ಜಿಯೋಗೆ ಪೈಪೋಟಿ ನೀಡಲು ಐಡಿಯಾದಿಂದ ಹೊಸ 'ಐಡ್ಯಾ'
ಬೆಂಗಳೂರು, ಫೆಬ್ರವರಿ 19: ಟೆಲಿಕಾಂ ದರ ಸಮರ ಸ್ವಾರಸ್ಯಕರವಾಗಿದೆ. ಪ್ರೀಪೇಯ್ಡ್ ಯೋಜನೆಗಳ ರೀಚಾರ್ಜ್ ಕೊಡುಗೆಗಳು ಬಹುತೇಕ ದಿನನಿತ್ಯ ಬದಲಾಗುತ್ತಿದ್ದು, ಗ್ರಾಹಕರಿಗೆ ಭರಪೂರ ಅವಕಾಶಗಳು ಒದಗಿ ಬರುತ್ತಿವೆ. ಜಿಯೋ ಹಾಗೂ ಭಾರ್ತಿ ಏರ್ ಟೆಲ್ ಗೆ ಪೈಪೋಟಿ ನೀಡಲು ಐಡಿಯಾ ಹೊಸ ಯೋಜನೆ ಪ್ರಕಟಿಸಿದೆ.
ಮುಖ್ಯವಾಗಿ ಜಿಯೋ ನೀಡುತ್ತಿರುವ 98ರುಗಳ ಯೋಜನೆಗೆ ಪೈಪೋಟಿ ನೀಡಲು ಐಡಿಯಾ ಹೊಸ ಯೋಜನೆಯೊಂದನ್ನು ತನ್ನ ಗ್ರಾಹಕರಿಗೆ ನೀಡುತ್ತಿದೆ. ಐಡಿಯಾದ 109 ರೂಪಾಯಿಗಳ ಹೊಸ ಯೋಜನೆ ಜತೆಗೆ ಜಿಯೋ ನೀಡುತ್ತಿರುವ 98 ರು ಯೋಜನೆ ಹಾಗೂ ಏರ್ಟೆಲ್ ನ 93 ರೂಪಾಯಿಗಳ ಪ್ಲಾನ್ ಸ್ಪರ್ಧಿಸಬೇಕಿದೆ.

ಈ ಯೋಜನೆ ಸೀಮಿತ ಟೆಲಿಕಾಂ ವಲಯದ ಗ್ರಾಹಕರಿಗೆ ಮಾತ್ರ ಲಭ್ಯವಿರಲಿದೆ. ಕರ್ನಾಟಕ, ಬಿಹಾರ, ಜಾರ್ಖಂಡ್, ಗುಜರಾತ್, ಹರ್ಯಾಣ, ಆಂಧ್ರಪ್ರದೇಶ ಹಾಗೂ ತೆಲಂಗಾಣ ಗ್ರಾಹಕರಿಗೆ ಮಾತ್ರ ಲಭ್ಯವಾಗಲಿದೆ.
ಈ ಪ್ಲಾನ್ ನಲ್ಲಿ ಐಡಿಯಾ ಗ್ರಾಹಕರಿಗೆ 1ಜಿಬಿ ಡೇಟಾ, ಅನಿಯಮಿತ ವಾಯ್ಸ್ ಕಾಲ್ ಹಾಗೂ ಸಂದೇಶ ಸಿಗಲಿದೆ. 14 ದಿನಗಳ ವ್ಯಾಲಿಡಿಟಿ ಹೊಂದಿದೆ.ಇದರ ಜೊತೆಗೆ ಐಡಿಯಾ 149 ರೂಪಾಯಿ ಯೋಜನೆಯಲ್ಲೂ ಕೆಲವೊಂದು ಬದಲಾವಣೆ ಮಾಡಿದೆ. ಈಗ 149 ರೂಪಾಯಿ ಯೋಜನೆಯಲ್ಲಿ 1 ಜಿಬಿ ಡೇಟಾ ಜೊತೆ ಅನಿಯಮಿತ ಕರೆ ಸಿಗಲಿದೆ.












Click it and Unblock the Notifications