• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಿತಿ ಮೀರಿದ ಎಟಿಎಂ ಬಳಕೆ ಕೈ ಕಚ್ಚಲಿದೆ

By Mahesh
|

ಬೆಂಗಳೂರು,ಡಿ.1 ಎಟಿಎಂ ಬಳಕೆ ಉಚಿತ ಎಂಬ ಸೌಲಭ್ಯ ಇನ್ಮುಂದೆ ಮರೀಚಿಕೆಯಾಗಲಿದೆ. ಎಟಿಎಂ ಬಳಕೆ ಎಷ್ಟು ಸರಿ ಉಚಿತವಾಗಿರಬಹುದು ಎಂಬುದನ್ನು ಆರ್ ಬಿಐ ನಿರ್ಧರಿಸಿದ್ದು, ಡಿ.1ರಿಂದ 5 ಬಾರಿಗಿಂತ ಹೆಚ್ಚು ಎಟಿಎಂ ಬಳಕೆ ಮಾಡಿದರೆ ಹೆಚ್ಚಿನ ಪ್ರಮಾಣದ ನಿರ್ವಹಣೆ ವೆಚ್ಚ ನೀಡಬೇಕಾಗುತ್ತದೆ.

ಆಟೋ ಮ್ಯಾಟಿಕ್ ಟೆಲ್ಲರ್ ಮಿಷನ್ ಎನ್ನುವುದಕ್ಕಿಂತ ಏನಿ ಟೈಮ್ ಮನಿ ಎಂದೇ ಚಿರಪರಿಚಿತ ಹಾಗೂ ಬಹು ಜನಪ್ರಿಯ ಬ್ಯಾಂಕ್ ಸೌಲಭ್ಯವಾಗಿದೆ. ಹಣ ವಿಥ್ ಡ್ರಾ ಪ್ರಮಾಣ ತಗ್ಗಿಸುವಂತೆ ಬ್ಯಾಂಕ್ ಸಂಘಟನೆಗಳು ಮನವಿ ಮಾಡಿರುವ ಹಿನ್ನೆಲೆಯಲ್ಲಿ ಆರ್ ಬಿಐ, ಎಟಿಎಂನಲ್ಲಿ 5 ಬಾರಿಗಿಂತ ಅಧಿಕ ವ್ಯವಹಾರ ನಡೆಸುವ ಗ್ರಾಹಕರಿಗೆ ತಿಂಗಳಿಗೆ 20 ರು ನಂತೆ ಹೆಚ್ಚಿನ ಮೊತ್ತ ಪಡೆಯಲಿದೆ. ನ.1ರಂದೇ ಅರ್ ಬಿಐ ಈ ಕುರಿತು ಸುತ್ತೋಲೆ ಹೊರಡಿಸಿದೆ. [ರಾಜ್ಯಾದ್ಯಂತ ಬ್ಯಾಂಕ್ ಮಷ್ಕರ]

ಡಿ.1 ರಿಂದ ಈ ಹೊಸ ನಿಯಮವನ್ನು ಎಚ್ ಡಿಎಫ್ ಸಿ, ಎಕ್ಸಿಸ್ ಬ್ಯಾಂಕ್ ಅಳವಡಿಸಿಕೊಳ್ಳಲಿದೆ. ಬೆಂಗಳೂರು, ಚೆನ್ನೈ, ಮುಂಬೈ,ನವದೆಹಲಿ,ಕೋಲ್ಕತ್ತಾ, ಹೈದರಾಬಾದ್ ನಲ್ಲಿ ಮೊದಲಿಗೆ ಹೊಸ ದರ ಜಾರಿಗೆ ಬರಲಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಮಾತ್ರ ತನ್ನ ಗ್ರಾಹಕರಿಗೆ ಎಟಿಎಂ ವ್ಯವಹಾರ(Financial ಅಥವಾ non-financial)ಕ್ಕೆ ನಿರ್ಬಂಧ ಹೇರುವುದಿಲ್ಲ ಎಂದು ಪ್ರಕಟಿಸಿದೆ. [ಬೇರೆ ಬ್ಯಾಂಕ್ ಎಟಿಎಂಗೆ ಹೋಗೋ ಮುನ್ನ ಓದಿ]

ಎಸ್ ಬಿಐ ಹೇಳಿಕೆ: ನಮ್ಮಲ್ಲಿರುವ ಬ್ಯಾಲೆನ್ಸ್ ಕಡಿಮೆಯಿದ್ದು, ಬೃಹತ್ ಸಂಖ್ಯೆಯಲ್ಲಿರುವ ಗ್ರಾಹಕರನ್ನು ನಿಭಾಯಿಸುವುದು ಕಷ್ಟಕರವಾಗಿದೆ.ಪ್ರತಿ ಬಾರಿ ಗ್ರಾಹಕರೊಬ್ಬರು ಎಟಿಎಂಗೆ ಹೋಗಿ ಎಷ್ಟೇ ವಹಿವಾಟು ನಡೆಸಲಿ ಬ್ಯಾಂಕಿಗೆ ತೆರಿಗೆ ಸೇರಿಸಿ ಸುಮಾರು 17 ರು ಖರ್ಚು ಬೀಳಲಿದೆ. ಎಂದು ಎಸ್ ಬಿಐ ಚೇರ್ಮನ್ ಅರುಂಧತಿ ಭಟ್ಟಾಚಾರ್ಯ ಹೇಳಿದ್ದಾರೆ. [ಎಸ್ ಬಿಐ ಎಟಿಎಂ ಬಳಕೆ ಮಿತಿ ಹೆಚ್ಚಳ]

ಆರ್ ಬಿಐ ಪ್ರತಿಕ್ರಿಯೆ : ಒಂದು ಬ್ಯಾಂಕಿನ ಗ್ರಾಹಕರು ಬೇರೊಂದು ಎಟಿಎಂನಲ್ಲಿ ದುಡ್ಡು ಡ್ರಾ ಮಾಡಿದರೆ ಬ್ಯಾಂಕಿನವರು ಇಷ್ಟು ಹಣವನ್ನ ಶುಲ್ಕವಾಗಿ ಪಾವತಿಸಬೇಕಾಗುತ್ತದೆ. ಹೀಗೆ ಪ್ರತಿ ಬಾರಿ ದುಡ್ಡು ಡ್ರಾ ಮಾಡಿದಾಗಲೂ ಬ್ಯಾಂಕಿಗೆ ಹೊರೆ ಬೀಳುತ್ತಲೇ ಹೋಗುತ್ತದೆ. ಹೀಗಾಗಿ, ಬ್ಯಾಂಕುಗಳಿಗೆ ದೊಡ್ಡ ಪ್ರಮಾಣದಲ್ಲಿ ನಷ್ಟವಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಹೀಗಾಗಿ, ತನ್ನ ವಹಿವಾಟಿನ ವೆಚ್ಚವನ್ನು ಗ್ರಾಹಕನೇ ಭರಿಸಲಿ ಎಂಬ ಚಿಂತನೆಗೆ ಆರ್.ಬಿ.ಐ. ಬಂದಿದೆ ಎಂದು ಆರ್ ಬಿಐ ಉಪ ಗವರ್ನರ್ ಕೆಸಿ ಚಕ್ರವರ್ತಿ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
As it was declared earlier by several banks, the day has finally come when more than 5 ATM transactions a month may cost you over Rs 20. The new rule has come into action from Monday, Dec 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more