ಭಾರತ ಶ್ರೀಮಂತರ ರಾಷ್ಟ್ರ, ಮುಖೇಶ್ ನಂ.1
ನವದೆಹಲಿ, ಮಾ.3: ರಿಲಯನ್ಸ್ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಅವರು ವಿಶ್ವದ 15ನೇ ಹಾಗೂ ಭಾರತದ ಅತಿ ಶ್ರೀಮಂತ ಎಂಬ ಹೆಗ್ಗಳಿಕೆಗೆ ಮತ್ತೊಮ್ಮೆ ಪಾತ್ರರಾಗಿದ್ದಾರೆ. ಚೀನಾ ಮೂಲದ ಸಂಸ್ಥೆಯೊಂದು ನಡೆಸಿರುವ ಸಮೀಕ್ಷೆಯ ಪ್ರಕಾರ ಮುಖೇಶ್ ಅಂಬಾನಿ ವಿಶ್ವದ 15ನೇ ಅತಿ ದೊಡ್ಡ ಲಕ್ಷ್ಮೀ ಪುತ್ರರಾಗಿ ಹೊರ ಹೊಮ್ಮಿದ್ದಾರೆ. ಇದರ ಜತೆಗೆ ಭಾರತದಲ್ಲಿ ಸುಮಾರು 70 ಬಿಲಿಯನೇರ್ ಗಳಿದ್ದಾರೆ ಎಂದು ಸಂಸ್ಥೆ ಗುರುತಿಸಿದೆ.
ಭಾರತದಲ್ಲಿಯೇ ಅತಿ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮುಖೇಶ್ ಅಂಬಾನಿ ಒಟ್ಟು ಮೌಲ್ಯ 18 ಬಿಲಿಯನ್ ಡಾಲರ್ ನೊಂದಿಗೆ ವಿಶ್ವದ 41ನೇ ಅತಿ ಶ್ರೀಮಂತ ಎನಿಸಿದ್ದಾರೆ. ಅಮೆರಿಕದ ಬಿಲ್ ಗೇಟ್ಸ್ ವಿಶ್ವದ ಅತಿ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಇವರ ಒಟ್ಟು ಮೌಲ್ಯ 68 ಬಿಲಿಯನ್ ಡಾಲರ್ ಆಗಿದೆ.

ಭಾರತ ಮೂಲದ ಕುಬೇರ ಪುತ್ರ ಲಕ್ಷ್ಮೀ ಮಿತ್ತಲ್ ವಿಶ್ವದಲ್ಲೇ 49ನೆ ಸ್ಥಾನ ಪಡೆದು 17 ಬಿಲಿಯನ್ ಡಾಲರ್ ಒಡೆಯರಾಗಿದ್ದಾರೆ. ವಿಪ್ರೋ ಸಂಸ್ಥೆಯ ಅಜೀಂ ಪ್ರೇಮ್‌ಜಿ ಸನ್ ಫಾರ್ಮಸೆಕ್ಟಲ್ ಇಂಡಸ್ಟ್ರಿಯಸ್ ನ ದಿಲೀಪ್ ಸಿಂಘ್ವಿ ಕ್ರಮವಾಗಿ ಹದಿಮೂರೂವರೆ ಬಿಲಿಯನ್, ಕ್ರಮವಾಗಿ ಟಾಟಾ ಪುತ್ರರು 12 ಬಿಲಿಯನ್ ಡಾಲರ್ ಹಣ ಹೊಂದಿದ್ದಾರೆ.
ಎಸ್.ಪಿ.ಹಿಂದುಜಾ ಕುಟುಂಬದವರು 93ನೇ ಸ್ಥಾನ ಪಡೆದು, 12 ಬಿಲಿಯನ್ ಡಾಲರ್ ಹೊಂದಿದ್ದರೆ ವಾರನ್ ಬಫೆಟ್ 64 ಬಿಲಿಯನ್ ಡಾಲರ್ ಮೂಲಕ ವಿಶ್ವದ ಎರಡನೆ ಅತಿ ಶ್ರೀಮಂತ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಅಮ್ಯಾನ್ಸಿಯೋ ವಾರ್ಟೆಗಾ ಅವರು 60 ಬಿಲಿಯನ್ ಮೂಲಕ 3ನೇ ಸ್ಥಾನ ವಾರ್ಕೆಲ್ ಲ್ಯಾರಿ ಎಲಿಸೆನ್ ನಂತರದ ಸ್ಥಾನದಲ್ಲಿದ್ದಾರೆ.
2014ರ ಹರೂನ್ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಒಟ್ಟಾರೆ 70 ಬಿಲಿಯೇನರ್ ಗಳನ್ನು ಹೊಂದಿರುವ ಭಾರತ 5ನೇ ಸ್ಥಾನದಲ್ಲಿದೆ. 2013ರಲ್ಲಿ ಹೊಂದಿದ್ದ ಶ್ರೀಮಂತರ ಸಂಖ್ಯೆಗಿಂತ ಈ ವರ್ಷ 17 ಮಂದಿ ಸೇರ್ಪಡೆಗೊಂಡಿದ್ದಾರೆ. ಜರ್ಮನಿ, ಸ್ವಿಡ್ಜರ್ಲೆಂಡ್, ಫ್ರಾನ್ಸ್ ಹಾಗೂ ಜಪಾನ್ ದೇಶಕ್ಕಿಂತ ಭಾರತದಲ್ಲಿ ಸೂಪರ್ ಶ್ರೀಮಂತರು ಅಧಿಕವಾಗಿದ್ದಾರೆ.ಮುಂಬೈನಲ್ಲೇ 33 ಮಂದಿ ಬಿಲಿಯನೇರ್ ಗಳಿದ್ದಾರೆ. ನ್ಯೂಯಾರ್ಕ್ ನಲ್ಲಿ 84 ಜನರಿದ್ದು ಬಿಲಿಯನೇರ್ ಗಳ ರಾಜಧಾನಿಯೆನಿಸಿದೆ.
ಭಾರತದ ಸೂಪರ್ ಶ್ರೀಮಂತರ ಸರಾಸರಿ ಮೊತ್ತ 390 ಬಿಲಿಯನ್ ಡಾಲರ್ ಮೀರುತ್ತದೆ. ಯುಎಸ್ ನಲ್ಲಿ 481 ಬಿಲಿಯನೇರ್ ಗಳಿದ್ದರೆ ಚೀನಾದಲ್ಲಿ 358 ಬಿಲಿಯನೇರ್ ಗಳಿದ್ದಾರೆ. ಯುಕೆ, ಜಪಾನ್, ಸ್ವಿಡ್ಜರ್ಲೆಂಡ್, ಭಾರತ ಹಾಗೂ ರಷ್ಯಾದಲ್ಲಿ ಬಿಲಿಯನೇರ್ ಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ.(ಪಿಟಿಐ)


Click it and Unblock the Notifications
