ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆನ್ ಲೈನ್ ನಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಹೇಗೆ?

By Mahesh
|
Google Oneindia Kannada News

ಬೆಂಗಳೂರು, ಜುಲೈ 19: ಜುಲೈ ತಿಂಗಳು ಬಂತೆಂದರೆ ತಿಂಗಳ ಸಂಬಳ ನಂಬಿಕೊಂಡು ಉದ್ಯೋಗದಲ್ಲಿರುವ ಮಂದಿಗೆ ಐಟಿ ರಿಟರ್ನ್ಸ್ ಫೈಲ್ ಮಾಡುವ ಚಿಂತೆ ಶುರುವಾಗುತ್ತದೆ. ಆದಾಯ ತೆರಿಗೆ ಕಟ್ಟಲು ಅನೇಕ ಸುಲಭ ವಿಧಾನಗಳಿವೆ. ಹೀಗಂತೂ ಆದಾಯ ತೆರಿಗೆ ಕಟ್ಟುವ ಅರ್ಜಿ ಅತ್ಯಂತ ಸರಳಗೊಳಿಸಲಾಗಿದೆ.

ವಾರ್ಷಿಕವಾಗಿ 5 ಲಕ್ಷ ರೂ.ಗಳಿಗಿಂತ ಹೆಚ್ಚಿನ ವರಮಾನವಿರುವ ತೆರಿಗೆ ಪಾವತಿದಾರರು ತಮ್ಮ ಆದಾಯ ವಿವರಗಳನ್ನು ವಿದ್ಯುನ್ಮಾನ ರೂಪದಲ್ಲಿ ಸಲ್ಲಿಸುವ ಆವಶ್ಯಕತೆಯಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಲವು ಬ್ಯಾಂಕುಗಳಿಗೆ ಇ ಪಾವತಿ ಸೌಲಭ್ಯ ಒದಗಿಸಲು ಮಾನ್ಯತೆ ನೀಡಿದೆ. ಆದರೆ, ಐಟಿ ರಿಟರ್ನ್ಸ್ ಮಾಡುವಾಗ ಸರಿಯಾದ ದಾಖಲೆಗಳನ್ನು ಕೊಂಡೊಯ್ಯದಿದ್ದರೆ ಕಷ್ಟ ಕಷ್ಟ.

ಆನ್ ಲೈನ್ ಮೂಲಕ ಇರಲಿ, ಅಥವಾ ಕಚೇರಿಗೆ ನೇರ ಹೋಗಿ ತೆರಿಗೆ ಕಟ್ಟುವುದಿರಲಿ ಕೆಲವು ಕಡ್ಡಾಯವಾದ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಆನ್ ಲೈನ್ ನಲ್ಲಿ ಆದಾಯ ತೆರಿಗೆ ಪಾವತಿ ಮಾಡುವವರಿಗೆ ಮಾರ್ಗದರ್ಶಿ ಇಲ್ಲಿದೆ...

Recommended Video

GST 2017: What Will Happen To Online Shopping After GST | Oneindia Kannada
ಯಾವ ಯಾವ ದಾಖಲೆಗಳು ಬೇಕು

ಯಾವ ಯಾವ ದಾಖಲೆಗಳು ಬೇಕು

* ಪ್ಯಾನ್ ಕಾರ್ಡ್ ನಂಬರ್
* Form 16 (ನಿಮ್ಮ ಕಚೇರಿಯಿಂದ ಕೇಳಿ ಪಡೆಯಿರಿ)
* ಬ್ಯಾಂಕ್ ಸ್ಟೇಟ್ ಮೆಂಟ್/ ಪಾಸ್ ಬುಕ್ (ಬ್ಯಾಂಕ್ ಠೇವಣಿ ಮೇಲೆ ವಿನಾಯಿತಿ ಲೆಕ್ಕಾಚಾರಕ್ಕೆ)
* ಬ್ಯಾಂಕ್ ಠೇವಣಿ ಅಲ್ಲದೆ ಉಳಿದ ಆದಾಯದ ಬಡ್ಡಿದರ ಮೇಲೆ ಸ್ಟೇಟ್ ಮೆಂಟ್
* ಬ್ಯಾಂಕಿನಿಂದ ಪಡೆದ TDS ಪ್ರಮಾಣ ಪತ್ರ (Form 26AS- TDSನಲ್ಲಿ ಜಮೆಯಾದ ತೆರಿಗೆ ಲೆಕ್ಕಾಚಾರದ ಬಗ್ಗೆ ತಿಳಿಸಲು ಅವಶ್ಯ)

ಇನ್ನಷ್ಟು ದಾಖಲೆಗಳು

ಇನ್ನಷ್ಟು ದಾಖಲೆಗಳು

* ಸೆಕ್ಷನ್ 80ಸಿ ವಿನಾಯತಿಗೆ LIC, NSC, PPF ಹೂಡಿಕೆ ಬಗ್ಗೆ ತಿಳಿಸಿ
* 80G ದಾನ ದತ್ತಿ ಮೂಲಕ ವಿನಾಯತಿಗೆ ರಸೀತಿ ನೀಡಿ
* ಗೃಹಸಾಲದ ಮೇಲೆ ನೀಡಿದ ಬಡ್ಡಿದರ ಲೆಕ್ಕಾಚಾರ ನೀಡಬೇಕು.
* ಮೆಡಿಕಲ್ ಬಿಲ್ (ಒರಿಜಿನಲ್), ಸ್ಟಾಕ್ ಮಾರುಕಟ್ಟೆ ಟ್ರೇಡಿಂಗ್ ಸ್ಟೇಟ್ ಮೆಂಟ್, ಗೃಹಸಾಲ, ಮುನ್ಸಿಪಲ್ ಕಾರ್ಪೊರೇಷನ್ ತೆರಿಗೆ ವಿವರ ನೀಡಿ ವಿನಾಯತಿ ಪಡೆಯಬಹುದು.

ಇ ಫೈಲಿಂಗ್ ನೋಂದಣಿ ಅಗತ್ಯ

ಇ ಫೈಲಿಂಗ್ ನೋಂದಣಿ ಅಗತ್ಯ

* ಆನ್ ಲೈನ್ ಮೂಲಕ ಹೊಸದಾಗಿ ಆದಾಯ ತೆರಿಗೆ ಪಾವತಿ ಮಾಡುವವರು ಆದಾಯ ತೆರಿಗೆ ಇಲಾಖೆ ವೆಬ್ ಸೈಟ್ (https://incometaxindiaefiling.gov.in/) ನಲ್ಲಿ ನೋಂದಣಿ ಮಾಡಿಕೊಳ್ಳಿ.
* ಹೊಸ ನಿಯಯದಂತೆ ನಿಮ್ಮ ಬ್ಯಾಂಕ್ ಖಾತೆ ಹಾಗೂ ಪ್ಯಾನ್ ಜತೆಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಜೋಡಣೆ ಮಾಡಿಕೊಳ್ಳಿ

* ರಿಟರ್ನ್ಸ್ ಸಲ್ಲಿಕೆಗೂ ಮುನ್ನ ಮೊದಲು 26AS/NSDL ಅಡಿಯಲ್ಲಿ ಯಾವ ತೆರಿಗೆ ಲಾಭವಿದೆ ಎಂಬುದನ್ನು ನೋಡಿಕೊಳ್ಳಬೇಕಾಗುತ್ತದೆ.

ವೆಬ್ ಸೈಟ್ ಗೆ ಲಾಗಿನ್ ಆಗಿ

ವೆಬ್ ಸೈಟ್ ಗೆ ಲಾಗಿನ್ ಆಗಿ

ಆದಾಯ ತೆರಿಗೆ ಇಲಾಖೆ ವೆಬ್ ಸೈಟ್ ಅಲ್ಲದೆ ಇನ್ನೂ ಕೆಲವು ನಂಬಿಕೆಗೆ ಅರ್ಹವಾದ ಮಾನ್ಯತೆ ಪಡೆದ ತೆರಿಗೆ ಪಾವತಿ ಮಾಡಬಲ್ಲ ವೆಬ್ ಸೈಟ್ ಗಳ ಪಟ್ಟಿ ಇಲ್ಲಿದೆ.* ವೆಬ್ ಸೈಟ್ ಗೆ ಲಾಗಿನ್ ಆಗಿ ಅಗತ್ಯ ದಾಖಲೆಗಳನ್ನು ಒದಗಿಸಿ ಚಲನ್ ಭರ್ತಿ ಮಾಡಿ.
* ಹಣ ಪಾವತಿ ನಂತರ CIN (challan identification number) ಜೊತೆಗೆ ಚಲನ್ ಸಿಗಲಿದೆ.
* CIN ಐಡಿ ಸಂಖ್ಯೆಯನ್ನು ರಿಟರ್ನ್ ಫೈಲ್ ಮಾಡುವಾಗ ಬಳಸಬೇಕಾಗುತ್ತದೆ

ಪಾವತಿ ಹೇಗೆ?

ಪಾವತಿ ಹೇಗೆ?

* ನಿಮ್ಮ ಹಣ ಸರಿಯಾಗಿ ಪಾವತಿಯಾಗಿದೆಯೇ ಎಂದು ಆದಾಯ ತೆರಿಗೆ ಇಲಾಖೆ ತಾಣದಲ್ಲಿ ಪರೀಕ್ಷಿಸಿಕೊಳ್ಳಿ.
* ನಿಮ್ಮ ಹೆಸರು, ಮನೆ ಅಡ್ರೆಸ್, ಸಂಪರ್ಕ ಸಂಖ್ಯೆ ಬದಲಾವಣೆ ಮಾಡಿದ್ದರೆ ಅದನ್ನು ಆದಾಯ ತೆರಿಗೆ ತಾಣದಲ್ಲಿ ನೋಂದಣಿ ಮಾಡಲು ಮಾತ್ರ ಮರೆಯಬೇಡಿ.

*ರೆಸಿಡೆಂಶ್ಶಿಯಲ್ ಸ್ಟೇಟಸ್: ಎನ್ ಆರ್ ಐ ಮತ್ತು ಎನ್ ಒ ಆರ್ ಗಳಿಗೆ ಇದು ಸಂಬಂಧಿಸಿರುತ್ತದೆ. ಕೆಲ ಸೌಲಭ್ಯಗಳನ್ನು ಪಡೆಯಲು ಇದು ಅನುಕೂಲಕಾರಿಯಾಗಬಹುದು. ಎಲ್ಲವನ್ನು ಫಿಲ್ ಮಾಡಿ ರಿಟರ್ನ್ಸ್ ಫೈಲ್ ಮಾಡಿ. ಈಗ ಮುಂಚಿನ ರೀತಿಯಲ್ಲಿ ತೆರಿಗೆ ಇಲಾಖೆ ಕಚೇರಿಗೆ ಸ್ವೀಕೃತಿ ಪತ್ರ ರವಾನಿಸಬೇಕಿಲ್ಲ. ಆಧಾರ್ ಲಿಂಕ್ ಇರುವುದರಿಂದ ಆನ್ಲೈನ್ ನಲ್ಲೆ ಅಪ್ಡೇಡ್ ಆಗಲಿದೆ.

English summary
The Central Board of Direct Taxes (CBDT) has made e-filing of income tax returns mandatory for all assesses whose annual earnings exceeded Rs 5 lakh. Here are a few steps and guideline that would help you make your income tax payments online.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X