ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವಿಟ್ಟರ್ ಬಳಸಿ ಹಣ ರವಾನಿಸಿ: ಐಸಿಐಸಿಐ

By Mahesh
|
Google Oneindia Kannada News

ನವದೆಹಲಿ, ಜ.20: 'ಸ್ಮಾರ್ಟ್‌ ಸ್ಟಾರ್‌' ಖಾತೆ ಗ್ರಾಹಕ ಸ್ನೇಹಿಯಾಗಿ ಎನಿಸಿಕೊಂಡಿರುವ ಐಸಿಐಸಿಐ ಈಗ ತನ್ನ ಗ್ರಾಹಕರಿಗೆ ಮತ್ತೊಂದು ಸೌಲಭ್ಯ ಒದಗಿಸುತ್ತಿದೆ. ಜನಪ್ರಿಯ ಸಾಮಾಜಿಕ ಜಾಲ ತಾಣ, ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ಮೂಲಕ ಹಣ ರವಾನೆ ಮಾಡುವ ಅವಕಾಶ ನೀಡುತ್ತಿದೆ.

ಟ್ವಿಟ್ಟರ್ ಖಾತೆ ಬಳಸಿ ರಿಯಲ್ ಟೈಮ್ ಹಣ ರವಾನೆ, ಪ್ರೀಪೇಯ್ಡ್ ಮೊಬೈಲ್ ರೀಚಾರ್ಚ್ ಹಾಗೂ ಬ್ಯಾಂಕ್ ಬ್ಯಾಲೆನ್ಸ್ ಮಾಹಿತಿ ಪಡೆಯುವ ಸೌಲಭ್ಯವನ್ನು ಐಸಿಐಸಿಐ ತನ್ನ ಗ್ರಾಹಕರಿಗೆ ಒದಗಿಸಿದೆ.

ಐಸಿಐಸಿಐ ಬ್ಯಾಂಕಿನ ಅಧಿಕೃತ ಟ್ವಿಟ್ಟರ್ ಖಾತೆ(@ICICIBank) ಹಿಂಬಾಲಿಸಿ ನೋಂದಣಿ ಮಾಡಿಕೊಳ್ಳಬೇಕು. ನಂತರ ಮೇಲ್ಕಂಡ ಸೌಲಭ್ಯಗಳು ನೋಂದಾಯಿತ ಗ್ರಾಹಕರಿಗೆ ಸಿಗಲಿದೆ. [ಮೈನರ್‌ಗಳಿಗೂ ಐಸಿಐಸಿಐ ಉಳಿತಾಯ ಖಾತೆ]

icicibankpay ಎಂಬ ಹೆಸರಿನ ಈ ಯೋಜನೆ ಮೂಲಕ ಇನ್ನಷ್ಟು ಗ್ರಾಹಕ ಸ್ನೇಹಿಯಾಗಲು ಖಾಸಗಿ ವಲಯದ ಅತಿದೊಡ್ಡ ಬ್ಯಾಂಕ್ ಐಸಿಐಸಿಐ ನಿರ್ಧರಿಸಿದೆ. ಈ ರೀತಿಯ ಸೌಲಭ್ಯ ನೀಡುವ ಮೂಲಕ ಏಷ್ಯಾದಲ್ಲಿ ನಂ.1 ಹಾಗೂ ವಿಶ್ವದಲ್ಲಿ ನಂ.2 ಸ್ಥಾನಕ್ಕೆ ಬ್ಯಾಂಕ್ ಏರುತ್ತಿದೆ ಎಂದು ಬ್ಯಾಂಕಿನ ಕಾರ್ಯಕಾರಿ ನಿರ್ದೇಶಕ ರಾಜೀವ್ ಸಭರ್ ವಾಲ್ ಹೇಳಿದ್ದಾರೆ.

ICICI Bank account holders can use Twitter to transfer funds

ಯಾರು ಬಳಸಬಹುದು?: ನೋಂದಾಯಿಸಿದ ಮೊಬೈಲ್ ಫೋನ್ ಉಳ್ಳ ಐಸಿಐಸಿಐ ಉಳಿತಾಯ ಖಾತೆದಾರರೆಲ್ಲರೂ icicibankpay ಸೌಲಭ್ಯ ಪಡೆದುಕೊಳ್ಳಬಹುದು. ಹಣ ಪಡೆದುಕೊಳ್ಳುವವರು ಐಸಿಐಸಿಐ ಖಾತೆ ಹೊಂದಿರಲೇಬೇಕಾಗಿಲ್ಲ.

ಆದರೆ, ಹಣ ಸ್ವೀಕರಿಸುವವರು ಟ್ವಿಟ್ಟರ್ ಖಾತೆ ಇರಬೇಕು. ಹಣ ರವಾನೆ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದಂತೆ ಹಣ ಪಡೆಯುವವರಿಗೆ ಎಸ್ಎಂಎಸ್ ಹೋಗುತ್ತದೆ. ಅಲ್ಲಿಂದ ವೆಬ್ ಪುಟಕ್ಕೆ ರೀ ಡೈರೆಕ್ಟ್ ಆಗುತ್ತದೆ. [ಬೇರೆ ಬ್ಯಾಂಕ್ ಎಟಿಎಂಗೆ ಹೋಗೋ ಮುನ್ನ ಓದಿ]

ಎನ್ಇಎಫ್ ಟಿ (National Electronic Funds Transfer) ಅಥವಾ ಆರ್ ಟಿಜಿಎಸ್ (Real Time Gross Settlement) ಸದ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಮುಂದೆ ಐಎಂಪಿಎಸ್ (Immediate Payment Service) ಸೇವೆಯನ್ನು ಅಳವಡಿಸಲಾಗುವುದು ಎಂದು ಬ್ಯಾಂಕ್ ಹೇಳಿದೆ.

* ಹಣ ಪಡೆದುಕೊಳ್ಳುವವರು ಐಸಿಐಸಿಐ ಖಾತೆ ಹೊಂದಿರಬೇಕಾಗಿಲ್ಲ.
* NEFT ಅಥವಾ RTGS ಪ್ರಕ್ರಿಯೆ ಬಳಸಿದರೆ ಹಣ ಕಳಿಸುವವರಿಗೆ ಶುಲ್ಕ ವಿಧಿಸಲಾಗುತ್ತದೆ.
* ಹಣ ಪಡೆದುಕೊಳ್ಳುವವರಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ. [ಮಿತಿ ಮೀರಿದ ಎಟಿಎಂ ಬಳಕೆ ಕೈ ಕಚ್ಚಲಿದೆ]
* ಬೇರೆ ಬ್ಯಾಂಕಿನ ಖಾತೆ ಹೊಂದಿರುವವರು ಆ ಬ್ಯಾಂಕಿನ ಎಎಫ್ ಎಸ್ ಸಿ ಕೋಡ್ ಹಾಕಿ ಹಣವನ್ನು ಪಡೆದುಕೊಳ್ಳಬಹುದು.
* ಫೇಸ್ ಬುಕ್ ನಿಂದ ಹಣ ರವಾನೆ ಸೌಲಭ್ಯ ನೀಡಿ ಒಂದು ವರ್ಷವಾಗಿದ್ದು, ಈಗ 30,000 ಕ್ಕೂ ಅಧಿಕ ಸಕ್ರಿಯ ಬಳಕೆದಾರರಿದ್ದಾರೆ.(ಪಿಟಿಐ)

English summary
Customers of ICICI Bank can use their Twitter account for real-time fund transfers, prepaid mobile recharges and to check bank balance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X