Get Updates
Get notified of breaking news, exclusive insights, and must-see stories!

ಮೋದಿ ಸರಕಾರದಿಂದ ಮಧ್ಯಮ ವರ್ಗೀಯ ಆದಾಯ ತೆರಿಗೆದಾರರಿಗೆ ಸೂಪರ್ ಗಿಫ್ಟ್

ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ 2019ನೇ ಸಾಲಿನ ಮಧ್ಯಂತರ ಆಯವ್ಯಯ ಪತ್ರವನ್ನು ವಿತ್ತ ಸಚಿವ ಪಿಯೂಶ್ ಗೋಯೆಲ್ ಅವರು ಶುಕ್ರವಾರ (ಫೆಬ್ರವರಿ 01) ಸಂಸತ್ತಿನಲ್ಲಿ ಮಂಡಿಸಿದ್ದಾರೆ. ಪಿಯೂಶ್ ಹೇಳಿದ ಆದಾಯ ತೆರಿಗೆ ಲೆಕ್ಕಾಚಾರದ ಸಂಪೂರ್ಣ ವಿವರ ಇಲ್ಲಿದೆ.

ಜನರಿಗೆ ನೇರವಾಗಿ ಅನುಕೂಲವಾಗುವ ಆದಾಯ ತೆರಿಗೆ ಮಿತಿ ಹೆಚ್ಚಳ ಸೇರಿದಂತೆ ತೆರಿಗೆ ಭಾರ ಇಳಿಸುವ ನಿರೀಕ್ಷೆ ಈಡೇರಿದೆ. ವೃತ್ತಿಪರರ ತೆರಿಗೆ ದಾರ, ಸಣ್ಣ ತೆರಿಗೆದಾರರಿಗೆ ಅನುಕೂಲವಾಗಲು ಆದಾಯ ತೆರಿಗೆ ಇಲಾಖೆಯಿಂದ ಇ -ಸಹಯೋಗ ಯೋಜನೆ ಜಾರಿಗೊಳಿಸಲಿದೆ. ಈ ಬಾರಿ ಬಜೆಟ್ ನಲ್ಲಿ ತೆರಿಗೆ ಪಾವತಿ ಮಿತಿ ಏರಿಕೆಯಾಗಿದೆ. ತೆರಿಗೆ ಪಾವತಿ, ಪಾವತಿ ವಿಧಾನ ಮಾತ್ರ ಬದಲಾವಣೆ ಘೋಷಣೆಯಾಗಿದೆ.

Interim Union Budget 2019 LIVE: 5 ಲಕ್ಷ ರೂ. ವರೆಗೆ ತೆರಿಗೆ ವಿನಾಯಿತಿ.

* ಐಟಿ ರಿಟರ್ನ್ಸ್ ಎಲ್ಲಾ ವಿಧಾನಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದ್ದು, ಕೃತಕ ಬುದ್ಧಿಮತ್ತೆ(AI)ಬಳಸಿಕೊಂಡು ತೆರಿಗೆ ಪಾವತಿ ವ್ಯವಸ್ಥೆಯನ್ನು ಅಧಿಕಾರಿಗಳು ರಹಿತ, ಆನ್ ಲೈನ್ ವ್ಯವಸ್ಥೆಯಾಗಿ ಬದಲಾಯಿಸಲಾಗುತ್ತದೆ.

* 5 ಲಕ್ಷ ರು ತನಕ ತೆರಿಗೆ ಪಾವತಿಸಬೇಕಾಗಿಲ್ಲ.
* ಭವಿಷ್ಯ ನಿಧಿ ಹಾಗೂ ವಿಮೆ ಯಲ್ಲಿ ಹೂಡಿಕೆ ಮಾಡಿದರೆ 6.25 ಲಕ್ಷ ರು ತನಕ ತೆರಿಗೆ ವಿನಾಯಿತಿ ಇರುತ್ತದೆ.
* TDS ಅಡಿಯಲ್ಲಿ ಗೃಹಸಾಲದ ಮಿತಿ 1.5 ಲಕ್ಷರು ನಿಂದ 2 ಲಕ್ಷ ರುಗೆ ಏರಿಕೆ.
* ತೆರಿಗೆ ಬದಲಾವಣೆಯಿಂದ 3 ಕೋಟಿ ತೆರಿಗೆದಾರರಿಗೆ ಅನುಕೂಲ.

* ಸ್ಟಾಡರ್ಡ್ ಡಿಡಕ್ಷನ್ 40 ಸಾವಿರ ರು ನಿಂದ 50 ಸಾವಿರ ರು ಗೆ ಏರಿಕೆ.

ಮಧ್ಯಂತರ ಬಜೆಟ್ 2019: ಮೋದಿ ಸರ್ಕಾರದ ಕೊನೆ ಬಜೆಟ್ ಜನಪ್ರಿಯ ಯೋಜನೆಗಳ ಸಂಪೂರ್ಣ ಮಾಹಿತಿ..

ತೆರಿಗೆ ಹಿಂಪಡೆಯುವ (rebate) ಮಿತಿಯಲ್ಲಿ ಬದಲಾವಣೆ

ತೆರಿಗೆ ಹಿಂಪಡೆಯುವ (rebate) ಮಿತಿಯಲ್ಲಿ ಬದಲಾವಣೆ

* ತೆರಿಗೆದಾರ 2 ಕೋಟಿ ತನಕ ಆದಾಯವುಳ್ಳವರಿಗೆ ಎರಡು ಮನೆ ಮೇಲಿನ ಹೂಡಿಕೆಯನ್ನು ತೆರಿಗೆ ವಿನಾಯಿತಿಗೆ ಸಿಗಲಿದೆ.
* 5 ಲಕ್ಷ ರು ನಿಂದ 10 ಲಕ್ಷ ರು ತನಕ ಆದಾಯ ಹೊಂದಿರುವವರ ತೆರಿಗೆ ಶೇ 20.
* 50 ಲಕ್ಷ ದಿಂದ 1 ಕೋಟಿ ರು ವಾರ್ಷಿಕ ಆದಾಯ ಇರುವವರಿಗೆ ಶೇ10 ರಷ್ಟು ಸರ್ ಚಾರ್ಜ್
* ಕಡಿಮೆ ಆದಾಯ ಗಳಿಸುವ ಉದ್ಯೋಗಿಗಳ ವೈಯಕ್ತಿಕ ತೆರಿಗೆ ಹಿಂಪಡೆಯುವ (rebate) ಮಿತಿಯಲ್ಲಿ ಬದಲಾವಣೆ ಕಂಡು ಬಂದಿದೆ. ವಾರ್ಷಿಕವಾಗಿ 5 ಲಕ್ಷ ಆದಾಯ(Taxable Income) ಹೊಂದಿರುವವರಿಗೆ ಈ ಮೊತ್ತ 2,000 ರು ನಿಂದ 5,000 ರು ಗೆ ಏರಿಸಲಾಗಿದೆ.

* ಮನೆ ಬಾಡಿಗೆ ಭತ್ಯೆ ಮಿತಿ ಹೆಚ್ಚಳ: HRA ದರ 24,000 ರು ನಿಂದ 60,000 ರು ಗೆ ಏರಿಸಲಾಗಿದೆ.

* 1 ಕೋಟಿ ರು ಅಧಿಕ ಸೂಪರ್ ರಿಚ್ ಗ್ರಾಹಕರಿಗೆ ಶೇ 15ರಷ್ಟು ಸರ್ಚ್ ಚಾರ್ಜ್ ಏರಿಕೆ.

ಆರ್ಥಿಕ ವರ್ಷ

ಆರ್ಥಿಕ ವರ್ಷ

ಆರ್ಥಿಕ ವರ್ಷ: ಏಪ್ರಿಲ್ 01ರಿಂದ ಮಾರ್ಚ್ 31ರ ಅವಧಿ.
ತೆರಿಗೆ ಪಾವತಿ ವರ್ಷ: ಒಂದು ಆರ್ಥಿಕ ವರ್ಷ ಅವಧಿಯಲ್ಲಿ ತೆರಿಗೆ ಪಾವತಿಗೆ ಒಳಪಡುವ ಕಾಲ (assessment year)

* ತೆರಿಗೆ ದರವು ಸರ್ ಚಾರ್ಜ್, ಎಜುಕೇಷನ್ ಸೆಸ್, ಸೆಕಂಡರಿ ಹಾಗೂ ಉನ್ನತ ಶಿಕ್ಷಣ ಸೆಸ್ ನಿಂದ ಹೊರತುಪಡಿಸಲಾಗಿದೆ.

ಉದಾಹರಣೆ: 5 ಲಕ್ಷ ರುಗೂ ಹೆಚ್ಚಿನ ಆದಾಯವಿದ್ದವರಿಗೆ ಏಪ್ರಿಲ್ 2019 ರಿಂದ ಮಾರ್ಚ್ 31, 2020ರ ತನಕ ತೆರಿಗೆ ಪಾವತಿ ವರ್ಷವಾಗಿದೆ. ಜುಲೈ 31, 2019 ರ ತನಕ ಆದಾಯ ತೆರಿಗೆ ಪಾವತಿಗೆ ಅವಕಾಶವಿರುತ್ತದೆ. 2018-19 ರ assessment year ಇದಾಗಿರುತ್ತದೆ.

ಬಜೆಟ್ 2019 : ಪಿಂಚಣಿದಾರರಿಗಾಗಿ ಮೆಗಾ ಪೆನ್ಶನ್ ಸ್ಕೀಂ ಘೋಷಣೆ

ತೆರಿಗೆದಾರರು ಹಾಗೂ ಮಹಿಳೆಯರು

ತೆರಿಗೆದಾರರು ಹಾಗೂ ಮಹಿಳೆಯರು

Income Tax Slab

(in Rs.)

Tax Slab
0 to Rs 5,00,000 No tax
5,00,001 to 10,00,000 20%(Total income minus 5,00,00) +4% cess
10,00,001 above 1,00,000 +30% ((Total income minus 10,00,000) +4% cess
ಹಿರಿಯ ನಾಗರಿಕರು (60 ವರ್ಷದಿಂದ 80 ವರ್ಷ ತನಕ)

ಹಿರಿಯ ನಾಗರಿಕರು (60 ವರ್ಷದಿಂದ 80 ವರ್ಷ ತನಕ)

Income Tax Slab (in Rs.) Tax Slab
0 to Rs 5,00,000 No tax
5,00,001 to 10,00,000
20% of (Total income minus 5,00,000)+ 4% Cess
10,00,001 and above
Rs 1,00,000+30% of (Total income minus 10,00,000)+ 4% cess
ಹಿರಿಯ ನಾಗರಿಕರು (80 ವರ್ಷ ಅದಕ್ಕಿಂತ ಹೆಚ್ಚು)

ಹಿರಿಯ ನಾಗರಿಕರು (80 ವರ್ಷ ಅದಕ್ಕಿಂತ ಹೆಚ್ಚು)

Income Tax Slab (in Rs.) Tax Slab
0 to Rs 5,00,000 No tax
5,00,001 to 10,00,000 20%
Above 10,00,000 30%

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+