ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ಪಿಯಿಂದ ಸ್ಮಾರ್ಟ್ ಪಾಕೆಟ್ ಪ್ರಿಂಟರ್ ಬಿಡುಗಡೆ

By Mahesh
|
Google Oneindia Kannada News

ಬೆಂಗಳೂರು, ಅಕ್ಟೋಬರ್ 06: ಎಚ್‍ಪಿ ಸಂಸ್ಥೆಯು ಸ್ಪ್ರಾಕೆಟ್ ಪೋರ್ಟೇಬಲ್ ಪ್ರಿಂಟಿಂಗ್ ಸಾಧನವನ್ನು ಮಾರುಕಟ್ಟೆಗೆ ಇತ್ತೀಚೆಗೆ ಪರಿಚಯಿಸಿದ್ದು, ಜನಪ್ರಿಯತೆ ಗಳಿಸುತ್ತಿದೆ. ನಿಮ್ಮ ಸ್ಮಾರ್ಟ್‍ಫೋನ್‍ನಲ್ಲಿ ಸೆರೆ ಹಿಡಿಯುವ ಫೋಟೋಗಳನ್ನು ಯಾವುದೇ ಸಂದರ್ಭದಲ್ಲಾದರೂ, ಎಲ್ಲಿ ಬೇಕಾದರೂ ಇನ್‍ಸ್ಟಂಟ್ ಪ್ರಿಂಟ್ ತೆಗೆಯಬಹುದು.

ಹಬ್ಬದ ಸೀಸನ್ ಆಗಿರುವ ಈ ಸಂದರ್ಭದಲ್ಲಿ ನೀವು ನಿಮ್ಮ ಪ್ರೀತಿಪಾತ್ರರಿಗೆ ಈ ಸ್ಪ್ರಾಕೆಟ್ ಅನ್ನು ಉಡುಗೊರೆಯಾಗಿ ನೀಡಬಹುದಾಗಿದೆ. ಈ ಎಚ್‍ಪಿ ಸ್ಪ್ರಾಕೆಟ್ ಸ್ಟೈಲಿಶ್ ಆಗಿದ್ದು ಅಂಗೈನಲ್ಲೇ ವರ್ಣರಂಜಿತವಾದ ಫೋಟೋಗಳನ್ನು ಪ್ರಿಂಟ್ ತೆಗೆಯುವ ಸಾಧನವಾಗಿದೆ.

ಥರ್ಮಲ್ ಪ್ರಿಂಟಿಂಗ್ ಇರಲಿದೆ. ಇದಕ್ಕೆ ಯಾವುದೇ ರೀತಿಯ ಕಾಟ್ರಿಜ್‍ಗಳ ಅಗತ್ಯ ಇರುವುದಿಲ್ಲ. ಎಚ್‍ಪಿ ಸ್ಪ್ರಾಕೆಟ್ ಝಿಂಕ್- ಅಂದರೆ ಝೀರೋ ಇಂಕ್ ಟೆಕ್ನಾಲಜಿಯನ್ನು ಹೊಂದಿರುತ್ತದೆ. ಹೀಗಾಗಿ ಇಂಕ್ ಖಾಲಿಯಾಗಲಿದೆ ಎಂಬ ಗೊಡವೆಯೇ ಇರುವುದಿಲ್ಲ ಅಥವಾ ಹೊಸ ಕಾಟ್ರಿಜ್‍ಗಳನ್ನು ಖರೀದಿಸಬೇಕೆಂಬ ತಲೆಬಿಸಿ ಇರುವುದಿಲ್ಲ.

HP launches Sprocket pocket-size photo printer

* ಯಾವುದೇ ಕೊಠಡಿ, ಯಾವುದೇ ಸ್ಥಳ-ಹೀಗೆ ಸ್ಲೀಕ್ ಅಂಡ್ ಸ್ಲಿಮ್ ಆಗಿರುವ ಫೋಟೋ ಪ್ರಿಂಟರ್ ಇದಾಗಿದ್ದು, ಸುಲಭವಾಗಿ ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದಾಗಿದೆ.

* ನಿಮ್ಮ ಸ್ಮಾರ್ಟ್‍ಫೋನ್ ಜತೆಗೆ ಇದನ್ನು ನಿಮ್ಮ ಜೇಬಿನಲ್ಲಿಟ್ಟುಕೊಳ್ಳಬಹುದಾಗಿದೆ. ಈ ಸ್ಪ್ರಾಕೆಟ್ ಅನ್ನು ಬ್ಲೂಟೂತ್ ಮೂಲಕ ನಿಮ್ಮ ಮೊಬೈಲ್ ಡಿವೈಸ್‍ಗೆ ಅತ್ಯಂತ ವೇಗವಾಗಿ ಕನೆಕ್ಟ್ ಮಾಡಿ ನಿಮ್ಮ ನೆಚ್ಚಿನ ಮತ್ತು ಇಷ್ಟವಾಗುವ ಫೋಟೋಗಳ ಪ್ರಿಂಟ್ ತೆಗೆಯಬಹುದಾಗಿದೆ.

*ಸ್ಪ್ರಾಕೆಟ್ ಆ್ಯಪ್- ಇದರ ಆ್ಯಪ್ ಮೂಲಕ ಫನ್ನಿಯಾದ ಫಿಲ್ಟರ್‍ಗಳು ಮತ್ತು ಸ್ಟಿಕರ್‍ಗಳೊಂದಿಗೆ ಫನ್ನಿಯಾದ ಚಿತ್ರಗಳನ್ನೂ ಪ್ರಿಂಟ್ ತೆಗೆಯಲು ಅವಕಾಶವಿದೆ.

* ಈ ಸ್ಪ್ರಾಕೆಟ್ ಪ್ರಿಂಟರ್‍ನಿಂದ ಹೊರಬರುವ ಪ್ರಿಂಟ್‍ಗಳು ಸ್ಮಡ್ಜ್-ಪ್ರೂಫ್, ವಾಟರ್- ರೆಸಿಸ್ಟಂಟ್ ಮತ್ತು ಟಿಯರ್-ರೆಸಿಸ್ಟಂಟ್ ಆಗಿರುತ್ತವೆ.

HP launches Sprocket pocket-size photo printer

* ಆಂಡಾಯ್ಡ್ ಮತ್ತು ಐಒಎಸ್ ಡಿವೈಸ್‍ಗಳಿಗೆ ಈ ಪ್ರಿಂಟರ್ ಅನ್ನು ಬಳಸಬಹುದಾಗಿದೆ.

* ಪವರ್ ಸಪ್ಲೈ- ಇಂಟರ್‍ನಲ್ ರೀಚಾರ್ಜೇಬಲ್ ಬ್ಯಾಟರಿಯನ್ನು ಒಳಗೊಂಡಿದೆ.

* 3 ಬಣ್ಣಗಳಲ್ಲಿ ಲಭ್ಯ:- ಕೆಂಪು, ಬಿಳಿ ಮತ್ತು ಕಪ್ಪು ಬಣ್ಣ.

* ಪ್ರಿಂಟ್ ಮಲ್ಟಿಪಲ್ ಫೈಲ್ ಟೈಪ್ಸ್:- ಬಿಎಂಪಿ, ಜಿಫ್, ಜೆಪಿಇಜಿ, ಪಿಎನ್‍ಜಿ, ಟಿಫ್(ಐಒಎಸ್‍ಗೆ ಮಾತ್ರ).

* ಪ್ರಿಂಟ್ ಕ್ವಾಲಿಟಿ: 313 x400 ಡಿಪಿಐ.

* ಡೈಮೆನ್ಷನ್ಸ್:- 116 x 75 x 23 ಎಂಎಂ(4.53 x 2.95 x 0.87 ಇನ್)

* ತೂಕ:- 0.172 ಕೆಜಿ(0.379 ಎಲ್‍ಬಿ).

ಬೆಲೆ ಮತ್ತು ಲಭ್ಯತೆ: ಎಚ್‍ಪಿ ಸ್ಪ್ರಾಕೆಟ್ ಫೋಟೋ ಪ್ರಿಂಟರ್ ಭಾರತದಲ್ಲಿ ಪ್ರಸ್ತುತ 8,999 ರೂಪಾಯಿಗಳಿಗೆ ಅಮೇಜಾನ್‍ನಲ್ಲಿ ಲಭ್ಯವಿದೆ.

English summary
HP has launched a new pocket-size photo printer – the HP Sprocket – that allows users to instantly print from their mobile phones. The device connects mobile phones via Bluetooth and uses Zink technology to print photographs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X