ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇರೆ ಬ್ಯಾಂಕ್ ಎಟಿಎಂಗೆ ಹೋಗೋ ಮುನ್ನ ಓದಿ

By Mahesh
|
Google Oneindia Kannada News

Banks free to charge 'reasonable ATM fees': RBI
ಬೆಂಗಳೂರು, ಜ.3: ಬ್ಯಾಂಕಿನ ಎಟಿಎಂನಲ್ಲಿ ಗ್ರಾಹಕರು ಹಣ ಡ್ರಾ ಮಾಡಿದರೆ ನೀಡಬೇಕಾಗಿರುವ ಶುಲ್ಕದ ಪ್ರಮಾಣವನ್ನು ಆಯಾ ಬ್ಯಾಂಕುಗಳು ಸ್ವತಂತ್ರವಾಗಿ ನಿರ್ಧರಿಸಬಹುದಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಟಿಸಿದೆ. ಈ ಬಗ್ಗೆ ಇನ್ನೂ ಒಮ್ಮತದ ನಿರ್ಣಯ ಕೈಗೊಂಡಿಲ್ಲವಾದರೂ ಕೆಲ ದಿನಗಳಲ್ಲಿ ಬ್ಯಾಂಕುಗಳು ಒಂದು ನಿರ್ಧಾರಕ್ಕೆ ಬರುವ ನಿರೀಕ್ಷೆ ಇದೆ.

ಒಂದು ಬ್ಯಾಂಕಿನ ಗ್ರಾಹಕರು ಬೇರೊಂದು ಎಟಿಎಂನಲ್ಲಿ ದುಡ್ಡು ಡ್ರಾ ಮಾಡಿದರೆ ಬ್ಯಾಂಕಿನವರು ಇಷ್ಟು ಹಣವನ್ನ ಶುಲ್ಕವಾಗಿ ಪಾವತಿಸಬೇಕಾಗುತ್ತದೆ. ಹೀಗೆ ಪ್ರತಿ ಬಾರಿ ದುಡ್ಡು ಡ್ರಾ ಮಾಡಿದಾಗಲೂ ಬ್ಯಾಂಕಿಗೆ ಹೊರೆ ಬೀಳುತ್ತಲೇ ಹೋಗುತ್ತದೆ. ಹೀಗಾಗಿ, ಬ್ಯಾಂಕುಗಳಿಗೆ ದೊಡ್ಡ ಪ್ರಮಾಣದಲ್ಲಿ ನಷ್ಟವಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಹೀಗಾಗಿ, ತನ್ನ ವಹಿವಾಟಿನ ವೆಚ್ಚವನ್ನು ಗ್ರಾಹಕನೇ ಭರಿಸಲಿ ಎಂಬ ಚಿಂತನೆಗೆ ಆರ್.ಬಿ.ಐ. ಬಂದಿದೆ ಎಂದು ಆರ್ ಬಿಐ ಉಪ ಗವರ್ನರ್ ಕೆಸಿ ಚಕ್ರವರ್ತಿ ಹೇಳಿದ್ದಾರೆ.

ಸದ್ಯಕ್ಕೆ ಗ್ರಾಹಕರು ತಿಂಗಳಿಗೆ ಐದು ಬಾರಿ ಬೇರೆ ಎಟಿಎಂಗಳಲ್ಲಿ ಉಚಿತವಾಗಿ ವಹಿವಾಟು ಮಾಡುವ ಸೌಲಭ್ಯ ಹೊಂದಿದ್ದಾರೆ. ಆದರೆ, ಇನ್ಮುಂದೆ ಈ ಅವಕಾಶ ಸಿಗುವುದಿಲ್ಲ. ಪ್ರತಿ ಬಾರಿ ಬೇರೆ ಎಟಿಎಂಗಳಲ್ಲಿ ಟ್ರಾನ್ಸಾಕ್ಷನ್ ಮಾಡಿದಾಗಲೂ ಹೆಚ್ಚಿನ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಒಂದೊಂದು ಬ್ಯಾಂಕು ವಿಧಿಸುವ ಶುಲ್ಕ ಬೇರೆ ಬೇರೆ ಇರಬಹುದು. ಈ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ಜೊತೆ ಎಲ್ಲಾ ಬ್ಯಾಂಕುಗಳು ಸಮಾಲೋಚನೆ ನಡೆಸುತ್ತಿದ್ದು, ಶೀಘ್ರದಲ್ಲೇ ಒಮ್ಮತದ ನಿರ್ಧಾರಕ್ಕೆ ಬರಲಿವೆ. [ಡೆಬಿಟ್ ಕಾರ್ಡ್ ಬಳಕೆದಾರರ ಗಮನಕ್ಕೆ]

ಬ್ಯಾಂಕ್ ಗ್ರಾಹಕರು ಬೇರೆ ಬ್ಯಾಂಕಿನ ಎಟಿಎಂಗಳಲ್ಲಿ ತಿಂಗಳಿಗೆ ಐದು ಬಾರಿ ಯಾವುದೇ ಶುಲ್ಕವಿಲ್ಲದೇ ಹಣ ಡ್ರಾ ಮಾಡಲು ಅವಕಾಶ ಹೊಂದಿದ್ದಾರೆ. ಒಂದು ಬ್ಯಾಂಕಿನ ಗ್ರಾಹಕರು ಅದೇ ಬ್ಯಾಂಕಿನ ಎಟಿಎಂಗಳಲ್ಲಿ ಮಾತ್ರ ಹಣವನ್ನ ಡ್ರಾ ಮಾಡಿಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಬೇರೆ ಬ್ಯಾಂಕಿಗೆ ಹೋದರೆ ಹೆಚ್ಚಿನ ಶುಲ್ಕ ತೆರಬೇಕಾಗುತ್ತದೆ.[ಎಟಿಎಂ ಗ್ರಾಹಕರಿಗೆ ಬರೆ] (ಪಿಟಿಐ)

English summary
Amid growing clamour from banks to charge customers for transactions at ATMs to make them economically viable, RBI Deputy Governor K C Chakrabarty on Thursday said the regulator will have no objections if the lenders charge "reasonable fee" for such services.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X