ಎಂಫಸಿಸ್ ಸಂಸ್ಥೆಗೆ 25, ಮೈ ಸ್ಟಾಂಪ್ ಬಿಡುಗಡೆ

Posted By:
Subscribe to Oneindia Kannada

ದೇಶದ ಪ್ರಮುಖ ಮಾಹಿತಿ ತಂತ್ರಜ್ಞಾನ ಸೇವೆಗಳು ಮತ್ತು ಪರಿಹಾರ ಪೂರೈಕೆದಾರ ಸಂಸ್ಥೆಯಾಗಿರುವ ಎಂಫಸಿಸ್ ಗೆ ಈಗ 25 ರ ಸಂಭ್ರಮ. ಈ ಶುಭ ಸಂದರ್ಭವನ್ನು ಅರ್ಥಪೂರ್ಣವಾಗಿ ಆಚರಿಸುವ ಹಿನ್ನೆಲೆಯಲ್ಲಿ ಭಾರತೀಯ ಅಂಚೆ ಎಂಫಸಿಸ್ ರಜತಮಹೋತ್ಸವದ ವಿಶೇಷ ಅಂಚೆ ಚೀಟಿ ಮೈ ಸ್ಟಾಂಪ್' ಅನ್ನು ಬೆಂಗಳೂರಿನ ಪ್ರಧಾನ ಅಂಚೆ ಕಚೇರಿಯಲ್ಲಿ ಬಿಡುಗಡೆ ಮಾಡಿದೆ.

ಕೇಂದ್ರ ಸರ್ಕಾರದ ಕಾನೂನು ಮತ್ತು ನ್ಯಾಯದಾನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ರಾಜ್ಯ ಸಚಿವ ಪಿ.ಪಿ. ಚೌಧರಿ ಮತ್ತು ಅಂಚೆ ಇಲಾಖೆಯ ದಕ್ಷಿಣ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಎಸ್.ರಾಜೇಂದ್ರ ಕುಮಾರ್ ಅವರು ಈ ಅವಿಸ್ಮರಣೀಯವಾದ ಅಂಚೆಚೀಟಿಯನ್ನು ಬಿಡುಗಡೆ ಮಾಡಿದರು.[ಇಮೇಲ್ ಕಾಲದಲ್ಲೂ ಇನ್ ಲ್ಯಾಂಡ್ ಲೆಟರ್ ಗೆ ಬೇಡಿಕೆ]

ಈ ಮೂಲಕ ಭಾರತೀಯ ಅಂಚೆ ಇಲಾಖೆಯಿಂದ ಕಾರ್ಪೊರೇಟ್ 'ಮೈ ಸ್ಟಾಂಪ್' ಪಡೆದ ದೇಶದ ಮೊದಲ ಮಾಹಿತಿ ತಂತ್ರಜ್ಞಾನ ಕಂಪನಿ ಎಂಬ ಹೆಗ್ಗಳಿಕೆಗೆ ಎಂಫಸಿಸ್ ಪಾತ್ರವಾಯಿತು. ಈ ಸ್ಟಾಂಪ್ ಭಾರತೀಯ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಪ್ರಗತಿಯ ಸಂಕೇತವನ್ನು ಸೂಚಿಸುತ್ತಿದ್ದು, ವಿಶ್ವದ ಭೂಪಟದ ಹಿನ್ನೆಲೆಯಿರುವ ಈ ಸ್ಟಾಂಪ್‍ನಲ್ಲಿ ನಮ್ಮ ರಾಷ್ಟ್ರದ ತ್ರಿವರ್ಣ ಧ್ವಜ ರಾರಾಜಿಸುತ್ತಿದೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ನಮ್ಮ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪ್ರಗತಿಯನ್ನು ಬಿಂಬಿಸುತ್ತದೆ.

ಮೊದಲ ಮಾಹಿತಿ ತಂತ್ರಜ್ಞಾನ ಕಂಪನಿ

ಮೊದಲ ಮಾಹಿತಿ ತಂತ್ರಜ್ಞಾನ ಕಂಪನಿ

ಎಂಫಸಿಸ್ ಕಂಪನಿ ಜತೆ ಸೇರಿ ಎಂಫಸಿಸ್ ಕಾರ್ಪೊರೇಟ್ `ಮೈ ಸ್ಟಾಂಪ್' ಅನ್ನು ಹೊರ ತಂದಿರುವುದಕ್ಕೆ ನಮಗೆ ಸಂತಸವೆನಿಸುತ್ತಿದೆ. ಎಂಫಸಿಸ್ ಕಂಪನಿ 25 ಯಶಸ್ವಿ ವರ್ಷಗಳನ್ನು ಪೂರ್ಣಗೊಳಿಸುತ್ತಿರುವುದಕ್ಕೆ ಮತ್ತು `ಮೈ ಸ್ಟಾಂಪ್' ಪರಿಚಯಿಸುತ್ತಿರುವ ದೇಶದ ಮೊದಲ ಮಾಹಿತಿ ತಂತ್ರಜ್ಞಾನ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸರ್ವರಿಗೂ ಧನ್ಯವಾದ

ಸರ್ವರಿಗೂ ಧನ್ಯವಾದ

ನಮ್ಮ ಗ್ರಾಹಕರು ಮತ್ತು ಪ್ರತಿಭೆಗಳು ಒಟ್ಟಾಗಿ ತಂತ್ರಜ್ಞಾನ ಉದ್ಯಮದಲ್ಲಿ ಯಶಸ್ವಿಯಾಗಿ 25 ವರ್ಷ ಪೂರ್ಣಗೊಳಿಸುವಂತೆ ಮಾಡಿರುವುದರ ಜತೆಗೆ ಭವಿಷ್ಯದ ದಿನಗಳಲ್ಲಿ ಮತ್ತಷ್ಟು ಆತ್ಮವಿಶ್ವಾಸದಿಂದ ಹೆಜ್ಜೆ ಇಡಲು ನಾಂದಿ ಹಾಡಿವೆ. ಈ ನಮ್ಮ 25 ವರ್ಷಗಳನ್ನು ಯಶಸ್ಸುಗೊಳಿಸಿದ್ದಕ್ಕಾಗಿ ಸರ್ವರಿಗೂ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ.ಎಂದ ಎಂಫಸಿಸ್ ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಮತ್ತು ಕಾರ್ಯಕಾರಿ ನಿರ್ದೇಶಕರಾದ ಗಣೇಶ್ ಅಯ್ಯರ್

ಎಸ್.ರಾಜೇಂದ್ರ ಕುಮಾರ್

ಎಸ್.ರಾಜೇಂದ್ರ ಕುಮಾರ್

ಈ ಹಿನ್ನೆಲೆಯಲ್ಲಿ ಆ ಸಂಸ್ಥೆಯ ಪ್ರತಿಯೊಬ್ಬರಿಗೂ ನಾನು ಶುಭಾಶಯಗಳನ್ನು ಹೇಳಲು ಬಯಸುತ್ತೇನೆ. ಜಾಗತಿಕ ಮಟ್ಟದಲ್ಲಿ ಎಂಫಸಿಸ್ ಸಂಸ್ಥೆ ಸಾಕಷ್ಟು ಯಶಸ್ವಿ ಮೆಟ್ಟಿಲುಗಳನ್ನು ಹತ್ತಿದೆ ಮತ್ತು ಸಾಧನೆಗಳನ್ನೂ ಸಾಧಿಸಿದೆ. 25 ವರ್ಷಗಳನ್ನು ಪೂರ್ಣಗೊಳಿಸುತ್ತಿರುವ ಈ ಸಂಸ್ಥೆಯೊಂದಿಗೆ ಸೇರಿ ಅಂಚೆಚೀಟಿಯನ್ನು ಹೊರತರುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ'' ಎಂದು ದಕ್ಷಿಣ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಅಭಿಪ್ರಾಯಪಟ್ಟರು.

ಮುಂದಿನ 25 ವರ್ಷಗಳು ಭಿನ್ನ

ಮುಂದಿನ 25 ವರ್ಷಗಳು ಭಿನ್ನ

ಮುಂದಿನ 25 ವರ್ಷಗಳು ಭಿನ್ನವಾಗಿರಲಿದ್ದು, ಆ ದಿನಗಳು ಯಶಸ್ವಿಯಾಗಲು ನಮ್ಮ ಗ್ರಾಹಕರ ಹಾರೈಕೆ, ಪ್ರತಿಭೆಯ ಬದ್ಧತೆ ಮತ್ತು ಸರ್ಕಾರದ ಬೆಂಬಲ ನಮಗಿರುತ್ತದೆ ಎಂಬ ವಿಶ್ವಾಸ ನಮಗಿದೆ. ಈ ನಮ್ಮ ಯಶಸ್ವಿ ರಜತ ಮಹೋತ್ಸವದ ಸಂದರ್ಭದಲ್ಲಿ ಭಾರತೀಯ ಅಂಚೆ ಹೊರತಂದಿರುವ ಎಂಫಸಿಸ್ `ಮೈ ಸ್ಟಾಂಪ್' ಅನ್ನು ಪಡೆಯಲು ನಮಗೆ ಅತೀವ ಸಂತಸ ಎನಿಸಿದೆ'' ಎಂದು ಗಣೇಶ್ ಅಯ್ಯರ್ ತಿಳಿಸಿದರು. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ರಾಜ್ಯ ಸಚಿವ ಪಿ.ಪಿ. ಚೌಧರಿ ಉಪಸ್ಥಿತರಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
India Post unveiled Mphasis ‘My Stamp’, to commemorate Mphasis’ Silver Jubilee at an event held at the General Post Office in Bengaluru.Mphasis is the first Information Technology (IT) Company to receive a Corporate ‘My Stamp’ by India Post.
Please Wait while comments are loading...