ್ತಿದೆ. ಬ್ಯಾಂಕ್ ಠೇವಣಿಗಳಿಗೆ ಪರ್ಯಾಯವಾಗಿ ಸಿಬಿಡಿಸಿ ಸುರಕ್ಷಿತ ವ್ಯವಸ್ಥೆಯಾಗಿರಲಿದೆ ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ.

ಖಾಸಗಿ ಕ್ರಿಪ್ಟೋಕರೆನ್ಸಿಗಿಂತ ಸುರಕ್ಷಿತ

"ಡಿಜಿಟಲ್ ಕರೆನ್ಸಿಯನ್ನು ಸುರಕ್ಷಿತ ವ್ಯವಸ್ಥೆಯಾಗಿ ರೂಪಿಸುವ ಜವಾಬ್ದಾರಿ ಆರ್‌ಬಿಐನ ಮೇಲಿದೆ. ಖಾಸಗಿ ಕ್ರಿಪ್ಟೋಕರೆನ್ಸಿಗಳಿಂದ ಒದಗುವಂಥ ಅಪಾಯಗಳಿಂದ ಹೊರತಾಗಿರುವಂತೆ ನೋಡಿಕೊಂಡು, ಕರೆನ್ಸಿಯನ್ನು ಡಿಜಿಟಲ್ ರೂಪದಲ್ಲಿ ನಿರ್ವಹಿಸುವ ವ್ಯವಸ್ಥೆ ರೂಪಿಸಬೇಕು" ಎಂದು ಭಾರತದ ಸೆಂಟ್ರಲ್ ಬ್ಯಾಂಕ್ ವಿವರಿಸಿದೆ.

Indias Digital Currency CBDC Will Complement Existing Payment System, Says RBI

ಆಫ್‌ಲೈನ್ ಫೀಚರ್

ಡಿಜಿಟಿಲ್ ಕರೆನ್ಸಿಯಾದ ಸಿಬಿಡಿಸಿಯಲ್ಲಿ ಆಫ್‌ಲೈನ್ ಫೀಚರ್ ಇದ್ದು, ಇದರಿಂದ ಇಂಟರ್ನೆಟ್ ಸಂಪರ್ಕದ ಮಿತಿ ಇರುವ ದೂರದ ಸ್ಥಳಲ್ಲಿ ಜನರು ನಿರಾತಂಕವಾಗಿ ಪೇಮೆಂಟ್ ಸೇವೆ ಮಾಡಲು ಸಾಧ್ಯವಾಗುತ್ತದೆ. ಹಾಗೆಯೇ, ದೇಶದ ಆರ್ಥಿಕತೆಯ ಹಣಕಾಸು ಸ್ಥಿರತೆ ಹಾಳಾಗದಂತೆ, ಖಾಸಗಿ ಕ್ರಿಪ್ಟೋಕರೆನ್ಸಿಯ ಪೂರ್ಣ ಪ್ರಯೋಜನಗಳನ್ನೂ ಸಿಗುವಂತೆ ಆಗಲು ಸಿಬಿಡಿಸಿ ಸಹಾಯಕವಾಗುತ್ತದೆ ಎಂಬುದು ಅರ್‌ಬಿಐನ ನಿರೀಕ್ಷೆ.

ಆದರೆ, ಡಿಜಿಟಲ್ ಕರೆನ್ಸಿಯಿಂದ ಹಣಕಾಸು ನೀತಿಯ ಮೇಲೆ ಎಂಥ ಪರಿಣಾಮ ಬೀರುತ್ತದೆ ಎಂಬುದು ಆರ್‌ಬಿಐನ ಅಂದಾಜಿಗೆ ಇನ್ನೂ ನಿಲುಕಿಲ್ಲ. ಹಾಗೆಯೇ, ಇ-ರುಪೀ ಅನ್ನು ಯಾವ ಕ್ರಿಪ್ಟೋ ತಂತ್ರಜ್ಞಾನದಲ್ಲಿ ಚಾಲನೆಗೆ ತರಬೇಕೆಂಬ ಗೊಂದಲ ಇನ್ನೂ ದೂರವಾಗಿಲ್ಲ. ಸಿಬಿಡಿಸಿ ಕರೆನ್ಸಿಗೆ ಕೇಂದ್ರೀಯವಾಗಿ ನಿಯಂತ್ರಣ ಮಾಡುವ ಡಾಟಾಬೇಸ್‌ನ ತಂತ್ರಜ್ಞಾನವೋ ಅಥವಾ ಡಿಸ್ಟ್ರಿಬ್ಯೂಟೆಡ್ ಲೆಡ್ಜರ್ ತಂತ್ರಜ್ಞಾನವೋ ಎಂಬುದು ನಿರ್ಧಾರವಾಗಬೇಕು. ಹೆಚ್ಚು ಸುರಕ್ಷಿತವೆನಿಸುವ ತಂತ್ರಜ್ಞಾನವನ್ನು ಆರ್‌ಬಿಐ ಆಯ್ದುಕೊಳ್ಳುವ ನಿರೀಕ್ಷೆ ಇದೆ.

(ಒನ್ಇಂಡಿಯಾ ಸುದ್ದಿ)

English summary
RBI has clarified that its new proposed digital currency will not replace existing digital payment system. Instead, it complement the existing one.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X