ಐಸಿಐಸಿಐ ಸಮೂಹದಿಂದಲೂ ಸಂಬಳ ಪಡೆಯುತ್ತಿದ್ದಾರ ಸೆಬಿ ಅಧ್ಯಕ್ಷೆ? ಕಾಂಗ್ರೆಸ್ ಆರೋಪವೇನು

ಸೆಕ್ಯುರಿಟಿಸ್ ಅಂಡ್ ಎಕ್ಸ್‌ಚೇಂಜ್‌ ಬೋರ್ಡ್‌ ಆಫ್ ಇಂಡಿಯಾ (ಸೆಬಿ) ಅಧ್ಯಕ್ಷೆ ಮಾಧವಿ ಪುರಿ ಬುಚ್, ಐಸಿಐಸಿಐ ಸಮೂಹದಿಂದ ನಿವೃತ್ತಿಯಾದ ಬಳಿಕವೂ 16.80 ಕೋಟಿ ರೂಪಾಯಿ ಸಂಬಳ ಪಡೆದಿದ್ದಾರೆ ಎಂದು ಕಾಂಗ್ರೆಸ್ ಸ್ಫೋಟಕ ಆರೋಪ ಮಾಡಿದೆ. ಕಾಂಗ್ರೆಸ್ ನಾಯಕ ಪವನ್ ಖೇರಾ ಮಾಡಿರುವ ಆರೋಪಕ್ಕೆ ಐಸಿಐಸಿಐ ಸ್ಪಷ್ಟನೆ ನೀಡಿದ್ದು, ಸೆಬಿ ಅಧ್ಯಕ್ಷರಿಗೆ ಸಂಬಳ ಕೊಟ್ಟಿಲ್ಲ ಎಂದು ಹೇಳಿದೆ.

ಐಸಿಐಸಿಐ ಸಮೂಹದಿಂದ ನಿವೃತ್ತಿಯಾಗಿ ಸೆಬಿ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಕೂಡ ಮಾಧವಿ ಪುರಿ ಬುಚ್ ಅವರು ಐಸಿಐಸಿಐ ಸಮೂಹದಿಂದ ಪ್ರತಿತಿಂಗಳು ಹಣ ಪಡೆಯುತ್ತಿದ್ದಾರೆ. 2017 ರಲ್ಲಿ ಸೆಬಿಗೆ ಸೇರಿದ ಸಮಯದಿಂದ ಇಂದಿನವರೆಗೆ ಐಸಿಐಸಿಐನಿಂದ ಮಾಧವಿ ಪುರಿ ಬಚ್ ಪಡೆದ ಒಟ್ಟು ಮೊತ್ತವು 16.8 ಕೋಟಿ ರೂ.ಗೆ ತಲುಪಿದೆ ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಆರೋಪಿಸಿದ್ದರು.

ICICI bank response to congress allegations On Sebi Chief Madhabi Puri

"ಒಂದು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವಾಗ, ಅಲ್ಲಿಂದ ಮಾತ್ರ ಸಂಬಳವನ್ನು ಪಡೆಯಬೇಕು. ಸೆಬಿ ಅಧ್ಯಕ್ಷೆಯಾಗಿ ಕೆಲಸ ಮಾಡುವಾಗ ಮಾಧವಿ ಪುರಿ ಅವರು, ಐಸಿಐಸಿಐ ಬ್ಯಾಂಕ್, ಪ್ರುಡೆನ್ಶಿಯಲ್ ಮತ್ತು ಇಎಸ್ಒಪಿಯಿಂದ 2017-2024 ರಿಂದ ನಿಯಮಿತವಾಗಿ ಸಂಬಳ ಪಡೆಯುತ್ತಿದ್ದಾರೆ. ಸೆಬಿ ಅಧ್ಯಕ್ಷೆಯಂತಹ ಉನ್ನತ ಸ್ಥಾನದಲ್ಲಿರುವವರು ಬೇರೆ ಕಡೆಯಿಂದ ಸಂಬಳ ಪಡೆಯುವುದು ಸೆಬಿಯ ಸೆಕ್ಷನ್ 54 ರ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ಪವನ್ ಖೇರಾ ಆರೋಪಿಸಿದ್ದರು.

ಆರೋಪ ನಿರಾಕರಿಸಿದ ಐಸಿಐಸಿಐ ಬ್ಯಾಂಕ್

ಕಾಂಗ್ರೆಸ್ ನಾಯಕನ ಆರೋಪಗಳಿಗೆ ಐಸಿಐಸಿಐ ಬ್ಯಾಂಕ್ ಪ್ರತಿಕ್ರಿಯೆ ನೀಡಿದ್ದು, ತಮ್ಮ ಮೇಲಿನ ಆರೋಪವನ್ನು ತಳ್ಳಿಹಾಕಿದೆ. ನಿವೃತ್ತಿಯ ಪ್ರಯೋಜನಗಳನ್ನು ಹೊರತುಪಡಿಸಿ ಬೇರೆ ಯಾವುದೇ ಸಂಬಳವನ್ನು ಕೊಟ್ಟಿಲ್ಲ, ಬ್ಯಾಂಕ್ ಅಥವಾ ಅದರ ಗುಂಪಿನ ಕಂಪನಿಗಳಿಂದ ಯಾವುದೇ ಇಎಸ್ಒಪಿಗಳನ್ನು ನೀಡಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಮಾಧವಿ ಪುರಿ ಅವರು ಮಾರ್ಚ್ 2022 ರಲ್ಲಿ ಸೆಬಿ ಅಧ್ಯಕ್ಷೆಯಾಗಿ ನೇಮಕವಾದರು. ಅದಕ್ಕೂ ಮೊದಲು ಅವರು ಏಪ್ರಿಲ್ 5, 2017 ರಿಂದ ಅಕ್ಟೋಬರ್ 4, 2021 ರವರೆಗೆ ಸೆಬಿಯ ಸಂಪೂರ್ಣ ಸಮಯದ ಸದಸ್ಯರಾಗಿದ್ದರು. 1989 ರಲ್ಲಿ ಐಸಿಐಸಿಐ ಬ್ಯಾಂಕ್‌ನಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಫೆಬ್ರವರಿ 2009 ರಿಂದ ಮೇ 2011ರವರೆಗೆ ಐಸಿಐಸಿಐ ಸಿಇಒ ಆಗಿ ಕಾರ್ಯ ನಿರ್ವಹಿಸಿದ್ದರು.

2017 ರಲ್ಲಿ ಸೆಬಿಗೆ ಸೇರಿದ ಸಮಯದಿಂದ ಇಂದಿನವರೆಗೆ ಐಸಿಐಸಿಐನಿಂದ ಬಚ್ ಪಡೆದ ಒಟ್ಟು ಮೊತ್ತವು 16.8 ಕೋಟಿ ರೂ.ಗೆ ತಲುಪಿದೆ ಎಂದು ಕಾಂಗ್ರೆಸ್ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿದೆ, ಅವಧಿಯಲ್ಲಿ ಸೆಬಿಯಿಂದ ಪಡೆದ ಆದಾಯದ 5.09 ಪಟ್ಟು ಅಧಿಕ ಎಂದು ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+